Friday, November 20, 2026

ಪ್ರಾಯೋಗಿಕ ಆವೃತ್ತಿ

ಜನಪ್ರಿಯತೆಯ ಉತ್ತುಂಗಕ್ಕೇರಿದ ‘ಮಂಡ್ಯದ ಹಳ್ಳಿ ಹೈದ’ ; ‘ಗಿಲ್ಲಿ’ ಪಡೆದ ಮತಗಳೆಷ್ಟು ಗೊತ್ತೇ ?

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಡದಪುರ ಎಂಬ ಒಂದು ಕುಗ್ರಾಮದ ಹಳ್ಳಿ ಹೈದ ‘ಗಿಲ್ಲಿ ನಟ’ ಈಗ ಕೇವಲ ಒಬ್ಬ ಕಲಾವಿದನಾಗಿ ಉಳಿದಿಲ್ಲ. ಬದಲಾಗಿ ಅತ್ಯಂತ್ರ ಹೆಚ್ಚು ಜನಪ್ರಿಯತೆ ಉತ್ತುಂಗಕ್ಕೇರಿರುವ ಮಾಸ್ ನಾಯಕನಾಗಿ ಹೊರಹೊಮ್ಮಿದ್ದಾರೆ. ಇದಕ್ಕೆ ಆತ ಬಿಗ್ ಬಾಸ್ ಫಿನಾಲೆಯಲ್ಲಿ ಪಡೆದ ಮತಗಳೇ ಸಾಕ್ಷಿಯಾಗಿವೆ. ಈ ಬಾರಿಯ ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ನಟನಿಗೆ ಬರೋಬ್ಬರಿ 46 ಕೋಟಿಗೂ ಅಧಿಕ ಮತಗಳು ಬಂದಿವೆ. ಈ ಮೂಲಕ ಕನ್ನಡ ಬಿಗ್‌ಬಾಸ್ ಇತಿಹಾಸದಲ್ಲೇ ಅಧಿಕ ಮತಗಳನ್ನು ಪಡೆದು ಗಿಲ್ಲಿ ನಟ ದಾಖಲೆ ಮಾಡಿದ್ದಾರೆ.

ಬಿಗ್ ಬಾಸ್ ಫಿನಾಲೆ ಹಂತದಲ್ಲಿ ಎಲ್ಲೆಲ್ಲೂ ಗಿಲ್ಲಿ ಬಗ್ಗೆಯೇ ಮಾತುಕತೆ ನಡೆದಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಗಿಲ್ಲಿ ನಟ ಸೀಸನ್ 12ರ ವಿಜೇತರಾಗಿದ್ದಾರೆ.  ಇದೇ ಮೊದಲ ಬಾರಿಗೆ ಒಬ್ಬ ಬಿಗ್‌ಬಾಸ್ ಸ್ಪರ್ಧಿಗೆ ದಾಖಲೆಯ ವೋಟ್‌ಗಳು ಬಂದಿದೆ. ಕಳೆದ ಸೀಸನ್ ವಿಜೇತರಾಗಿ ಹೊರ ಹೊಮ್ಮಿರುವ ಹನುಮಂತ ಅವರಿಗೆ 5 ಕೋಟಿ ಮತಗಳು ಬಂದಿದ್ದವು. ಆದರೆ, ಗಿಲ್ಲಿ ನಟ 46 ಕೋಟಿ ಮತಗಳನ್ನು ಗಳಿಸಿರುವುದು ಇತಿಹಾಸ ನಿರ್ಮಿಸಿದೆ.

60 ಲಕ್ಷ ಬಹುಮಾನ

ಪ್ರತಿ ಸೀಸನ್‌ನಂತೆಯೇ ಈ ಬಾರಿಯೂ ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ ಟ್ರೋಫಿ ಜೊತೆಗೆ ₹50 ಲಕ್ಷ ಹಾಗೂ ಮಾರುತಿ ಸುಜುಕಿ ಎಸ್‌ಯುವಿ ವಿಕ್ಟೋರಿಯಸ್ ಕಾರನ್ನು ಬಹುಮಾನದ ರೂಪದಲ್ಲಿ ನೀಡಲಾಗಿದೆ. ವಿಶೇಷ ಎಂದರೆ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ ಪ್ರೀತಿಯಿಂದ ₹10 ಲಕ್ಷ ಕೊಡುತ್ತಿದ್ದೇನೆ ಎಂದು ವೇದಿಕೆ ಮೇಲೆ ಘೋಷಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ