Saturday, November 21, 2026

ಪ್ರಾಯೋಗಿಕ ಆವೃತ್ತಿ

ಬೆಂಗಳೂರು – ಮೈಸೂರು ಹೈವೇ : ಸಂಚರಿಸದೇ ಇದ್ರೂ ಪಾಸ್ಟ್ ಟ್ಯಾಗ್ ನಲ್ಲಿ ಹಣ ಕಟ್ಟಾಗುತ್ತೇ…?

ಕ್ರೆಡಿಟ್ ವಾರ್, ಸರ್ವೀಸ್​ ರಸ್ತೆ ಗಲಾಟೆ, ಟೋಲ್ ಹೈಡ್ರಾಮಾ, ಮಳೆ ನೀರಿನ ಅವಾಂತರ ಹೀಗೆ ಹೆದ್ದಾರಿಗೆ ಗುದ್ದಲಿ ಪೂಜೆ ಮಾಡಿದಾಗಿಲಿಂದಲೂ ಒಂದಿಲ್ಲೊಂದು ಗಲಾಟೆ ನಡೆಸುತ್ತಿರುವ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಈಗ ಮತ್ತೊಂದು ವಿವಾದ ಬೆಳಕಿಗೆ ಬಂದಿದೆ. ಅದೇನೆಂದರೆ ರಸ್ತೆಯಲ್ಲಿ ಓಡಾಡದಿದ್ರೂ ಫಾಸ್ಟ್ ಟ್ಯಾಕ್ ನಿಂದ ವಾಹನ ಮಾಲೀಕನ ಖಾತೆಯಿಂದ ಹಣ ಕಡಿತವಾಗಿದೆ.

ದುಬಾರಿ ಶುಲ್ಕದ ವಿರುದ್ಧ ವಾಹನ ಸವಾರರು ಸಿಡಿದೆದ್ದಿದ್ದರು. ಆದ್ರೆ ಈಗ ರಸ್ತೆಯಲ್ಲಿ ಸಂಚರಿಸದೇ ಇದ್ರೂ ಫಾಸ್ಟ್​ಟ್ಯಾಗ್​ನಲ್ಲಿ ದುಡ್ಡು ಕಟ್ಟಾಗುತ್ತಿದೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರು-ಮೈಸೂರು ಫ್ಲೈ ಓವರ್​​ಗೆ ಹೋಗದೇ ಇದ್ರೂ, ಹೈವೇಯಲ್ಲಿ ಜರ್ನಿ ಮಾಡದೇ ಇದ್ರೂ, ವೆಹಿಕಲ್ ಓನರ್​​ಗಳಿಗೆ ಶಾಕ್ ತಟ್ತಿದೆಯಂತೆ. ಸಂಚಾರ ಮಾಡದೇ ಇದ್ರೂ, ಹೆದ್ದಾರಿ ಲೆಕ್ಕದಲ್ಲಿ ಹಣ ಕಟ್ ಆಗ್ತಿದೆ ಅಂತ ಜನ ಗೋಳಾಡ್ತಿದ್ದಾರೆ.

ರಾಮನಗರದ ಚೆನ್ನಿಗರಾಜು ಎಂಬುವವರು ಮಾರುತಿ ವ್ಯಾಗನಾರ್​ ಕಾರು ಹೊಂದಿದ್ದಾರೆ. ಅವರು ಈತನಕ ಒಮ್ಮೆಯೂ ಎಕ್ಸ್​ಪ್ರೆಸ್​ ಹೈವೇಯಲ್ಲಿ ಜರ್ನಿ ಮಾಡಿಲ್ಲ. ಆದ್ರೆ, ಮಾರ್ಚ್​ 24ರ ರಾತ್ರಿ ಅವರ ಫಾಸ್ಟ್​ಟ್ಯಾಗ್​ನಿಂದ 135 ರೂ. ಕಡಿತವಾಗಿದೆ. ಕಣಿಮಿಣಿಕೆ ಟೋಲ್​ ಫ್ಲಾಜಾದಲ್ಲಿ ಹೋಗಿ ಚೆಕ್ ಮಾಡಿಸಿದ್ರೂ ಅಂದು ಗಾಡಿ ಸಂಚರಿಸಿದ ದಾಖಲೆ ಇಲ್ಲ. ಆದ್ರೂ ಹಣ ಹೇಗೆ ಕಟ್ಟಾಯ್ತು ಅಂದ್ರೆ ಅದಕ್ಕೆ ಟೋಲ್​ ಸಿಬ್ಬಂದಿ ಬಳಿ ಉತ್ತರ ಕೊಡ್ತಿಲ್ಲವಂತೆ.

ಚನ್ನಿಗರಾಜು ಮಾತ್ರವಲ್ಲ ರಾಮನಗರ ಮೂಲದ ಶಿವಸ್ವಾಮಿ,‌ ಪ್ರಭಾಕರ್ ಹಾಗೂ ಮಂಡ್ಯ ಮೂಲದ ತ್ಯಾಗರಾಜು ಅವರ ಫಾಸ್ಟ್​​ಟ್ಯಾಗ್​​ನಿಂದಲೂ ಸುಖಾಸುಮ್ಮನೆ ಹಣ ಕಟ್​​ ಆಗಿದೆ. ಮೊದಲೇ ದುಬಾರಿ ಟೋಲ್ ಸುಂಕ ಕಟ್ಟುತ್ತಿದ್ದೇವೆ. ಅದರ ಜೊತೆಗೆ ಟೋಲ್ ಸಿಬ್ಬಂದಿ ವಾಹನ ಸವಾರರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಒಟ್ಟಾರೆ, ದಶಪಥ ಹೆದ್ದಾರಿಯಲ್ಲಿ ಒಮ್ಮೆ ಪ್ರಯಾಣ ಮಾಡಿದ್ರೆ, 4 ಬಾರಿ ಟೋಲ್​ ಹಣ ಕಟ್ ಆಗ್ತಿದೆ ಅನ್ನೋ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಆದ್ರೆ ಈಗ, ಬೆಂಗಳೂರು-ಮೈಸೂರು ಹೈವೇಯಲ್ಲಿ ಸಂಚಾರ ಮಾಡ್ದೇ ಇದ್ರೂ, ಹಣ ಕಟ್ ಆಗ್ತಿದೆ. ವಾಹನ ಸವಾರರ ರೋಷಾಗ್ನಿ ಸ್ಫೋಟವಾಗುವ ಮೊದಲು, NHAIಅಧಿಕಾರಿಗಳು ಈ ಸಮಸ್ಯೆ ಸರಿಪಡಿಸಬೇಕಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ