ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಹೋಬಳಿಯ ಬೆಂಡರವಾಡಿ ಗ್ರಾಮದ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಂತೆ ಅಗ್ರಹಿಸಿ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಂಡರವಾಡಿ ಗ್ರಾ ಪಂ ಗೆ ಪಂಚಾಯತಿ ಅಧಿಕಾರಿನೇ ಇರಲಿಲ್ಲ. ಇದರ ಬಗ್ಗೆ ಕಾರಣ ಕೇಳಿ ಪಂಚಾಯತಿ ಅಧಿಕಾರಿ, ತಾಲ್ಲೂಕು ಅಧಿಕಾರಿಗಳನ್ನ ಕರೆ ಮುಖಾಂತರ ಕೇಳಿದಾಗ ಸರಿಯಾಗಿ ಸ್ಪಂದಿಸದೇ ಇರುವುದು ಕಂಡು ಬಂದಿತು. ಅನಂತರ ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಪಿ ಡಿ ಓ ಅವರನ್ನು ನಿಯೋಜನೆ ಮಾಡಲಾಯಿತು.
ಬೇಡಿಕೆಗಳು
1. ಖಾಯಂ ಆಗಿ ಪಂಚಾಯತಿ ಅಧಿಕಾರಿ ನೇಮಕ ಮಾಡುವುದು.
2. ಊರಿನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಗಳು ಎಲ್ಲಾ ಕಡೆ ಸೋರಿಕೆ ಆಗುತ್ತಿರುವುದನ್ನು ಸರಿಪಡಿಸಿ, ಕುಡಿಯುವ ನೀರಿನ ಟ್ಯಾಂಕ್ ನ್ನು ಸ್ವಚ್ಛಗೊಳಿಸುವುದು.
3. ಕುಡಿಯುವ ನೀರಿನ ಸುಮಾರು 6 ಕೈ ಒತ್ತುವ ಪಂಪುಗಳು ಇದ್ದು, ಅವುಗಳನ್ನು ಕೂಡಲೇ ರಿಪೇರಿ ಮಾಡಿಕೊಡಿಸುವುದು.
4. ಇ ಸ್ವತ್ತಿನ ಸಮಸ್ಯೆಗಳನ್ನು ಬಗೆಹರಿಸುವುದು.
ಕಂದಾಯ ರಶೀದಿಯನ್ನು ಸರಿಯಾಗಿ ಬಿಲ್ ಮುಖಾಂತರ ಜನರಿಗೆ ನೀಡುವುದು.
5. JJM ಕಳಪೆ ಕಾಮಗಾರಿಯನ್ನು ಸರಿಪಡಿಸುವುದು. ಹಾಗೂ ಇನ್ನಿತರ ಸಮಸ್ಯೆಗಳನ್ನು ಸರಿಪಡಿಸಬೇಕೆಂದು ಅಗ್ರಹಿಸಿದರು.
ಈ ಸಮಯದಲ್ಲಿ ಕೆ ಆರ್ ಎಸ್ ಪಕ್ಷ ಮಂಡ್ಯ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲೇಶ್ ಹೆಬ್ಬಕವಾಡಿ ಮತ್ತು ಜಿಲ್ಲಾ ಕಾರ್ಯದರ್ಶಿಯಾದ ನಂದೀಶ್ ಕುಮಾರ್ ಎಂ. ಮಳವಳ್ಳಿ ತಾಲ್ಲೂಕಿನ ಅಧ್ಯಕ್ಷರಾದ ಮಾದೇಗೌಡ ಎ ಎನ್, ಉಪಾಧ್ಯಕ್ಷರಾದ ಪರಮೇಶ ಸಿ, ಪ್ರಧಾನ ಕಾರ್ಯದರ್ಶಿಯಾದ ಮಹಾದೇವಸ್ವಾಮಿ ಹೆಚ್ ಎಮ್,ಕಾರ್ಯದರ್ಶಿಗಳಾದ ವಿಷಕಂಠ ವಿ ಎನ್ ಮತ್ತು ಸಿದ್ದರಾಜು. ಮದ್ದೂರು ತಾಲ್ಲೂಕಿನ ಅಧ್ಯಕ್ಷರಾದ ಪ್ರಮೋದ್ ಎಸ್, ಪ್ರಧಾನ ಕಾರ್ಯದರ್ಶಿಯಾದ ಮಹದೇವ ಕೆ ಜೆ ಮತ್ತು ದ ಭಾಗಿಯಾಗಿದ್ದರು.




