Wednesday, June 12, 2024

ಪ್ರಾಯೋಗಿಕ ಆವೃತ್ತಿ

ಕೇಂದ್ರದ ಮಾಜಿ ಸಚಿವ ಬಿರೇಂದರ್ ಸಿಂಗ್ ಕಾಂಗ್ರೆಸ್ ಸೇರ್ಪಡೆ

ಸೋಮವಾರ ಬಿಜೆಪಿ ತೊರೆದ ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್ ಅವರು ಮಂಗವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿರೇಂದರ್ ಸಿಂಗ್ ಜೊತೆ ಅವರ ಪತ್ನಿ ಹಾಗೂ ಹರಿಯಾಣದ ಬಿಜೆಪಿ ಮಾಜಿ ಶಾಸಕ ಪ್ರೇಮ್ ಲತಾ ಕೂಡ ಕಾಂಗ್ರೆಸ್ ಸೇರಿದ್ದಾರೆ.

ಬಿರೇಂದರ್ ಸಿಂಗ್ ಅವರ ಪುತ್ರ ಸುಮಾರು ಒಂದು ತಿಂಗಳ ಹಿಂದೆ ಕಾಂಗ್ರೆಸ್ ಸೇರಿದ್ದರು. ಅದಾದ ಬಳಿಕ ಬಿರೇಂದರ್ ಸಿಂಗ್ ಕೂಡಾ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಯಾಗಿತ್ತು.

ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಬಿರೇಂದರ್ ಸಿಂಗ್, “ನಾನು ಕಾಂಗ್ರೆಸ್ ಅನ್ನು ತೊರೆದಾಗ, ಬಿಜೆಪಿ ಮತ್ತು ಕಾಂಗ್ರೆಸ್ ಸಿದ್ಧಾಂತಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ಸಂಪೂರ್ಣವಾಗಿ ವ್ಯತಿರಿಕ್ತ ಸಿದ್ಧಾಂತವನ್ನು ಬಿಜೆಪಿ ಹೊಂದಿದೆ. ಇದು ನನ್ನ ‘ಘರ್ ವಾಪ್ಸಿ’ ಮಾತ್ರವಲ್ಲ, ‘ವಿಚಾರ ವಾಪ್ಸಿ’ ಕೂಡ ಆಗಿದೆ” ಎಂದು ಹೇಳಿದರು.

ಹಾಗೆಯೇ “ಈ ದೇಶವನ್ನು ‘ಜನ ಗಣ ಮನ’ ಮಾತ್ರ ಉಳಿಸಬಲ್ಲದು. ಕಾಂಗ್ರೆಸ್ ಭಾರತದಾದ್ಯಂತ ಇರುವ ಸರ್ವಪಕ್ಷವಾಗಿದೆ. ರಾಷ್ಟ್ರದ ಮೂಲಭೂತ ಅಂಶಗಳನ್ನು ರಕ್ಷಿಸುವುದು ಅದರ ಜವಾಬ್ದಾರಿಯಾಗಿದೆ” ಎಂದರು.

ಬಿರೇಂದರ್ ಸಿಂಗ್ ಅವರು ಸುಮಾರು 10 ವರ್ಷಗಳ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಸುಮಾರು ನಾಲ್ಕು ದಶಕಗಳ ಸುದೀರ್ಘ ಅವಧಿಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ಅವರು 2014ರಲ್ಲಿ ಬಿಜೆಪಿ ಸೇರಿದ್ದು ಈಗ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್‌ಗೆ ಸೇರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!