Tuesday, September 17, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರು-ಮೈಸೂರು ದಶಪಥ ಹೆದ್ಧಾರಿಯಲ್ಲಿ ಟೋಲ್ ವಿರೋಧಿಸಿ ಪ್ರತಿಭಟನೆ

ಬೆಂಗಳೂರು-ಮೈಸೂರು ದಶಪಥ ಹೆದ್ಧಾರಿಯಲ್ಲಿ ಟೋಲ್ ವಸೂಲಾತಿ ಮಾಡಲು ರಾಷ್ರ್ಟೀಯ ಹೆದ್ಧಾರಿ ಪ್ರಾಧಿಕಾರ ಸಜ್ಜಾಗಿತ್ತು. ಈ ಬಗ್ಗೆ ಪ್ರಾಧಿಕಾರವು ಪೊಲೀಸ್ ಭದ್ರತೆ ಮತ್ತು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿಯನ್ನೂ ಸಲ್ಲಿಸಿತ್ತು.

ತೀವ್ರ ವಿರೋಧದ ಮಧ್ಯೆ ಬೆಂಗಳೂರು-ಮೈಸೂರು ಎಕ್ಸಪ್ರೆಸ್ ಹದ್ದಾರಿಯಲ್ಲಿ ಇಂದಿನಿಂದ ಟೋಲ್ ವಸೂಲಿ ಆರಂಭವಾಗಿದೆ. ಹೀಗಾಗಿ ಟೋಲ್ ಸಂಗ್ರಹಣೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಬೆಂಗಳೂರಿನ ದಕ್ಷಿಣ ಕ್ಷೇತ್ರದ ಕಣಮಿಣಕಿ (ಬಿಡದಿ ಸಮೀಪ)  ಪ್ರತಿಭಟನೆಗೆ ಸಜ್ಜಾಗಿ ಪ್ರತಿಭಟನೆ ನಡೆಸಿವೆ. ಪ್ರತಿಭಟನೆಗೆ ಮುಂದಾದ ಕನ್ನಡ ಪರ ಸಂಘಟನೆಗಳನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರತಿಭಟನೆಯಲ್ಲಿ  ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ನವನಿರ್ಮಾಣ ವೇದಿಕೆ, ಕನ್ನಡಿಗರ ರಕ್ಷಣಾ ವೇದಿಕೆ, ಕರುನಾಡ ಸೇನೆ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

ಪ್ರತಿಭಟನೆ ನಡೆಯುವ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೊಳ್ಳುತ್ತಿದ್ದಾರೆ.  ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಟೋಲ್ ಪ್ಲಾಜಾಗಳಿಗೆ ಭದ್ರತೆ ಒದಗಿಸಿದ್ದಾರೆ.

ಸದ್ಯ ವಿಧಿಸಲಾಗಿರುವ ದರ ದುಬಾರಿ ಆಗಿದ್ದು, ಪರಿಷ್ಕರಿಸಬೇಕು ಎಂದು ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿತ್ತು. ಆದರೆ, ದರ ಇನ್ನೂ ಪರಿಷ್ಕರಣೆ ಆಗಿಲ್ಲ. ಸರ್ವಿಸ್ ರಸ್ತೆ ಇನ್ನೂ ಆ ಭಾಗದಲ್ಲಿ ಮುಗಿದ್ದಿಲ್ಲ, ಮೂಲಭೂತ ಸೌಕರ್ಯಗಳನ್ನು ಯಾವುದೇ ರೀತಿಯಲ್ಲಿ ಕಲ್ಪಿಸಿಕೊಟ್ಟಿಲ್ಲ, ಮೊದಲು ಇವುಗಳ ಸೌಲಭ್ಯ ಕೊಡಿ ಎನ್ನುವುದು ಮುಖ್ಯ ಬೇಡಿಕೆಯಾಗಿದೆ. ಈ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ, ಉಗ್ರ ರೀತಿಯ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.

ಸ್ಥಳೀಯರಿಗೆ ಇದರಿಂದ ತುಂಬಾ ತೊಂದರೆಯಾಗಿದೆ, ಈ ರಸ್ತೆಯನ್ನು ನೆಚ್ಚಿಕೊಂಡು ಆ ಭಾಗದ ಜನರು ಜೀವನ ನಡೆಸುತ್ತಿದ್ದರು. ಪ್ರತಿದಿನ ನಾವು ಟೋಲ್ ಕೊಟ್ಟು ಓಡಾಡುವುದಕ್ಕೆ ಆಗುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು-ಮೈಸೂರು ದಶಪಥ ಹೆದ್ಧಾರಿಯ  ಸುಂಕ ವಸೂಲಾತಿ ಬಗ್ಗೆ  ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯನ್ನು ಜನರ ತೆರಿಗೆಯಿಂದಲೇ ನಿರ್ಮಾಣ ಮಾಡಿರುವುದರಿಂದ ಈಗ ಟೋಲ್ ನ್ನು ಏಕೆ ವಿಧಿಸುತ್ತಿದ್ದಾರೆ ಎಂದು ತಮ್ಮ #justasking ಎಂಬ ಹ್ಯಾಷನಡಿ ಸರಣಿ ಟ್ವೀಟ್ ಮಾಡಿ ಬೆಂಗಳೂರು-ಮೈಸೂರು ದಶಪಥ ಹೆದ್ಧಾರಿಯಲ್ಲಿ ವಿಧಿಸಲಾಗುತ್ತಿರುವ ಟೋಲ್ ದರವನ್ನು ವಿರೋಧಿಸಿದ್ದಾರೆ.

“>

ಕಳೆದ ಭಾನುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಂದ ಎಕ್ಸ್‌ಪ್ರೆಸ್ ಹೈವೇ ಉದ್ಘಾಟನೆ ಮಾಡಿದ್ದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!