Friday, September 20, 2024

ಪ್ರಾಯೋಗಿಕ ಆವೃತ್ತಿ

ಪರಿಸರ ಉಳಿಸುವ ಬಗ್ಗೆ ಅರಿವು ಮೂಡಿಸುವುದು ಅಗತ್ಯ: ಡಾ.ಕುಮಾರ

ಪ್ರತಿಯೊಬ್ಬರೂ ಪ್ರಜ್ಞಾವಂತರಾಗಿ ಪರಿಸರವನ್ನು ಉಳಿಸಬೇಕು ಪ್ರತಿ ಮನೆಗಳಲ್ಲು ಕೂಡ ಚಿಕ್ಕ ಮಕ್ಕಳಿಗೆ ಪರಿಸರವನ್ನು ಉಳಿಸುವುದರ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಮಂಡ್ಯನಗರದ ಮಿಮ್ಸ್ ಇ ಎನ್ ಟಿ ವಿಭಾಗದ ಉಪನ್ಯಾಸ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಉದ್ಘಾಟನಾ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ಜಗತ್ತು ಸೌಂದರ್ಯ ವಾಗಿರಬೇಕು ಎಂದರೆ ಮೊದಲು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಚನ್ನಾಗಿ ಇಟ್ಟುಕೊಳ್ಳಬೇಕು ಕಾರಣ ಜಗತ್ತಿನ ಸೌಂದರ್ಯ ಅಡಗಿರುವುದು ಪರಿಶುದ್ಧವಾದ ಪರಿಸರದಲ್ಲಿ, ನಾವು ಸುಂದರವಾಗಿ ಇದ್ದರೆ ಸಾಲದು ನಮಗೆ ಗಾಳಿ, ಬೆಳಕು ನೀಡುವ ಪರಿಸರವನ್ನು ನಾಶವಾಗದಂತೆ ನೋಡಿಕೊಳ್ಳಬೇಕು ಎಂದರು.

ನಮ್ಮ ಮುಂದಿನ ಭವಿಷ್ಯ ಚನ್ನಾಗಿ ಇರಬೇಕು ಅಂದರೆ ಮೊದಲು ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ನಮ್ಮ ಸಂಸ್ಕೃತಿಯನ್ನು ನಶಿಸಿ ಹೋಗದಂತೆ ಕಾಪಾಡಿ ಕೊಳ್ಳಬೇಕು. ಸಂಸ್ಕೃತಿ ಹಾಗೂ ಪರಿಸರ ಉಳಿದರೆ ಮುಂದಿನ ಪೀಳಿಗೆಯ ಜೀವನದ ಕೂಡ ಸುಖಕರವಾಗಿರುತ್ತದೆ ಎಂದರು.

ಮನುಷ್ಯ ಎಷ್ಟು ಸ್ವಾರ್ಥಿ ಎಂದರೆ ಆತನ ದುರ್ಬುದ್ಧಿ ಯಿಂದಾಗಿ ಪರಿಸರ ನಾಶವಾಗುತ್ತಿದೆ ಇದೇ ಮುಂದುವರೆಯುತ್ತ ಹೋದರೆ ನಮ್ಮ ಮುಂದಿನ ಪೀಳಿಗೆಗೆ ಟಿವಿಗಳಲ್ಲಿ ತೋರಿಸಬೇಕಾಗುತ್ತದೆ ಇಂತಹ ಮರಗಳು ಇದ್ದವು ಇಂತಹ ಪ್ರಾಣಿಗಳು ಇದ್ದವು ಎಂದು ದಯವಿಟ್ಟು ಅಂತಹ ಒಂದು ಸಂದರ್ಭ ಸೃಷ್ಟಿ ಆಗದ ರೀತಿಯಲ್ಲಿ ನೋಡಿಕೊಂಡು ಪ್ರತಿಯೊಬ್ಬರು ಪರಿಸರವನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.

ಹುಟ್ಟುಹಬ್ಬ ಆಚರಣೆಯ ದಿನದಂದು ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡುವುದರ ಜೊತೆಗೆ ಒಂದು ಗಿಡ ನೆಟ್ಟು ಸಂಭ್ರಮಾಚರಣೆ ಮಾಡಿದರೆ ಪರಿಸರವನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಮಾನವ ತನ್ನ ಅಹಂ ನಿಂದ ಮರ ಗಿಡಗಳನ್ನು ನಾಶ ಮಾಡಿ ಮೂರ್ಖನಾಗದೇ ನಾನು ನಾನು ಎನ್ನುವ ಗರ್ವ ಬಿಟ್ಟು ಪರಿಸರ ರಕ್ಷಿಸುವಲ್ಲಿ ಮುಂದಾಗಬೇಕು ಎಂದು ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಏರ್ಪಡಿಸಿದ್ದ ಚಿತ್ರ ಕಲೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ ಎಚ್ ಎಲ್ ನಾಗರಾಜ್, ಮಿಮ್ಸ್ ನಿರ್ದೇಶಕ ಹಾಗೂ ಡೀನ್ ಡಾ.ಪಿ ನರಸಿಂಹಮೂರ್ತಿ, ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ ಶಿವಕುಮಾರ್, ವಿಜ್ಞಾನ ಸಂವಹನಕಾರ ಎಸ್ ಲೋಕೇಶ್, ಉಪ ಪರಿಸರ ಅಧಿಕಾರಿ ಭವ್ಯ, ಅಶ್ವಿನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!