Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರು ಅಭಿವೃದ್ಧಿಗೆ ಕೆಂಪೇಗೌಡರ ಶ್ರಮ : ಗೋಪಾಲಯ್ಯ

ವರದಿ: ಪ್ರಭು ವಿ.ಎಸ್

ಕೆಂಪೇಗೌಡರು ಮಾಡಿರುವ ಕೆಲಸದಿಂದ ಬೆಂಗಳೂರು ಅಭಿವೃದ್ಧಿ ಹೊಂದಲು ಸಾಧ್ಯವಾಯಿತು,
ಬೆಂಗಳೂರಿಗೆ ಯಾರೇ ಬಂದರು ಅಲ್ಲೇ ನೆಲಸಲು ಇಷ್ಟಪಡುತ್ತಾರೆ, ಅಂತಹ ಆಕರ್ಷಣೆ ಆಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕೆ.ಗೋಪಾಲಯ್ಯ ಹೇಳಿದರು.

ಮದ್ದೂರು ಪಟ್ಟಣದ ಶಿವಪುರ ಸತ್ಯಾಗ್ರಹ ಸೌಧ ಆವರಣದಲ್ಲಿ ಏರ್ಪಡಿಸಿದ್ದ ಮಂಡ್ಯ ಜಿಲ್ಲೆಯಿಂದ ಸಂಗ್ರಹಿಸಿರುವ ಮೃತ್ತಿಗೆ ಹಸ್ತಾಂತರಿಸುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು ಏರ್ ಪೊರ್ಟ್ ಬಳಿ 128 ಅಡಿ ಎತ್ತರದ ಕಂಚಿನ ಪ್ರತಿಮೆ ಹಾಗೂ 65 ವಿಸ್ತೀರ್ಣದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಿರುವುದು ಸರ್ಕಾರದ ಸಾಧನೆ. ಶಿವಪುರ ಸತ್ಯಾಗ್ರಹ ಅಭಿವೃದ್ಧಿ ನಮ್ಮ ಧ್ಯೇಯವಾಗಿದೆ, ಕೆಲವೇ ದಿನಗಳಲ್ಲಿ ಇಲ್ಲೇ ಸಭೆ ನಡೆಸಿ ಅಭಿವೃದ್ಧಿ ಪೂರಕ ಯೋಜನೆ ರೂಪಿಸಲಾಗುವುದು ಎಂದರು.

ರೇಷ್ಮೆ ಸಚಿವ ಕೆ ಸಿ ನಾರಾಯಣಗೌಡ ಮಾತನಾಡಿ, ಕೆಂಪೇಗೌಡ ಅವರ ಪ್ರತಿಮೆ ಅನಾವರಣ ಆಗುತ್ತಿರುವುದು, ನಮ್ಮೆಲ್ಲಗೆಲ್ಲ ಹೆಮ್ಮೆಯ ವಿಚಾರ. ಸತ್ಯಾಗ್ರಹ ಸೌಧದಲ್ಲಿ ಹೊಸ ಮೈಸೂರು ಸಿಲ್ಕ್ ಶಾಖೆ ತೆರೆಯಲಾಗುವುದು ಅದರೊಟ್ಟಿಗೆ ಜಿಲ್ಲೆಯ ಪ್ರಮುಖ ತಿನಿಸುಗಳ ಮಾರಾಟ ಮಳಿಗೆ ತೆರೆಯಲು ಶ್ರಮಿಸುವುದಾಗಿ ತಿಳಿಸಿದರು.

‌‌ಪುರುಷೋತ್ತಮಾನಂದ ಸ್ವಾಮೀಜಿ, ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್. ಜಿಲ್ಲಾಧಿಕಾರಿ ಗೋಪಾಲ ಕೃಷ್ಣ, ಜಿ.ಪಂ.ಸಿಇಓ ಶಾಂತಾ ಎಲ್.ಹುಲ್ಮನಿ, ಅಪರ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜು, ಬಿಜೆಪಿ ಮುಖಂಡರಾದ ಎಸ್.ಪಿ.ಸ್ವಾಮಿ, ಡಾ.ಸಿದ್ದರಾಮಯ್ಯ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!