ಕನ್ನಡಿಗ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾದ ಒಂದು ತಿಂಗಳಿನಲ್ಲೇ ಕೋಚ್ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಅನುಭವ ಹೊಂದಿದ್ದ ಅವರು, ಆಗಸ್ಟ್ 14ರಂದು ಕೀನ್ಯಾ ತಂಡದ ಮುಖ್ಯ ಕೋಚ್ ಆಗಿದ್ದರು. ಲಾಮೆಕ್ ಒನ್ಯಾಂಗೊ ಅವರು ಹಂಗಾಮಿ ಮುಖ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ ನಂತರ ದೊಡ್ಡ ಗಣೇಶ್ ಅವರನ್ನು ನೇಮಿಸಲಾಗಿತ್ತು. ತರಬೇತುದಾರರಾದ ಜೋಸೆಫ್ ಅಂಗಾರ ಮತ್ತು ಜೋಸೆಫ್ ಅಸಿಚಿ ಅವರೊಂದಿಗೆ ಗಣೇಶ್ ಅವರ ಕೋಚಿಂಗ್ ಸಿಬ್ಬಂದಿಯಾಗಿದ್ದರು. ಮುಖ್ಯ ಕೋಚ್ ಆಗಿ ನೇಮಕವಾದ 30 ದಿನಗಳಲ್ಲೇ ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ.
ನೇಷನ್ ಆಫ್ರಿಕಾ ವರದಿ ಮಾಡಿರುವ ಪ್ರಕಾರ, ಗಣೇಶ್ ಅವರಿಗೆ ಪತ್ರವನ್ನು ಕಳುಹಿಸಲಾಗಿದೆ. ಹೊಸ ಕಾರ್ಯವಿಧಾನಗಳನ್ನು ಅನುಸರಿಸಲು ಬಯಸಿದ ಕಾರಣ ಅವರನ್ನು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಅವರ ನೇಮಕಾತಿಯನ್ನು ಅನುಮೋದಿಸಲು ಕಾರ್ಯಕಾರಿ ಮಂಡಳಿಯು ನಿರಾಕರಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕ್ರಿಕೆಟ್ ಕೀನ್ಯಾದ ಕಾರ್ಯನಿರ್ವಾಹಕ ಮಂಡಳಿಯ ನಿರ್ಣಯದ ಪ್ರಕಾರ ಬುಧವಾರ, 28 ಆಗಸ್ಟ್ 2024 ರಂದು ಅಂಗೀಕರಿಸಲಾಗಿದೆ ಮತ್ತು ಕ್ರಿಕೆಟ್ ಕೀನ್ಯಾ ಸಂವಿಧಾನದ 5.9 ಮತ್ತು 8.4.3 ರ ಅಂತರ್-ವಿಭಾಗದ ಅಡಿಯಲ್ಲಿ ತಡೆ ಹಿಡಿಯಲಾಗಿದೆ. ಕಾರ್ಯನಿರ್ವಾಹಕ ಮಂಡಳಿಯು ನಿಮ್ಮ ಅನುಮೋದನೆಯನ್ನು ನಿರಾಕರಿಸಿದೆ ಎಂದು ನಾವು ನಿಮಗೆ ಈ ಮೂಲಕ ತಿಳಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಿದೆ.
ಆಗಸ್ಟ್ 7, 2024 ರಂದು ಮನೋಜ್ ಪಟೇಲ್ ಮತ್ತು ನಿಮ್ಮ ನಡುವೆ ಮಾಡಲಾದ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಮೇಲಿನ ಪ್ರಕಾರ, ಕ್ರಿಕೆಟ್ ಕೀನ್ಯಾ ಹೇಳಲಾದ ಒಪ್ಪಂದಕ್ಕೆ ಬದ್ಧವಾಗಿಲ್ಲ ಎಂದು ಪತ್ರದಲ್ಲಿ ಹೇಳಿದೆ. ತಕ್ಷಣವೇ ಜಾರಿಗೆ ಬರುವಂತೆ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡದೊಂದಿಗೆ ಯಾವುದೇ ಮುಂದಿನ ಒಟನಾಟ ಮತ್ತು ವ್ಯವಹಾರವನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ.