Friday, June 14, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

ಸಚಿವ ಕೆ.ಸಿ.ನಾರಾಯಣಗೌಡರ ಬಗ್ಗೆ ಅಸಂಬದ್ಧವಾಗಿ ಮಾತನಾಡಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತನ್ನಲ್ಲಿರುವ ಹೀನ ಸಂಸ್ಕೃತಿಯನ್ನು ಜನರಿಗೆ ತೋರಿಸಿದ್ದಾರೆ.ಸಚಿವರ ವಿರುದ್ಧ ಕೆಟ್ಟದಾಗಿ ಮಾತನಾಡಿರುವ ಅವರ ವಿರುದ್ಧ ಮೊಕದ್ದಮೆ ಹೂಡಲಾಗುವುದು ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಾಯಕರು ಡಿ.ರಮೇಶ್ ಅಕ್ರಮಗಳ ಬಗ್ಗೆ ದಾಖಲೆ‌ ಬಿಡುಗಡೆ ಮಾಡಿದರು.

ಬಿಜೆಪಿ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಡಿ.ರಮೇಶ್ ಒಂದು ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿಯುತ ಹುದ್ದೆಯಲ್ಲಿದ್ದು, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಬೇಕಾದ ಸಿಎ ಸೈಟನ್ನು ಅಕ್ರಮವಾಗಿ ಖಾತೆ ಮಾಡಿಕೊಂಡು, 12 ಲಕ್ಷ ಲಕ್ಷ ರೂ. ನೋಂದಣಿ ಶುಲ್ಕವನ್ನು ವಂಚಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ.

ರಾಜಕೀಯ ಪ್ರಭಾವ ಬಳಸಿ ಸಿಎ ಸೈಟಿನ ಪಕ್ಕದಲ್ಲಿರುವ ರಾಜಾಕಾಲುವೆ ಒತ್ತುವರಿ ಮಾಡಿಕೊಂಡು ವಾಣಿಜ್ಯ ನಿವೇಶನ ನಿರ್ಮಿಸಿದ್ದಾರೆ ಮುಡಾದ 107 ನಿವೇಶನಗಳ ಹಂಚಿಕೆಯ ಪ್ರಕರಣ ಸಿಬಿಐ ತನಿಖೆಯಲ್ಲಿದ್ದರೂ, ತಮ್ಮ ಹೆಸರು ಬರದಂತೆ ರಾಜಕೀಯ ಪ್ರಭಾವ ಬಳಸಿದ್ದಾರೆ ಎಂದರು.

ನಗರದ ಅನ್ನಪೂರ್ಣೇಶ್ವರಿನಗರದಲ್ಲಿ ಮನೆಯ ಮುಂದಿರುವ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಾರ್ ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ.

ಇದು ಕಾನೂನು ಬಾಹಿರವಲ್ಲವೇ?ಕೂಡಲೇ ನೀರಾವರಿ ನಿಗಮುದ ಅಧಿಕಾರಿಗಳು ತೆರವುಗೊಳಿಸಿ ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸಬೇಕು.ಈ ಬಗ್ಗೆ ನಮ್ಮ ಪಕ್ಷ ಕಾನೂನು ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಹೊಸಹಳ್ಳಿ ನಾಗೇಶ್ ಮಾತನಾಡಿ,ಡಿ.ರಮೇಶ್ ಅವರೇ ನೀವೇ ನಿಜವಾದ ಪೊಲಿಟಿಕಲ್ ಬೆಗ್ಗರ್. ಚನ್ನಪಟ್ಟಣದಿಂದ ಬಂದು ಇಲ್ಲಿ ರಾಜಕೀಯ ಮಾಡುತ್ತಿದ್ದೀರಾ? ಆದರೆ ನಾರಾಯಣಗೌಡರು ಜೀವನಕ್ಕಾಗಿ ಬಾಂಬೆಯಲ್ಲಿದ್ದು, ನಂತರ ತನ್ನ ಸ್ವಂತ ಊರಿಗೆ ಬಂದು ಜನಸೇವೆಗಾಗಿ ರಾಜಕೀಯ ಮಾಡುತ್ತಿದ್ದಾರೆ.

ಆದರೆ ನಿಮಗೆ ಯಾವುದೇ ಉದ್ಯೋಗವಿಲ್ಲ. ಯಾವುದೇ ವ್ಯವಹಾರವಿಲ್ಲ. ಆದರೂ ಕೂಡ ಭವ್ಯ ಬಂಗಲೆ, ಐಷಾರಾಮಿ ಕಾರು, ಹೊನಗಾನಹಳ್ಳಿಯಲ್ಲಿ 5 ಎಕರೆ ತೆಂಗಿನ ತೋಟ ಮಾಡಿಕೊಂಡಿದ್ದೀರಾ? ಇದೆಲ್ಲಾ ಹೇಗೆ ಬಂತು ಎಂದು ಪ್ರಶ್ನಿಸಿದರು.

ನಾರಾಯಣಗೌಡರು ಯಾವಾಗ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿದ್ದಾರೆ. ಅದಕ್ಕೆ ಸಾಕ್ಷಿ ಇದೆಯೇ, ಅದನ್ನು ಸಾಬೀತುಪಡಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ. ಕಾಂಗ್ರೆಸ್ ಜತೆ ಕಳ್ಳ ಸ್ನೇಹವಿರುವುದು ನಿಮಗೆ ಹೊರತು ನಾರಾಯಣಗೌಡರಿಗಲ್ಲ ಎಂದು ಕಿಡಿಕಾರಿದರು.

ಇಡೀ ರಾಜ್ಯಾದ್ಯಂತ ಉಸ್ತುವಾರಿಗಳನ್ನು ಬದಲಾಯಿಸಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ನಾರಾಯಣಗೌಡರನ್ನು ಕಿತ್ತೆಸೆದಿದ್ದಾರೆ ಎಂದು ಹೇಳುವ ನಿಮ್ಮ ಅವಿವೇಕಿತನವನ್ನು ತೋರಿಸಿಕೊಟ್ಟಿದ್ದೀರಾ. ನಿಮಗೆ ತಾಕತ್ತಿದ್ದರೆ ಮಂಡ್ಯ ನಗರಸಭೆಯ ಒಂದು ವಾರ್ಡ್ನಲ್ಲಿ ಚುನಾವಣೆಗಡ ನಿಂತು ಗೆದ್ದು ತೋರಿಸಿ. ನಾರಾಯಣಗೌಡರ ಬಗ್ಗೆ ಅವಹೇಳನ ಮಾಡಿರುವ ನೀವು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಾ.ಇಂದ್ರೇಶ್, ಮನ್ ಮುಲ್ ನಿರ್ದೇಶಕ ಸ್ವಾಮಿ, ಹೊಸಳ್ಳಿ ಶಿವು, ಸಿ.ಟಿ.ಮಂಜುನಾಥ್ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!