Thursday, November 19, 2026

ಪ್ರಾಯೋಗಿಕ ಆವೃತ್ತಿ

ಪಹಲ್ಲಾಮ್‌ ದಾಳಿ | ಪ್ರತಿಕಾರಕ್ಕೆ ಮೊದಲು ಮೋದಿ- ಶಾ ರಾಜೀನಾಮೆ ಕೇಳಿ : ಸುಬ್ರಹ್ಮಣಿಯನ್ ಸ್ವಾಮಿ

ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಕೇವಲ ಪ್ರತೀಕಾರ ಕೇಳಿದರೆ ಸಾಲದು, ಅದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆ ಕೇಳಬೇಕು ಎಂದು ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.

ಮಂಗಳವಾರ, ಪಹಲ್ಯಾಮ್‌ನಲ್ಲಿ ನಡೆದ ದಾಳಿಯಲ್ಲಿ ಮೂವರು ಕನ್ನಡಿಗರು ಸೇರಿ 28 ಮಂದಿ ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆ ದಾಳಿ ನಡೆಸಿ, ಹತ್ಯೆಗೈದಿದೆ ಎಂದು ಹೇಳಲಾಗಿದೆ. ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಬೇಕೆಂಬ ಆಗ್ರಹಗಳೂ ಕೇಳಿಬರುತ್ತಿವೆ.

ಈ ನಡುವೆ, ಎಕ್ಸ್‌ನಲ್ಲಿ ಟ್ವಿಟ್ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, “ಪ್ರತೀಕಾರ ಕೇಳುವ ಬದಲು, ಮೊದಲು ಮೋದಿ-ಶಾ ಅವರ ರಾಜೀನಾಮೆಯನ್ನು ಕೇಳಬೇಕು. ಅವರು ಏನೆಂದು ಹಲವು ಬಾರಿ ಗೊತ್ತಾಗಿದೆ. ಚೀನಾ, ಪಾಕಿಸ್ತಾನ, ಮಾಲ್ಮೀಲ್ಸ್, ಬಾಂಗ್ಲಾದೇಶಗಳ ವಿಚಾರದಲ್ಲಿ ಇಬ್ಬರೂ ಶರಣಾಗಿದ್ದಾರೆ. ಅವರು ಭಾರತ ಮಾತೆಯನ್ನು ಅವಮಾನಿದ್ದಾರೆ ಎಂದು ಆರೋಪಿಸಿದ್ದಾರೆ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ