Sunday, November 22, 2026

ಪ್ರಾಯೋಗಿಕ ಆವೃತ್ತಿ

ಆಟೋರಿಕ್ಷಾ-ಬೈಕ್ ಕಳವು: ಮೂವರ ಬಂಧನ

ಮಳವಳ್ಳಿ ತಾಲ್ಲೂಕಿನ ಹಲಗೂರು ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆಟೋರಿಕ್ಷಾ ಮತ್ತು ಬೈಕ್‌ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಸುಮಾರು 15 ಲಕ್ಷ ರೂ.ಬೆಲೆ ಬಾಳುವ ಒಟ್ಟು 7 ಆಟೋರಿಕ್ಷಾಗಳು ಮತ್ತು 2 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳಾದ ಮಳವಳ್ಳಿ ಟೌನ್ ನಿವಾಸಿಗಳಾದ ಅರುಣ್,ಜಿ.ಆರ್.ಗಿರೀಶ್,ಪಿ‌.ಸಚ್ಚಿನ್ ಬಂಧಿತರು.

Autorickshaw-bike-theft-three nudikarnataka.com malavalli Autorickshaw-bike-theft-three

ಹಲಗೂರು ಪೊಲೀಸ್ ಠಾಣೆಯ ಪಿಎಸ್‌ಐ ಡಿ.ರವಿಕುಮಾರ್ ಮತ್ತು ಸಿಬ್ಬಂದಿಗಳು ಡಿ‌.5ರಂದು ರಾತ್ರಿ ಗಸ್ತಿನಲ್ಲಿರುವಾಗ 3 ಮಂದಿ ಯುವಕರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು.ಇವರನ್ನು ಕಂಡ ರವಿಕುಮಾರ್ ಹಾಗೂ ಸಿಬ್ಬಂದಿಗಳು ಪ್ರಶ್ನೆ ಮಾಡುತ್ತಿದ್ದಂತೆ ಮೂವರು ಸಮಂಜಸವಾದ ಉತ್ತರ ನೀಡದೆ ಓಡಿ ಹೋಗಲು ಪ್ರಯತ್ನಿಸಿದರು.ಆಗ ಪೋಲಿಸರು ಅವರನ್ನು ಬೆನ್ನಟ್ಟಿ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಈ ಮೂರು ಜನ ಆರೋಪಿಗಳು ಮಳವಳ್ಳಿ ಟೌನ್, ಮಳವಳ್ಳಿ ಗ್ರಾಮಾಂತರ, ಕನಕಪುರ, ಸಾತನೂರು, ಮೈಸೂರಿನ ಕೆ.ಆರ್, ನಜರ್‌ಬಾದ್, ಉದಯಗಿರಿ, ಪಿರಿಯಾಪಟ್ಟಣ, ಬೈಲುಕುಪ್ಪೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 4 ಪ್ಯಾಸೆಂಜರ್ ಆಟೋಗಳು,3 ಆಗೇಜ್ ಆಟೋಗಳು ಮತ್ತು 2 ಪಲ್ಸರ್ ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡರು.

ಮೂವರು ಆರೋಪಿಗಳಿಂದ ಅವರು ಕಳ್ಳತನ ಮಾಡಿದ್ದ 3 ಲಗೇಜ್ ಆಟೋಗಳು, 4ಪ್ಯಾಸೆಂಜರ್ ಆಟೋಗಳು ಹಾಗೂ 2 ಪಲ್ಸರ್ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಬೆಲೆ
15 ಲಕ್ಷ ರೂ.ಗಳಾಗಿರುತ್ತದೆ.

ಹಲಗೂರು ಪೊಲೀಸ್ ಠಾಣಾ ಅಧಿಕಾರಿಗಳು, ಮತ್ತು ಸಿಬ್ಬಂದಿಯವರ ಈ ಕಾರ್ಯವನ್ನು ಮಾನ್ಯ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಶ್ಲಾಘಿಸಿ ಪ್ರಶಂಸಿಸಿದ್ದಾರೆ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ