ಇಂದು ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಉತ್ಸವಕ್ಕೆ ಕಲಬುರಗಿಗೆ ಸಿಎಂ ತೆರಳಿದ್ದಾಗ ತಳವಾರ ಸಮುದಾಯಕ್ಕೆ ಸೇರಿದ ಕೆಲವರು ಕಲಬುರಗಿಯ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಬಸವರಾಜ್ ಬೊಮ್ಮಾಯ್ರಿಗೆ ಕಪ್ಪುಪಟ್ಟಿ ಪ್ರದರ್ಶನ ಮಾಡಿರುವ ಪ್ರಸಂಗ ನಡೆದಿದೆ.
ತಳವಾರ ಸಮುದಾಯಕ್ಕೆ ಎಸ್ ಟಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ತಳವಾರ ಸಮುದಾಯ ಪ್ರತಿಭಟನೆ ನಡೆಸುತ್ತಿದ್ದು ಹೋರಾಟಕ್ಕೆ ಸರ್ಕಾರದ ಕಡೆಯಿಂದ ಸ್ಪಂದನೆ ಸಿಗದ ಕಾರಣ ಬರವರಾಜ್ ಬೊಮ್ಮಾಯಿಗೆ ಕಪ್ಪು ಪಟ್ಟಿ ತೋರಿಸಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಪ್ಪು ಪಟ್ಟಿ ಪ್ರದರ್ಶಿಸಿದ ತಳವಾರ ಸಮುದಾಯದ 20 ಕ್ಕೂ ಅಧಿಕ ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ.




