Friday, October 18, 2024

ಪ್ರಾಯೋಗಿಕ ಆವೃತ್ತಿ

ಶಿಲ್ಪಕಲೆಯಲ್ಲಿ ಭಕ್ತಿ ಭಾವ ದೈವತ್ವ ತುಂಬುವ ಶಕ್ತಿಯೆ ಶಿಲ್ಪಿ : ಡಾ.ಹೆಚ್.ಎಲ್.ನಾಗರಾಜ್

ಸೂರ್ಯ ಚಂದ್ರ ಇರುವ ತನಕ ಜಕಣಾಚಾರಿ ಅವರ ಸ್ಮರಣೆ ಮಾಡಬೇಕು. ಶಿಲ್ಪಕಲೆಯಲ್ಲಿ ಕೆತ್ತನೆಯ ಜೊತೆಗೆ ಭಕ್ತಿ, ಭಾವ ದೈವತ್ವ ತುಂಬುವ ಶಕ್ತಿ ಶಿಲ್ಪಿಗಳಿಗಿದೆ. ಚರಿತ್ರೆಗಳನ್ನು ನೋಡಿದರೆ ಶಿಲ್ಪಕಲೆಯಲ್ಲಿ ಜಕಣಚಾರಿ ಅವರ ಸಾಧನೆ ಅಪಾರವಾದುದ್ದು, ಇವರ ಕಲೆಯನ್ನು ಮೀರಿಸಲು ಯಾರಿಗೂ ಸಾಧ್ಯವಾಗುವುದಿಲ್ಲ ಎಂಬ ದೃಷ್ಟಿಯಿಂದ ಅಮರಶಿಲ್ಪಿ ಎಂಬ ಹೆಸರು ಅವರಿಗೆ ಬಂದಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್. ನಾಗರಾಜು ತಿಳಿಸಿದರು.

ಮಂಡ್ಯದಲ್ಲಿ ಸೋಮವಾರ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆಯ ಕಾರ್ಯಕ್ರಮ ಕುರಿತು ಮಾತನಾಡಿದರು. ಶತಶತಮಾನದಿಂದ ಜನರಿಗೆ ಮಾರ್ಗದರ್ಶನವಾಗಿರುವ ಭವ್ಯ ಪರಂಪರ ಹೊಂದಿರುವ ಶಿಲ್ಪ ಕಲೆಯನ್ನು ನಾವು ಪ್ರಧಾನವಾಗಿ ದೊಡ್ಡ ದೊಡ್ಡ ದೇವಾಲಯಗಳಲ್ಲಿ‌ ನೋಡಬಹುದು. ಶಿಲ್ಪಕಲೆ ದೇಶದ ಇತಿಹಾಸವನ್ನು, ಜನರ ಸಂಸ್ಕೃತಿ, ಆಚಾರ-ವಿಚಾರವನ್ನು‌ ತಿಳಿಸುತ್ತದೆ ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ವಾಸ್ತುಶಿಲ್ಪ, ಸಂಸ್ಕೃತಿ‌ ಹಾಗೂ ಭವ್ಯತೆಯಲ್ಲಿ ಅಮರಶಿಲ್ಪಿ ಜಕಣಚಾರಿ ಅವರು ವಿಶೇಷ ಸಾಧನೆ ಮಾಡಿ ಕೀರ್ತಿ ತರುವಂತಹ ಕೆಲಸವನ್ನು ಮಾಡಿದ್ದಾರೆ. ವಾಸ್ತುಶಿಲ್ಪದ ತೊಟ್ಟಿಲು ಎಂದರೆ ಅದು ಬೇಲೂರಿನ ಚನ್ನಕೇಶವ ದೇವಾಲಯ. ಇಂತಹ ಅದ್ಭುತವಾದ ಶಿಲ್ಪಕಲೆ ಪ್ರಪಂಚದ ಎಲ್ಲಾ ಭಾಗದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೇಲೂರಿನಲ್ಲಿರುವ ಚನ್ನಕೇಶವ ದೇವಾಲಯ ಕರ್ನಾಟಕದಲ್ಲಿ ಇದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಟಿ.ವೆಂಕಟ ಕೃಷ್ಣ ಮಾತನಾಡಿ, ಜಕಣಾಚಾರಿ ಅವರು ಪ್ರಸಿದ್ಧ ಶಿಲ್ಪಿಯಾದರೂ ತಮ್ಮ ಕೆತ್ತನೆಗಳಲ್ಲಿ ಎಲ್ಲಿಯೂ ಅವರ ಹೆಸರನ್ನು ಬರೆದುಕೊಳ್ಳಲಿಲ್ಲ. ಚರಿತ್ರಕಾರರ ಪ್ರಕಾರ ಮಲ್ಲಿತಮ್ಮ ಶಿಲ್ಪಿಯು ಶಿಲ್ಪಿಗಳ ಸಾಮ್ರಾಜ್ಯದ ಒಡೆಯರಾಗಿದ್ದರು. ಜೊತೆಗೆ ನೀಲಿ ನಕ್ಷೆಯನ್ನು ತಯಾರು ಮಾಡುತ್ತಿದ್ದರು. ಹಿಂದಿನ ಕಾಲದಲ್ಲಿ ಯಾವುದೋ ಒಂದು ಅಗಲವಾದ ಕಲ್ಲಿನ ಮೇಲೆ ಒರಟು ಕಲ್ಲಿನ ಮೇಲೆ ನೀಲಿನಕ್ಷೆಯನ್ನ ತಯಾರು ಮಾಡಿಕೊಂಡು ದೇವಾಲಯಗಳ ಕೆತ್ತನೆ ಮಾಡುತ್ತಿದ್ದ ಚಾತುರ್ಯಕ್ಕೆ ಎಲ್ಲರೂ ತಲೆಬಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಹೆಚ್.ಎಸ್.ಮಂಜು, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ತಿರುಮಲಚಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯ್ ಕುಮಾರ್, ನಗರಸಭಾ ಸದಸ್ಯರಾದ ನಾಗೇಶ್, ಕುಮಾರ್, ಲಲಿತ ಸೇರಿದಂತೆ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!