Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೆನ್ನಿಗೆ ಚೂರಿ ಹಾಕಿದ ವ್ಯಕ್ತಿಗೆ ತಕ್ಕ ಪಾಠ ಕಲಿಸಿ: ಎಚ್.ಡಿ.ಕೆ

ನಮ್ಮ ಪಕ್ಷದ ಬೆನ್ನಿಗೆ ಚೂರಿ ಹಾಕಿರುವ ವ್ಯಕ್ತಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ‌.ಕುಮಾರಸ್ವಾಮಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಹೆಸರೇಳದೆ ವಾಗ್ದಾಳಿ ನಡೆಸಿದರು.

ಕೆ.ಆರ್.ಪೇಟೆ ಪಟ್ಟಣದ ಪುರಸಭಾ ಕಚೇರಿಯ ಪಕ್ಕದ ಮೈದಾನದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಬೃಹತ್ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಳೆದ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸೋಲು ಸೋಲೇ ಅಲ್ಲ. ಬಿಜೆಪಿಯವರು ಹಣದ ಹೊಳೆ ಹರಿಸಿ ಚುನಾವಣೆಯಲ್ಲಿ ಗೆದ್ದರು. ನನ್ನ ಆಡಳಿತಾವಧಿಯಲ್ಲಿ ಕೊಟ್ಟಂತಹ ಕಾರ್ಯಕ್ರಮಗಳು ಸಾಕಷ್ಟು.ಜಿಲ್ಲೆಗೆ 9 ಸಾವಿರ ಕೋಟಿ ಅನುದಾನವನ್ನು ಕೊಟ್ಟರೂ ಅನುಷ್ಠಾನ ಗೊಳಿಸುವಷ್ಟರಲ್ಲಿ ನನ್ನ ಸರ್ಕಾರವನ್ನು ತೆಗೆದರು. ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಬಾಗಿಲಿಗೆ ಹೋಗಿ ಆರ್ಥಿಕ ಸಹಾಯವನ್ನು ಮಾಡಿ ಸಾಂತ್ವನ ಹೇಳಿದ್ದು ಕುಮಾರಸ್ವಾಮಿ ಬಿಟ್ಟರೆ ಬೇರೆ ಪಕ್ಷಗಳ ನಾಯಕರು ಯಾರು ಸಹ ನೆರವಿಗೆ ಬರಲಿಲ್ಲ.

ತಾಯಿ ಹೃದಯದಿಂದ ನೊಂದ ಕುಟುಂಬಕ್ಕೆ ನೆರವನ್ನು ಕೊಟ್ಟೆ ವಿನಹ ಬೇರೆ ಉದ್ದೇಶವಿಲ್ಲ.ಆದ್ದರಿಂದ ಯಾರು ಎಂತಹ ಕಷ್ಟ ಬಂದರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಬೇಡಿ ಎಂದರು.

ಸಾಲ ಮನ್ನಾ ವಿಚಾರದಲ್ಲಿ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ನನಗೆ ಸಹಕಾರ ನೀಡಲಿಲ್ಲ‌.ಆದರೂ ರೈತರ ಸಾಲ ಮನ್ನಾ ಮಾಡಿದೆ.ಆಗ ನನ್ನನ್ನು ಷಡ್ಯಂತ್ರದಿಂದ ಅಧಿಕಾರದಿಂದ ಕೆಳಗಿಳಿಸಿದರು.ಅದರಿಂದ ನನಗೆ ಬೇಸರವಾಗಲಿಲ್ಲ. ನಾಡಿನ ಜನರ ಅಭಿವೃದ್ಧಿಗಾಗಿ ಪಂಚರತ್ನ ಯೋಜನೆಯನ್ನು ರೂಪಿಸಲಾಗಿದೆ ಎಂದರು.

nudikarnataka.com

ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರಾಜ್ಯದ ಎಲ್ಲಾ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುತ್ತೇನೆ.ವಯೋವೃದ್ಧರ ಮಾಶಾಸನವನ್ನು 5 ಸಾವಿರಕ್ಕೆ ಏರಿಸುತ್ತೇನೆ.ವಿಕಲನ ಚೇತನರು,ವಿಧವೆಯರ ಮಸಾಶನ ಏರಿಕೆ ಮಾಡುತ್ತೇನೆ.ಪಂಚರತ್ನ ಯಾತ್ರೆಯ ಎಲ್ಲಾ ಯೋಜನೆಗಳ ಅನುಷ್ಟಾನಕ್ಕೆ1.50 ಲಕ್ಷ ಕೋಟಿ ರೂಪಾಯಿಯ ಯೋಜನೆಯನ್ನು ರೂಪಿಸಲಾಗಿದೆ ಎಂದರು.

nudikarnatka.com

ಹೆಚ್‌ಟಿ.ಮಂಜು ಗೆಲ್ಲಿಸಿ
ಕೆ. ಆರ್.ಪೇಟೆ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿಯುತ್ತಿರುವ,ಪಕ್ಷದ ಕಾರ್ಯಕರ್ತರ ಕಷ್ಟ ಕಾರ್ಪಣ್ಯಗಳಿಗೆ ಸಹಾಯ ಮಾಡುತ್ತಾ ಸಮಾಜ ಸೇವೆ ಮಾಡಿಕೊಂಡು ಬರುತ್ತಿರುವ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಹೆಚ್.ಟಿ. ಮಂಜು ಅವರನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ರೈತರ ಪರ ಇರುವ ವ್ಯಕ್ತಿ ಕುಮಾರಣ್ಣ
ಮಾಜಿ‌ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ರೈತರ ಮೇಲೆ ಸದಾ ಅನುಕಂಪ ವ್ಯಕ್ತಪಡಿಸುವ, ಮನ ಮಿಡಿಯುವ ಜೀವ, ಹೃದಯವಂತ ಯಾರಾದರೂ ನಮ್ಮ ನಾಡಿನಲ್ಲಿ ಇದ್ದರೆ ಅವರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾತ್ರ. ನಾಡಿನ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಕೈಯನ್ನು ಬಲಪಡಿಸಲು ಕೃಷ್ಣರಾಜಪೇಟೆ ಕ್ಷೇತ್ರದ ನಮ್ಮ ಪಕ್ಷದ ಅಭ್ಯರ್ಥಿ ಹೆಚ್. ಟಿ‌.ಮಂಜು ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಸರ್ವಜನಾಂಗಕ್ಕೆ ಪಂಚರತ್ನ
ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ,ಪಂಚರತ್ನ ಯೋಜನೆ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ನಾಡಿನ ಸರ್ವ ಜನಾಂಗದ ಜನರಿಗೆ ರೂಪಿಸಿರುವ ಯೋಜನೆಯಾಗಿದೆ.ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಪಂಚರತ್ನ ಯೋಜನೆಯು ಸಹಾಕರಿಯಾಗಬೇಕೆಂಬುದೇ ಪಂಚರತ್ನ ಯೋಜನೆಯ ಗುರಿಯಾಗಿದೆ. ಶಿಕ್ಷಣ, ಆರೋಗ್ಯ,ವಸತಿ, ರೈತರು, ಮಹಿಳೆಯರು ಸಬಲೀಕರಣ ಆಗಲು ಪಂಚರತ್ನ ಯೋಜನೆಯ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಮತದಾರರು ಆಶೀರ್ವದಿಸಲಿ
ಕೃಷ್ಣರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್. ಟಿ.ಮಂಜು ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಅಭ್ಯರ್ಥಿಯಾಗಿ ಘೋಷಣೆ ಮಾಡಿರುವ ರಾಜ್ಯದ ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ.ರಾಜಕಾರಣದಲ್ಲಿ ದೇವೇಗೌಡ ಅಪ್ಪಾಜಿ ಅವರನ್ನು ಭೀಷ್ಮ ಎಂದು ಕರೆದರೆ ತಪ್ಪೇನಿಲ್ಲ.ಅವರ ಆಶೀರ್ವಾದದಿಂದ ಮಾಜಿ ಸಚಿವರಾದ ರೇವಣ್ಣ,ಸಿ ಎಸ್ ಪುಟ್ಟರಾಜಣ್ಣ,ಶಾಸಕರಾದ ಸಾರಾ ಮಹೇಶಣ್ಣ,ಬಾಲಕೃಷ್ಣಣ್ಣ ಹಾಗೂ ಜೆಡಿಎಸ್ ಯೂತ್ ಐಕಾನ್ ನಿಖಿಲ್ ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಪಕ್ಷದಲ್ಲಿ ನಡೆದುಕೊಳ್ಳುತ್ತೇನೆ.ತಾಲ್ಲೂಕಿನ ಮತದಾರರು ನನಗೆ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮತ ನೀಡಿ ಆಶೀರ್ವದಿಸಿದರೆ ಕುಮಾರಣ್ಣ ಅವರ ಕೈಬಲಪಡಿಸಿ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಕಾಯಾ ವಾಚಾ ಮನಸ್ಸಿನಿಂದ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

nudikarnatka.com

ಈ ಸಂದರ್ಭದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ಶೀಳನೆರೆ ಮೋಹನ್,ರಾಜ್ಯ ವಕ್ತಾರ ಅಶ್ವಿನ್ ಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಕಾರ್ಯಾಧ್ಯಕ್ಷ ಬಿ.ಎಂ.ರಾಮಚಂದ್ರನ್, ಎಂ.ಬಿ.ಹರೀಶ್, ಸೇರಿದಂತೆ ಹಲವು ಜೆಡಿಎಸ್ ಮುಖಂಡರು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!