ಕಾಶ್ಮೀರದ ಫಹಲ್ಗಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿರುವ ಪ್ರಾಣಹತ್ಯೆ ಧಾಳಿ ಖಂಡಿಸಿ ಮಂಡ್ಯ ನಗರದಲ್ಲಿ ಬಿಜೆಪಿ, ಆರ್ ಎಸ್ ಎಸ್ ಹಾಗೂ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಗುರುವಾರ ಸಂಜೆ ಮಂಡ್ಯ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿ ಉಗ್ರಗಾಮಿಗಳ ಗಲ್ಲು ಶಿಕ್ಷೆಗೆ ಆಗ್ರಹಿಸಿದರು.
ಉಗ್ರರ ದಾಳಿ ಖಂಡಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಅಶೋಕ್ ಜಯರಾಮ್, ಅಶ್ವತ್ ನಾರಾಯಣ್ ಕೆಂಪಬೋರಯ್ಯ, ಎಚ್ ಆರ್ ಅಶೋಕ್ ಕುಮಾರ್ , ವಿವೇಕ್ ಶಿವಕುಮಾರ ಆರಾಧ್ಯ, ವಸಂತ್ ಮತ್ತಿತರರಿದ್ದರು.




