Thursday, September 19, 2024

ಪ್ರಾಯೋಗಿಕ ಆವೃತ್ತಿ

ದೇಶದಲ್ಲಿ 15-20 ವರ್ಷಗಳ ಕಾಲ ಬಿಜೆಪಿ ಆಡಳಿತ: ಅಶೋಕ್ ಜಯರಾಮ್

ದೇಶದಲ್ಲಿ ಇನ್ನೂ 15ರಿಂದ 20 ವರ್ಷಗಳ ಕಾಲ ಬಿಜೆಪಿಯೇ ಆಡಳಿತ ಮುನ್ನಡೆಸಲಿದೆ ಎಂದು ಬಿಜೆಪಿ ಮುಖಂಡ ಅಶೋಕ್‌ ಜಯರಾಮ್ ತಿಳಿಸಿದರು.

ಮಂಡ್ಯ ನಗರದ ಹೊಸಹಳ್ಳಿಯ ಸರಸ್ವತಿ ಸಮುದಾಯ ಭವನದಲ್ಲಿ ಜಿಲ್ಲಾ ಬಿಜೆಪಿ ನಗರ ಮೋರ್ಚಾ ಆಯೋಜಿಸಿದ್ದ 4ನೇ ಮಹಾಶಕ್ತಿ ಕೇಂದ್ರದ ಬೂತ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ದೂರದೃಷ್ಟಿತ್ವದ ಸಮಗ್ರ ಅಭಿವೃದ್ದಿಯ ಆಡಳಿತವು ವಿಶ್ವಕ್ಕೆ ಮಾದರಿಯಾಗಿದ್ದು,ನವ ಭಾರತ ನಿರ್ಮಾಣ ಮಾಡುವ ಸಂಕಲ್ಪದತ್ತ ಸಾಗುತ್ತಿದೆ.70ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್‌ನ ಅಭಿವೃದ್ದಿಗೂ, 8ವರ್ಷಗಳಲ್ಲಿ ನಾವು ನೀವು ಕಂಡ ಅಭಿವೃದ್ದಿಯ ನಾಗಲೋಟವನ್ನು ತಾಳೆ ಮಾಡಿನೋಡಿ, ಕೇವಲ ಕಡಿಮೆ ಅವಧಿಯಲ್ಲಿ ವಿಶ್ವವೇ ಮೆಚ್ಚುವಂತಹ, ಬೆರಗಾಗುವಂತಹ ಆಡಳಿತ ನಡೆಸಿದ ಕೀರ್ತಿ ಕಾಣಬಹುದಾಗಿದೆ ಎಂದರು.

2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವೇ ಗೆದ್ದು, ಆಡಳಿತ ನಡೆಸಲಿದೆ, ಸಮಗ್ರ ಅಭಿವೃದ್ದಿಯ ಸಂಕಲ್ಪದೊಂದಿಗೆ ಇನ್ನೂ 2೦ ವರ್ಷಗಳ ಕಾಲ ದೇಶದಲ್ಲಿ ಮತ್ತು ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವ ಏಕೈಕ ಪಕ್ಷ ಬಿಜೆಪಿಯಾಗಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಮಾಡಿದ ಅಭಿವೃದ್ದಿಕಾರ್ಯಗಳು ಮಂದಗತಿಯಲ್ಲಿದ್ದವು.ಆದರೆ ಬಿಜೆಪಿ ಸರ್ಕಾರವು ನಗರಾಭಿವೃದ್ದಿಗೆ 50ಕೋಟಿ ರೂ.ಗಳನ್ನು ನೀಡಿದೆ, ಈಗ ರಸ್ತೆಗಳು ಅಭಿವೃದ್ದಿಯಾಗುತ್ತಿವೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ.ಸದಾನಂದ,ಮುಖಂಡ ಎಚ್.ಆರ್.ಅರವಿಂದ್ ಮತ್ತಿತರರು ಮಾತನಾಡಿದರು.

ಇದೇ ಸಂಧರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷ ತೊರೆದ ಯುವ ಕಾರ್ಯಕರ್ತರು ಬಿಜೆಪಿ ಪಕ್ಷದ ತತ್ವ ಸಿದ್ದಾಂತ ಮತ್ತು ಅಭಿವೃದ್ದಿಯ ಕಾರ್ಯಗಳನ್ನು ಮೆಚ್ಚಿ ಸ್ಥಳೀಯ ಗಣ್ಯರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಿವೇಕ್, ಬಿಜೆಪಿ ಚುನಾವಣೆ ಉಸ್ತುವಾರಿ ಪಣೀಶ್, ನಗರಸಭಾ ನಾಮಿನಿ ಸದಸ್ಯರಾದ ಶಿವಕುಮಾರ ಕೆಂಪಯ್ಯ, ಪ್ರಸನ್ನ, ಶಿವಲಿಂಗು, ಮುಖಂಡರಾದ ಪೂಜಾರಿ ಬೋರಪ್ಪ, ಹೊಸಹಳ್ಳಿಶಿವ, ನಿತ್ಯಾನಂದ, ಸುರೇಶ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!