Wednesday, October 23, 2024

ಪ್ರಾಯೋಗಿಕ ಆವೃತ್ತಿ

ನೋಟುಗಳ ರಾಶಿ ಮೇಲೆ ಮಲಗಿದ ಬಿಜೆಪಿ ಮಿತ್ರಪಕ್ಷದ ಮುಖಂಡ: ಫೋಟೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋವೊಂದು ಅಸ್ಸಾಂ ರಾಜಕೀಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಆ ಫೋಟೋದಲ್ಲಿ ಅಸ್ಸಾಂನ ಬಿಜೆಪಿಯ ಮಿತ್ರ ಪಕ್ಷ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಮುಖಂಡರೊಬ್ಬರು 500 ರೂಪಾಯಿ ನೋಟುಗಳ ರಾಶಿ ನಡುವೆ ಮಲಗಿರುವುದು ಕಂಡುಬಂದಿದೆ.

ಪೋಟೋದಲ್ಲಿರುವವರು ಯುಪಿಪಿಎಲ್‌ ಮುಖಂಡ ಬೆಂಜಮಿನ್ ಬಸುಮತರಿ ಎಂದು ಗುರುತಿಸಲಾಗಿದೆ. ಅವರು ಉದಲಗುರಿ ಜಿಲ್ಲೆಯ ಭೈರಿಗುರಿ ಗ್ರಾಮದ ಕೌನ್ಸಿಲ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಲೋಕಸಭೆ ಚುನಾವಣೆಯ ಪ್ರಚಾರ ನಡೆಯುತ್ತಿರುವ ಈ ಸಂದರ್ಭದಲ್ಲಿ ಅವರ ಫೋಟೋ ವೈರಲ್ ಆಗಿದೆ.

“ಸರ್ಕಾರವು ಭ್ರಷ್ಟಾಚಾರದಿಂದ ದೂರವಿರಲು ಬದ್ಧವಾಗಿದೆ. ಯಾವುದೇ ಭ್ರಷ್ಟ ಕೃತ್ಯದಲ್ಲಿ ಪಕ್ಷ ತೊಡಗುವುದಿಲ್ಲ. ಬೆಂಜಮಿನ್ ಬಸುಮತರಿ ಚಿತ್ರವು ವೈರಲ್ ಆಗಿದೆ. ಬಸುಮತರಿ ನಮ್ಮ ಪಕ್ಷದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಅವರನ್ನು ಜನವರಿ 10ರಂದೇ ವಜಾಗೊಳಿಸಲಾಗಿದೆ” ಎಂದು ಯುಪಿಪಿಎಲ್ ನಾಯಕ, ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ) ಮುಖ್ಯ ಕಾರ್ಯನಿರ್ವಾಹಕ ಸದಸ್ಯ ಪ್ರಮೋದ್ ಬೋರೊ ಸ್ಪಷ್ಟೀಕರಣ ನೀಡಿದ್ದಾರೆ.

“>ವೈರಲ್ ಆಗಿರುವ ಚಿತ್ರದಲ್ಲಿ ಬಸುಮತರಿ ಅರೆನಗ್ನರಾಗಿದ್ದು, ಐನ್ನೂರು ರೂಪಾಯಿಯ ನೋಟುಗಳ ರಾಶಿ ಇರುವ ಹಾಸಿಗೆಯ ಮೇಲೆ ಮಲಗಿದ್ದಾರೆ. ಅವರ ಮೇಲೂ ನೋಟುಗಳು ಹರಡಿರುವುದನ್ನು ನಾವು ಚಿತ್ರದಲ್ಲಿ ಕಾಣಬಹುದು. ಈ ಚಿತ್ರ ವೈರಲ್ ಆಗುತ್ತಿದ್ದಂತೆ ಯುಪಿಪಿಎಲ್ ಮತ್ತು ಬಿಜೆಪಿ ಎರಡು ಪಕ್ಷಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಲಾಗುತ್ತಿದೆ.

ಇನ್ನು ವಿಪಕ್ಷ ನಾಯಕರುಗಳು ಈ ವಿಚಾರದಲ್ಲಿ ಸಮಗ್ರ ವಿಚಾರಣೆಗೆ ಆಗ್ರಹಿಸಿದ್ದಾರೆ. “ವಿಪಕ್ಷ ನಾಯಕರ ಮೇಲೆ ಕ್ರಮ ಕೈಗೊಂಡಂತೆ ಈ ನಾಯಕನ ವಿರುದ್ಧ ಇಡಿ, ಇಸಿ, ಐಟಿ ಕ್ರಮ ಕೈಗೊಳ್ಳಲಾಗುತ್ತದೆಯೇ” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!