ಬಿಹಾರದಲ್ಲಿ ತೇಜಸ್ವಿ ಯಾದವ್ ಅವರಿಗೆ ಸಾಥ್ ನೀಡುವ ಮೂಲಕ ಬಿಜೆಪಿಗೆ ಟಕ್ಕರ್ ಕೊಡಟ್ಟವರು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ ಅಧ್ಯಕ್ಷ ಮುಖೇಶ್ ಸೈನಿ.
ಮುಖೇಶ್ ಸೈನಿ ಮೀನುಗಾರ ಸಮುದಾಯಕ್ಕೆ ಸೇರಿದವರು.ತನ್ನ ಜಾತಿಯ ಜನರ ಉದ್ಧಾರಕ್ಕೆಂದೇ ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ(ವಿಐಪಿ) ಸ್ಥಾಪನೆ ಮಾಡಿದ್ದಾರೆ. ಮೀನುಗಾರ ಸಮುದಾಯವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮೇಲೆತ್ತುವುದು ವಿಐಪಿ ಪಕ್ಷದ ಉದ್ದೇಶ.ಅದರಂತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ನಾಲ್ಕು ಸ್ಥಾನಗಳನ್ನು ಪಡೆದಿತ್ತು.ಆದರೆ ಬಿಜೆಪಿ ಇವರ ಪಕ್ಷದ ಮೂವರನ್ನು ಆಪರೇಷನ್ ಕಮಲ ಮೂಲಕ ತನ್ನೆಡೆಗೆ ಸೆಳೆದುಕೊಂಡಿತು.ನನ್ನ ಸಮುದಾಯದಕ್ಕೆ ಮೀಸಲಾತಿಯಲ್ಲಿ ಬಿಜೆಪಿ ಅನ್ಯಾಯ ಮಾಡುವುದನ್ನು ಸಹಿಸಲಾರೆ ಎಂದ ಮುಖೇಶ್ ಸೈನಿ, ತೇಜಸ್ವಿ ಯಾದವ್ ಜೊತೆ ಕೈ ಜೋಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಹೆಲಿಕಾಪ್ಟರ್ ಒಳಗೆ ತೇಜಸ್ವಿ ಯಾದವ್ ಜೊತೆ ಮೀನು ತಿನ್ನುತ್ತಿರುವಾಗ ಜೊತೆಗಿದ್ದ ವ್ಯಕ್ತಿಯೇ ಮುಖೇಶ್ ಸೈನಿ.ಯಾವಾಗ ಸೈನಿ ತೇಜಸ್ವಿ ಜೊತೆ ಕುಳಿತು ಮೀನು ತಿನ್ನುತ್ತಿದ್ದ ವಿಡಿಯೋ ವೈರಲ್ ಆಯಿತೋ,ಅದನ್ನು ಕಂಡೇ ಮೋದಿಜೀ ಶ್ರಾವಣದಲ್ಲಿ ಮೀನು (ಮಚಲಿ) ತಿನ್ನುತ್ತಿರುವ ಧರ್ಮ ವಿರೋಧಿಗಳು ಅಂತಹ ಭಾಷಣ ಮಾಡಿದ್ದು ಆಯಿತು. ಅದಕ್ಕೆ ದೇಶಾದ್ಯಂತ ಜನರು ಆಹಾರ ನಮ್ಮ ಹಕ್ಕು ಎಂದು,ಯಾವ ಮಾಸದಲ್ಲಿ ಯಾವ ಆಹಾರ ತಿನ್ನಬೇಕೆಂದು ಹೇಳುವ ಅಗತ್ಯ ಇಲ್ಲ.ನಮ್ಮ ಆಹಾರ-ನಮ್ಮ ಹಕ್ಕು ಎಂದು ಪ್ರತಿಕ್ರಿಯೆ ಬಂದದ್ದು ಆಯಿತು.
ನಿಜವಾದ ವಿಚಾರವೇನೆಂದರೆ, ಮೀನುಗಾರರ ಸಮುದಾಯದ ನೇತಾರ ಮುಖೇಶ್ ಸೈನಿ ಅವರ ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ ಕಳೆದ ಬಾರಿ ಬಿಜೆಪಿ ಜೊತೆಗಿತ್ತು. ಅದರೆ ಈ ಬಾರಿ ತೇಜಸ್ವಿ ಜೊತೆಗಿದ್ದಾರೆ.ತೇಜಸ್ವಿ ಅವರ ಹೆಲಿಕಾಪ್ಟರ್, ಬಸ್ಸು, ಕಾರು ಎಲ್ಲಾದರಲ್ಲೂ ಸಹ ಜೊತೆಗಿರುವ ಮುಖೇಶ್ ಮತ್ತು ತೇಜಸ್ವಿ ಜೋಡಿ ಬಿಹಾರದ ರಾಜಕಾರಣವನ್ನು ಬದಲಾಯಿಸುವುದು ಪಕ್ಕಾ ಎಂದೇ ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.




