Thursday, September 19, 2024

ಪ್ರಾಯೋಗಿಕ ಆವೃತ್ತಿ

ಭರಪೂರ ಭರವಸೆ | ಮದ್ದೂರು ಗ್ರಾ ಪಂ ಸದಸ್ಯರ ಒಕ್ಕೂಟ ಚಳವಳಿ ಹಿಂತೆಗೆತ

ವರದಿ : ನ.ಲಿ. ಕೃಷ್ಣ 

ಗ್ರಾಮಸ್ವರಾಜ್ ಆಶಯಗಳಿಗೆ ವಿರುದ್ದವಾಗಿ ಜಿ.ಪಂ. ಸಿಇಓ ತಾ.ಪಂ ಇಓ ಹಾಗೂ ಗ್ರಾ.ಪಂ. ಪಿಡಿಓ ಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಇಂದು ( ಶನಿವಾರ ) ಬೆಳಿಗ್ಗೆ ಬಲವಾಗಿ ಆರಂಭಗೊಂಡ ಪ್ರತಿಭಟನಾ ಸಭೆ ಉದ್ಯೋಗ ಖಾತರಿ ಕಾರ್ಮಿಕರು ಹಾಗು ಪ್ರಗತಿಪರ ಸಂಘಟನೆಗಳ ಬೆಂಬಲದಿಂದ ಬಿರುಸಾಗಿ ಸಾಗಿತು.

ಒಕ್ಕೂಟದ ಪದಾಧಿಕಾರಿಗಳು ರಾಜ್ಯಮಟ್ಟದ ಅಧಿಕಾರಿಗಳು ಬಂದು ನಮ್ಮಸಮಸ್ಯೆ ಆಲಿಸಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ದಿನವಿಡಿ ಪ್ರತಿಬಟ‌ನೆ ನಡೆಸಿದರು.

ತಾ. ಪಂ. ಇಓ ಪ್ರಾರಂಭದಿಂದಲೂ ಪ್ರತಿಭಟನಾಕಾರರಿಂದ ಮನವಿ ಕೇಳಲು ಸಿದ್ದರಿದ್ದರಾದರು ಇದಕ್ಕೆ ಪ್ರತಿಭಟನಾಕಾರರು  ಪಟ್ಟು ಹಿಡಿದು ಒಪ್ಪಲಿಲ್ಲಾ.

ಮದ್ಯಾಹ್ನದ ವೇಳೆ ಜಿ.ಪಂ. ಉಪಕಾರ್ಯದರ್ಶಿ ಅಂಜನಪ್ಪ ಬಂದರೂ ಸಹ,  ಅವರಿಗೂ ದೂರು ಕೇಳಲು ಅವಕಾಶ ನೀಡದೆ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಒಕ್ಕೂಟದವರು ಪ್ರತಿಭಟನೆ ಮಾಡಿದ ವೇಳೆ ಪ್ರತಿ ಎರಡು ‌ತಿಂಗಳಿಗೊಮ್ಮೆ ಗ್ರಾ.ಪಂ ಅಧ್ಯಕ್ಷರ ಸಭೆಯನ್ನು ತಾ. ಪಂ. ಸಭಾಂಗಣದಲ್ಲಿ ಇಓ ಅವರು ಕರೆದು ಗ್ರಾ.ಪಂ. ಹಂತದ ಸಮಸ್ಯೆ ಪರಿಹರಿಸುವುದಾಗಿ ಹೇಳಿ ಈ ವರೆಗೂ ಕರೆದಿರುವುದಿಲ್ಲಾ ಎಂಬುದು ಈ ಆಕ್ರೋಶಕ್ಕೆ ಕಾರಣವಾಯಿತು.

ಸಂಜೆ ವೇಳೆಗೆ ಪ್ರತಿಭಟನಾ ಸಭೆ ಸ್ಥಳಕ್ಕೆ ಬಂದ ಸಿಇಓ ಶಾಂತ ಹುಲ್ಮನಿ ಅವರು ಕಳೆದ ಸಭೆಯ ಬೇಡಿಕೆಗಳ ಈಡೆರಿಕೆಗೆ ಕೆಲವು ಪ್ರಯತ್ನ ಮಾಡಲಾಗಿದೆ ಎಂದರು. ಇದಕ್ಕೆ ಮತ್ತಷ್ಟು ಆಕ್ರೋಶ ವ್ಯಕ್ತವಾಯಿತು.

ಕುಡಿಯುವ ನೀರು ವಿಭಾಗದ ಇಂಜಿಯರ್ ಮತ್ತು ಇಓ ರವರ ನಿರ್ಲಕ್ಷ್ಯ ದ ಬಗ್ಗೆ ಆಕ್ರೋಶ ವ್ಯಕ್ತವಾಯಿತು.

ಕಳೆದ ಸಭೆ ಹಾಗು ಹಾಲಿ ಪ್ರತಿಭಟನೆಯ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ಮತ್ತು  ಬಗೆಹರಿಸುವ ಭರವಸೆ ನೀಡಿದ ಶಾಂತ ಹುಲ್ಮನಿ ಅವರು, ಅಧಿಕಾರಿಗಳು ಜವಬ್ದಾರಿಯುತವಾಗಿ ಕೆಲಸ ಮಾಡಬೇಕು ಚುನಾಯಿತ ಪ್ರತಿನಿಧಿಗಳ ಜೊತೆ ಸೌಹರ್ದಯುತವಾಗಿ ನಡೆದು ಕೊಂಡು, ಅವರ ಸಹಕಾರದಿಂದ ಅಭಿವೃದ್ದಿ ಸಾಧಿಸಬೇಕೆಂದು ಕಿವಿಮಾತು ಹೇಳಿದರು.

ನಿರ್ಧಿಷ್ಟ ದಿನಾಂಕ ಗೊತ್ತುಪಡಿಸಿ ನಿಯಮಿತವಾಗಿ ಗ್ರಾ. ಪಂ. ಅಧ್ಯಕ್ಷರ ಸಭೆ ನಡೆಸಲು ಇಓ ಅವರಿಗೆ ಸೂಚಿಸಿ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಕುರಿತು ಸ್ಥಳಕ್ಕೆ ಬೇಟಿ ನೀಡಿ ಸಮಸ್ಯೆ ಸರಿಪಡಿಸಿ ವರದಿ ನೀಡಲು ತಾಕೀತು ಮಾಡಿದರು.

ಎನ್ ಎಸ್ ಎಲ್ ಷುಗರ್ಸ್ ನ ಎಥಾನಲ್ ಘಟಕಕ್ಕೆ ತಗ್ಗಹಳ್ಳಿ ಗ್ರಾ.ಪಂ. ನಿರಾಕ್ಷೇಪಣೆ ಪತ್ರ ನೀಡದೆ ಸ್ಥಳಿಯ ಜನರ ಹಿತದೃಷ್ಠಿಯಿಂದ ತಿರ್ಮಾನ ಕೈಗೊಂಡಿದ್ದರು. ಇಓ ಅವರು ಪ್ರಭಾವ ಹಾಗೂ ಲಂಚದಾಸೆಗೆ ತಮಗೆ ಇಲ್ಲದ ಅಧಿಕಾರ ಬಳಸಿ,  ಪ್ರಕರಣ ದಾಖಲಿಸಿಕೊಂಡು ಕಾರ್ಖಾನೆಗೆ ಅನುಕೂಲ ಮಾಡಿಕೊಡಲು ಮುಂದಾಗಿರುವ ಕ್ರಮದ ಕುರಿತು ದೂರು ಕೇಳಿದ ಸಿಇಓ ಅವರು ದಾಖಲಾತಿ ಹಾಗೂ ನಿಯಮಗಳನ್ನು ನೋಡಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಇಓ ಸಂದೀಪ್ ಪ್ರಕರಣ ದಾಖಲಿಸಿಕೊಂಡು ಸ್ಥಳಿಯ ಗ್ರಾ. ಪಂ.ಗೆ ನಿಯಾಮಾನುಸಾರ ಕ್ರಮಕೈಗೊಳ್ಳಲು  ನಿರ್ದೇಶನ ನೀಡಲಾಗಿದೆ. ಆದ್ದರಿಂದ ತಗ್ಗಹಳ್ಳಿ ಗ್ರಾ ಪಂ. ನವರು ನಿರಾಪೇಕ್ಷಣೆ ಪತ್ರ ಕೊಡದೆ ಇರುವ ನಿರ್ಣಯ ಮಾಡಲು ಸ್ವತಂತ್ರರು ಎಂದರು.

ಲೈಸನ್ಸ್ ಇಲ್ಲದೆ ಯಂತ್ರೋ ಪಕರಣ ಅಳವಡಿಸಿ, ಎನ್ ಎಸ್ ಎಲ್ ನವರು ಯಂತ್ರ ಚಾಲನೆ ಮಾಡಲಾಗಿದೆ ಎಂಬ ದೂರು ಕೇಳಿದ ಸಿಇಓ ಅವರು ಲೈಸನ್ಸ್ ಪಡೆಯುವ ವರೆಗೆ ಕಾಮಗಾರಿ ತಡೆಹಿಡಿಯಲು ಇ ಓ ಅವರಿಗೆ ಸೂಚಿಸಿದರು.

ತಡ ರಾತ್ರಿಯಾದ ಕಾರಣ ಸಭೆಯನ್ನು ಮೊಟಕುಗೊಳಿಸಿ, ಮುಂದಿನ ಅಧ್ಯಕ್ಷರ ಸಭೆಯಲ್ಲಿ ಉಳಿಕೆ ವಿಷಯ ಚರ್ಚಿಸಿ ಸಮಸ್ಯೆ ಪರಿಹರಿಸಿಕ್ಕೊಳ್ಳುವ ತಿರ್ಮಾನದೊಂದಿಗೆ ಸಭೆ ಮುಕ್ತಾಯ ಗೊಳಿಸಲಾಯಿತು.

ಪ್ರತಿಭಟನಾಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಜಿ ಎನ್ ಸತ್ಯ, ಗೌರವಾಧ್ಯಕ್ಷ ದಯಾನಂದ್, ಕಾರ್ಯದರ್ಶಿ ಎಮ ಇ ಕೃಷ್ಣ, ನಳಿನಾ ಮಂಜುನಾಥ ,ರಾಮಕೃಷ್ಣ ಬೊಮ್ಮನದೊಡ್ಡಿ, ಕೃಷ್ಣ, ಚಂದ್ರು ,ರಘು ದೊಡ್ಡರಸಿನಕೆರೆ ಶಿವಲಿಂಗಯ್ಯ, ಚಿಕ್ಕರಸಿನಕೆರೆ ನಗರಕೆರೆ ಗ್ರಾ ಪಂ ನ ಚನ್ನಯ್ಯ ಕಿರಣ ಗಿರೀಶ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!