Friday, September 20, 2024

ಪ್ರಾಯೋಗಿಕ ಆವೃತ್ತಿ

ಜನನ- ಮರಣ ಪ್ರಮಾಣಪತ್ರ ವಿಳಂಬ ನೋಂದಣಿಗೆ ಸಿವಿಲ್ ಕೋರ್ಟ್ ಗೆ ಹೋಗುವ ಅಗತ್ಯವಿಲ್ಲ: ಡಾ.ಹೆಚ್ ಎಲ್ ನಾಗರಾಜು

ಜನನ ಅಥವಾ ಮರಣ ಪ್ರಮಾಣ ಪತ್ರ ಪಡೆಯಲು ಒಂದು ವರ್ಷ ಮೇಲ್ಪಟ್ಟು ವಿಳಂಬವಾದಲ್ಲಿ ಸಿವಿಲ್ ಕೋಟ್೯ ಗೆ ಅರ್ಜಿ ಸಲ್ಲಿಸಬೇಕಿಲ್ಲ. ಸಾರ್ವಜನಿಕರು ಒಂದು ವರ್ಷ ಮೇಲ್ಪಟ್ಟು ಜನನ, ಮರಣ ಪತ್ರ ವಿಳಂಬವಾದಲ್ಲಿ ಆನ್ ಲೈನ್ ನಲ್ಲಿ ಉಪವಿಭಾಗಾಧಿಕಾರಿಗಳಿಗೆ ಅಗತ್ಯ ದಾಖಲಾತಿಗಳೊಂದಿಗೆ ರೂ. 500 ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್. ಎಲ್ ನಾಗರಾಜು ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜನನ, ಮರಣ ನೋದಣಿ ಕುರಿತು ಸಭೆ ನಡೆಸಿ ಮಾತನಾಡಿದರು.

21 ದಿನ ಮೇಲ್ಪಟ್ಟು ಒಂದು ವರ್ಷದೊಳಗಿನ ಜನನ ಮರಣ ವಿಳಂಬ ನೋಂದಣಿಯನ್ನು ಗ್ರಾಮಾಂತರ ಪ್ರದೇಶದಲ್ಲಿ ತಹಶೀಲ್ದಾರ್, ನಗರ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು ಆದೇಶ ನೀಡುವ ಅಧಿಕಾರ ಹೊಂದಿರುತ್ತಾರೆ ಎಂದರು.

ಜನನ ಮರಣ ಪ್ರಮಾಣ ಪತ್ರಗಳು ಹಲವಾರು ಸಂದರ್ಭದಲ್ಲಿ ಅತ್ಯವಶ್ಯಕವಾಗಿದ್ದು, ಸಾರ್ವಜನಿಕರು 21 ದಿನದಳೊಗಾಗಿ ಅಥವಾ ವಿಳಂಬವಾದಲ್ಲಿ ತಹಶೀಲ್ದಾರ್ ಅಥವಾ ಉಪವಿಭಾಗಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ ಎಂದರು.

ಜನನ ಮರಣ ಪ್ರಮಾಣ ಪತ್ರವನ್ನು ಮೊದಲು 21 ದಿನದೊಳಗೆ ಉಚಿತವಾಗಿ, ವಿಳಂಬ 21 ದಿನದಿಂದ 30 ದಿನದವರೆಗೆ ರೂ 100, 30 ದಿನ ಮೇಲ್ಪಟ್ಟು ಒಂದು ವರ್ಷದೊಳಗೆ ರೂ 200/- ಶುಲ್ಕ ಪಾವತಿಸಬೇಕಿರುತ್ತದೆ. ವಿಳಂಬ ನೊಂದಣಿಗಳನ್ನು ಕಡ್ಡಾಯವಾಗಿ ಕಚೇರಿ ಮುಖ್ಯಸ್ಥರು ಮಾಡಬೇಕು ಎಂದರು.

ಬೆಳೆ ಕಟಾವು ಪ್ರಯೋಗಗಳನ್ನು ವಿಮೆ ಹೊಂದಿರುವ ಬೆಳೆ ಹಾಗೂ ವಿಮೆ ಹೊಂದಿಲ್ಲದ ಬೆಳೆಗಳಿಗೆ ಇಲಾಖೆವಾರು ಗುರಿ ನಿಗದಿ ಮಾಡಲಾಗಿದ್ದು, ನಿಗದಿತ ಅವಧಿಯಲ್ಲಿ ಗುರಿ ಸಾಧಿಸುವಂತೆ ತಿಳಿಸಿದರು.

ಮೂಲ ಕಾರ್ಯಕರ್ತರು ನಿಖರ ಮಾಹಿತಿ ಹಾಗೂ ರೈತರು ಬೆಳೆದಿರುವ ಬೆಳೆಗಳ ಛಾಯಚಿತ್ರಗಳನ್ನು ತಿಳಿಸಿರುವ ನಿಯಮಗಳನ್ನು ಅನುಸರಿಸಿ ಅಪ್ ಲೋಡ್ ಮಾಡಬೇಕು ಎಂದರು.

11 ನೇ ಕೃಷಿ ಗಣತಿ ಜನವರಿ 2023 ರಲ್ಲಿ ಪ್ರಾರಂಭವಾಗಿದ್ದು,ಒಟ್ಟು 1468 ಗ್ರಾಮಗಳಲ್ಲಿ 18,47,840 ಸರ್ವೆ ನಂಬರ್ ಗಳಲ್ಲಿ ಮೊದಲನೇ ಹಂತದ ಕೃಷಿ ಗಣತಿ ಕಾರ್ಯ ಪೂರ್ಣಗೊಳಿಸಲಾಗಿರುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೇಶವ ಮೂರ್ತಿ, ಜಂಟಿ ಕೃಷಿ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮೋಹನ್ ಸೇರಿದಂತೆ ಇನ್ನಿತರ ಅಧಿಕಾರಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!