Thursday, September 19, 2024

ಪ್ರಾಯೋಗಿಕ ಆವೃತ್ತಿ

ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವ: ಸೆ.30ಕ್ಕೆ ಚಿತ್ರಕಲಾ ಪ್ರದರ್ಶನ

ನಾಡು ಕಂಡ ಅಪ್ರತಿಮ, ಅಮೋಘ ಚಿತ್ರ ಕಲಾವಿದ ಹಾಗೂ ಜಾನಪದ ತಜ್ಞ ಪಿ.ಆರ್. ತಿಪ್ಪೇಸ್ವಾಮಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನ, ಮಂಡ್ಯದ ಕರ್ನಾಟಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಮಂಡ್ಯನಗರದಲ್ಲಿ ಸೆ.30ರಂದು ಅಂದು ಬೆಳಗ್ಗೆ 11 ಗಂಟೆಗೆ ಸದ್ವಿದ್ಯಾ ಎಜುಕೇಷನ್ ಟ್ರಸ್ಟ್ ನಲ್ಲಿ ಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಪ್ರತಿಷ್ಟಾನದ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಚಿತ್ರಕಲಾ ಪ್ರದರ್ಶನವನ್ನು ಮಂಡ್ಯ ಜಿಲ್ಲಾ ಪಂಚಾಯತಿ ಸಿ.ಇ.ಓ. ಶೇಖ್ ತನ್ವಿ‌ರ್ ಆಸೀಫ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸದ್ವಿದ್ಯಾ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಹರೀಶ್ ಕುಮಾರ್.ಎಂ.ಕೆ, ಲೇಖಕಿ ನಾಗರೇವಕ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ್‌ ಭಾಗವಹಿಸುವರು ಎಂದರು.

ಅಂದು ಸಂಜೆ 5.30ಕ್ಕೆ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ.ಶಂಕರಗೌಡ ಶತಮಾನೋತ್ಸವದಲ್ಲಿ ನಡೆಯುವ ಪಿ.ಆರ್.ತಿಪ್ಪೇಸ್ವಾಮಿ ಜನ್ಮಶತಮಾನೋತ್ಸವ ಸಮಾರಂಭದ ಉದ್ಘಾಟನೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾಡುವರು. ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ವಹಿಸುವರು. ಚಿತ್ರಕಲಾ ಸ್ಪರ್ಧೆ, ಬಹುಮಾನ ವಿತರಣೆಯನ್ನು ಭಾರತೀಯ ರೆಡ್‌ ಕ್ರಾಸ್‌’ನ ಸಭಾಧ್ಯಕ್ಷರಾದ ಮೀರಾ ಶಿವಲಿಂಗಯ್ಯ ಮಾಡುವರು ಎಂದರು.

ಆಶಯ ನುಡಿಗಳನ್ನು ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ನುಡಿಯುವರು. ಅಂದು ನಡೆಯುವ ಪಿ.ಆರ್.ಟಿ.ಕುರಿತು ವಿಚಾರ ಮಂಡನೆಯಲ್ಲಿ ಸಾಹಿತಿ ತೈಲೂರು ವೆಂಕಟಕೃಷ್ಣ ಜಾನಪದ ಪಿ.ಆರ್.ಟಿ.ಬಗ್ಗೆ, ಕಲಾವಿದ ಕೆ.ಸಿ.ಮಹದೇವಸೆಟ್ಟಿ ಚಿತ್ರಕಲೆ, ಪಿ.ಆರ್.ಟಿ ಕುರಿತು ವಿಚಾರ ಮಂಡಿಸುವರು. ಪ್ರತಿಷ್ಠಾನದ ರುದ್ರಣ್ಣ ಹರ್ತಿಕೋಟೆ, ಹೆಚ್‌.ಎಂ.ಪರಮೇಶ್ವರಯ್ಯ, ಮಾನಸ, ರಾಬೂರಾವ್, ಚಿಕ್ಕಣ್ಣ, ಚಂದ್ರಶೇಖರಯ್ಯ ಉಪಸ್ಥಿತರಿರುವರು ಎಂದರು.

ಗೋ‍ಷ್ಠಿಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್ ಗೌಡ, ಪ್ರತಿಷ್ಟಾನದ ಕಾರ್ಯದರ್ಶಿ ಕೆ.ವಿ.ಮಹದೇವಶೆಟ್ಟಿ, ನಿರ್ದೇಶಕ ಮಾನಸ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!