Friday, September 20, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ಬಾಲ್ಯವಿವಾಹ- ಭ್ರೂಣಹತ್ಯೆ ತಡೆಗೆ ಜಾಗೃತಿ

ಬಾಲ್ಯ ವಿವಾಹ ಪದ್ಧತಿ ಎನ್ನುವುದು ಸಮಾಜಕ್ಕೆ ಪಿಡುಗಾಗಿದ್ದು ನಾವೆಷ್ಟೇ ವಿದ್ಯಾವಂತರಾಗಿ ವೈಜ್ಞಾನಿಕವಾಗಿ ಮುನ್ನುಗ್ಗಿದರು ಸಹ ಇನ್ನೂ ಬಾಲ್ಯ ವಿವಾಹಗಳು ಹಾಗೂ ಭ್ರೂಣ ಹತ್ಯೆಗಳು ಆಗುತ್ತಿವೆ ಇದನ್ನು ತೊಡೆದು ಹಾಕುವದು ಎಲ್ಲರ ಕರ್ತವ್ಯವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಕೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಕೆ ಆರ್ ಸಾಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕೆ ಆರ್ ಸಾಗರ್ ಇವರ ವತಿಯಿಂದ ಹಮ್ಮಿಕೊಂಡಿದ್ದ “ಬಾಲ್ಯ ವಿವಾಹ ತಡೆಗಾಗಿ ಹಾಗೂ ಭ್ರೂಣ ಹತ್ಯೆ ತಡೆಗಟ್ಟುವ ಕುರಿತು ಜಾಗೃತಿ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಬಾಲ್ಯ ವಿವಾಹದಿಂದ ವಯಸ್ಸಿಗೆ ಮೀರಿದ ಜವಾಬ್ದಾರಿ ಮದುವೆ ಆಗಿ ಕುಟುಂಬ ನಡೆಸಲು ಸಿದ್ದರಾಗಿರುವಾದಿಲ್ಲ ಹಾಗೂ ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ಅಕಾಲಿಕ ಮರಣ ಸಂಭವಿಸುವ ಸಾಧ್ಯತೆ ಇದೆ ಹಾಗೆ ಅತೀ ಕಡಿಮೆ ತೂಕದ ಮಗುವಿನ ಜನನ, ಶಿಕ್ಷಣದಿಂದ ವಂಚಿತರಾಗುವುದು ಮೂಢನಂಬಿಕೆಗೆ ಕುಟುಂಬದ ಮತ್ತು ಮಕ್ಕಳ ಜೀವನ ಹಾಳಾಗುತ್ತದೆ ಎಂದರು.

ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಕುರಿತಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸೌಮ್ಯ ಪ್ರತಿಜ್ಞಾವಿಧಿ ಬೋಧಿಸಿದರು.

ಈ ವೇಳೆ ದೈಹಿಕ ಶಿಕ್ಷಣ ಶಿಕ್ಷಕ ಮರಿಸ್ವಾಮಿ ಕೆ, ಸಹಶಿಕ್ಷಕರಾದ ಜಯಲಕ್ಷ್ಮಿ ಎಸ್, ಶೃತಿ ಎ ಎಲ್, ಪುಷ್ಪಲತಾ ಎಂ ಎಸ್ ಹಾಗೂ ಆಶಾ ಕಾರ್ಯಕರ್ತೆ ರೂಪ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!