ಸಂವಿಧಾನದ ಆರ್ಟಿಕಲ್ 371 ಜೆ ಮೀಸಲಾತಿಯಡಿ ಕಲ್ಯಾಣ ಕರ್ನಾಟಕದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ಧೆಗಳನ್ನು ಭರ್ತಿ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟ್ ಮಾಡಿದೆ.
ಆರ್ಟಿಕಲ್ 371ಜೆ ಮೀಸಲಾತಿಯಡಿ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನೂ ಭರ್ತಿ ಮಾಡುತ್ತೇವೆ ಎಂದಿದ್ದ ಬಿಜೆಪಿ ಮಾತು ಮರೆತಿದೆ.
ಹುದ್ದೆಗಳನ್ನು ಮಾರಾಟ ಮಾಡುತ್ತಿರುವ ಬಿಜೆಪಿಗೆ ತಮ್ಮ ಮಾತು ನೆನಪಾಗುವುದಾದರೂ ಹೇಗೆ!
ಭರ್ತಿಯಾಗುತ್ತಿರುವುದು ಹುದ್ದೆಗಳಲ್ಲ ಬಿಜೆಪಿಗರ ಜೇಬು ಮಾತ್ರ!#NimHatraIdyaUttara pic.twitter.com/TLx36ljTp3
— Karnataka Congress (@INCKarnataka) September 17, 2022
“>
ಎಲ್ಲಾ ಸರ್ಕಾರಿ ಹುದ್ದೆಗಳನ್ನೂ ಭರ್ತಿ ಮಾಡುತ್ತೇವೆ ಎಂದಿದ್ದ, ಬಿಜೆಪಿ ಮಾತು ಮರೆತಿದೆ. ಹುದ್ದೆಗಳನ್ನು ಮಾರಾಟ ಮಾಡುತ್ತಿರುವ ಬಿಜೆಪಿಗೆ ತಮ್ಮ ಮಾತು ನೆನಪಾಗುವುದಾದರೂ ಹೇಗೆ! ಭರ್ತಿಯಾಗುತ್ತಿರುವುದು ಹುದ್ದೆಗಳಲ್ಲ ಬಿಜೆಪಿಗರ ಜೇಬು ಮಾತ್ರ! ಎಂದು ಕಾಂಗ್ರೆಸ್ ಕಾಲೆಳೆದಿದೆ.
ಕಲ್ಯಾಣ ಕರ್ನಾಟಕದ ವಿಮೋಚನೆ
1948ರ ಸೆ.17ರಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರ ನೇತೃತ್ವದ ಭಾರತ ಸರ್ಕಾರ ಗೃಹ ಮಂತ್ರಿ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಮಾರ್ಗದರ್ಶನದಂತೆ ಸಶಸ್ತ್ರ ಸೇನಾ ಕಾರ್ಯಾಚರಣೆ ನಡೆಸಿ, ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ವನ್ನು ರಾಜಾಡಳಿತದಿಂದ ವಿಮುಕ್ತಿಗೊಳಿಸಿ ಭಾರತದೊಂದಿಗೆ ವಿಲೀನ ಗೊಳಿಸಲಾಗಿತ್ತು.




