Thursday, June 13, 2024

ಪ್ರಾಯೋಗಿಕ ಆವೃತ್ತಿ

ಅಷ್ಟಾಂಗ ಮಾರ್ಗದಿಂದ ನೆಮ್ಮದಿಯ ಜೀವನ: ಡಾ.ನರಸಿಂಹಮೂರ್ತಿ

ಜಗತ್ತು ದುಃಖದಿಂದ ಕೂಡಿದೆ. ಇದಕ್ಕೆ ಮನುಷ್ಯನ ಆಸೆಯೇ ಮೂಲ ಕಾರಣವಾಗಿದೆ. ಅಷ್ಟಾಂಗ ಮಾರ್ಗವನ್ನು ಪ್ರತಿಪಾದನೆ ಮಾಡಿ ಜೀವನದಲ್ಲಿ ಅಳವಡಿಸಿಕೊಂಡರೆ ದುಃಖವನ್ನು ದೂರ ಮಾಡಬಹುದು ಎಂದು ಮಿಮ್ಸ್ ನಿರ್ದೇಶಕ ಡಾ. ಪಿ ನರಸಿಂಹಮೂರ್ತಿ ತಿಳಿಸಿದರು.

ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಮಂಗಲ, ಮಮತೆಯ ಮಡಿಲು ಹಾಗೂ ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ವತಿಯಿಂದ ಮಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದ ಬುದ್ದ ಬೆಳಕು ಕಾರ್ಯಕ್ರಮದಲ್ಲಿ ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸರಿಯಾದ ನಡತೆ, ಸರಿಯಾದ ಜೀವನ ಕ್ರಮ, ಏಕಾಗ್ರತೆ, ಚಿಂತನೆ, ಜ್ಞಾನದಿಂದ ದುಃಖವನ್ನು ಹೋಗಲಾಡಿಸಿ ಸಂತೋಷದಿಂದ ಇರಬಹುದು .ಹಾಗಾಗಿ ಎಲ್ಲರೂ ಅಷ್ಟಾಂಗ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಾಹಿತಿ ಕೆ.ಪಿ ಮೃತ್ಯುಂಜಯ ಮಾತನಾಡಿ, ಮನುಷ್ಯರಿಗೆ ಜ್ಞಾನದ ಹಸಿವು ಜಾಸ್ತಿಯಾಗಬೇಕು. ಹೊಟ್ಟೆ ತುಂಬಿದರೆ ಜ್ಞಾನ ಬರುತ್ತದೆ ಅನ್ನುವುದು ವೈಜ್ಞಾನಿಕವಾಗಿ ಸರಿಯಾಗಿದ್ದರೂ ಜ್ಞಾನದ ಹಸಿವು ಎಲ್ಲರಲ್ಲಿಯೂ ಇರಬೇಕು ಎಂದರು.

ಇದೇ ಸಂದರ್ಭದಲ್ಲಿ ಸಂತೆಕಸಲಗೆರೆ ಬಸವರಾಜು ಅವರ ತಂಡದಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು.
ನಂತರ ಬಾಣಂತಿಯರು ಮತ್ತು ಅವರ ಕುಟುಂಬ ವರ್ಗದವರಿಗೆ ಅನ್ನದಾಸೋಹ ಕಾರ್ಯಕ್ರಮ ನಡೆಯಿತು. ಗಣ್ಯರಿಗೆ ಬುದ್ಧನ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು .

ಈ ಸಂದರ್ಭದಲ್ಲಿ ಡಾ.ಶಿವಕುಮಾರ್, ಮುಖಂಡರಾದ ಶಂಕರಲಿಂಗೇಗೌಡ, ಮಂಗಲ ಯೋಗೇಶ್, ಕೆ.ಪಿ ಅರುಣ ಕುಮಾರಿ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!