Saturday, November 21, 2026

ಪ್ರಾಯೋಗಿಕ ಆವೃತ್ತಿ

ವಾಹನ ಸವಾರರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಿ

ಮಂಡ್ಯ ನಗರದ ಕಲ್ಲಹಳ್ಳಿ ಬಡಾವಣೆಯ ಬಳಿ ಇರುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಮಳೆ ನೀರು ತುಂಬಿರುವ ಕಾರಣ ರಸ್ತೆಯಲ್ಲಿ ಚಲಿಸುವ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದ್ದು, ಕೂಡಲೇ ಸಂಬಂಧಪಟ್ಟ ಇಲಾಖೆಯವರು ನೀರು ನಿಲ್ಲದಂತೆ ಮಾಡಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕೆಂದು ಜನರು ಮನವಿ ಮಾಡಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಕಲ್ಲಹಳ್ಳಿ ಬಳಿ ಇರುವ ಈ ಪ್ರದೇಶದಲ್ಲಿ ರಸ್ತೆಯ ತುಂಬೆಲ್ಲ ಮಳೆಯ ನೀರು ನಿಂತಿದೆ. ರಸ್ತೆಯಲ್ಲಿ ವೇಗವಾಗಿ ಬರುತ್ತಿರುವ ವಾಹನಗಳು ಈ ಜಾಗಕ್ಕೆ ಬಂದಾಗ ನಿಧಾನವಾಗಿ ಚಲಿಸಬೇಕಾಗುತ್ತದೆ.

ಅದರಲ್ಲೂ ದೊಡ್ಡ ವಾಹನಗಳು ಬಂದರೆ ರಸ್ತೆಯಲ್ಲಿ ತುಂಬಿ ನಿಂತಿರುವ ಮಳೆಯ ನೀರನ್ನು ಬೇರೆ ದಾರಿಯಿಲ್ಲದೆ ಹಾರಿಸಿಕೊಂಡು ಹೋಗಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಪಕ್ಕದಲ್ಲಿ ಬರುವ ದ್ವಿಚಕ್ರ ವಾಹನ ಸವಾರರು ಮೇಲೆ ಕಲ್ಮಶ ನೀರು ಹಾರುತ್ತದೆ. ವಾಹನಗಳ ಹಿಂದೆ ಹೋದರೆ ಆ ವಾಹನಗಳ ಚಕ್ರದಿಂದ ನೀರು ಸಣ್ಣದಾಗಿ ಹಾರುವ ಕಲ್ಮಶ ನೀರು ದ್ವಿಚಕ್ರವಾಹನ ಸವಾರರ ಮುಖಕ್ಕೆ ಸಿಂಪಡಣೆಯಾಗುತ್ತದೆ.

ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ ಇಲಾಖೆ ಯವರು ರಸ್ತೆಯ ಎರಡು ಬದಿಗಳಲ್ಲಿ ಸಂಗ್ರಹವಾಗಿರುವ ಮಳೆ ನೀರನ್ನು ಸರಾಗವಾಗಿ ಹರಿದು ಹೋಗುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇದರಿಂದ ವಾಹನ ಸವಾರರಿಗೆ ಆಗುತ್ತಿರುವ ಕಿರಿಕಿರಿ ತಪ್ಪತ್ತದೆ.

ಪ್ರತಿ ಮಳೆಗಾಲದ ಸಂದರ್ಭದಲ್ಲಿಯೂ ಇಲ್ಲಿ ಸಣ್ಣದೊಂದು ಕೆರೆಯೇ ನಿರ್ಮಾಣವಾಗುತ್ತದೆ. ಈ ನೀರು ಹಲವು ದಿನಗಳಾದರೂ ಖಾಲಿಯಾಗುವುದಿಲ್ಲ. ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ಸರಿಪಡಿಸಬೇಕೆಂಬುದು ಇಲ್ಲಿಯ ಜನರ ಹಾಗೂ ವಾಹನ ಸವಾರರ ಒತ್ತಾಯವಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ