Tuesday, November 24, 2026

ಪ್ರಾಯೋಗಿಕ ಆವೃತ್ತಿ

ಕಪ್ಪು ಉಡುಗೆ ತೊಟ್ಟು ಕನ್ನಡ ರಾಜ್ಯೋತ್ಸವಕ್ಕೆ ಹಾಜರಾದ ಪುರಸಭೆ ಮುಖ್ಯಾಧಿಕಾರಿ

ವರದಿ : ನ.ಲಿ.ಕೃಷ್ಣ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕಪ್ಪು ಬಣ್ಣದ ಉಡುಗೆ ತೊಟ್ಟು ಮದ್ದೂರು ಕ್ರೀಡಾಂಗಣಕ್ಕೆ ಬಂದಿದ್ದ ಪುರಸಭೆ ಮುಖ್ಯಾಧಿಕಾರಿ ಆಶೋಕ್ ಅವರ ವರ್ತನೆ
ಕನ್ನಡ ಅಭಿಮಾನಿಗಳಿಗೆ ಅಸಮಾಧಾನ ತಂದು ಅಲ್ಲಲ್ಲಿ ಈ ಕ್ರಮ ಕುರಿತು ಪ್ರತಿಭಟಿಸುವ ಚರ್ಚೆ ಆಗುತ್ರಿರುವುದನ್ನು ಗಮನಿಸಿದ ಗುಪ್ತಚಾರ ವಿಭಾಗದ ಪೊಲೀಸರು ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದು ವೇದಿಕೆಗೆ ಹೋಗದಂತೆ ಕಿವಿಮಾತು ಹೇಳಿ ಪ್ರತಿಭಟನೆ ಕಾವು ತಪ್ಪಿಸಿದರು.

ಪೋಲಿಸರ ಸೂಚನೆಯಿಂದ ಎಚ್ಚೆತ್ತ ಪುರಸಭೆ ಅಧಿಕಾರಿ ಸ್ಥಳದಿಂದ ಕ್ಷಣಾರ್ಧದಲ್ಲಿ ಹೊರ ನಡೆದರು.

ಧ್ಜಜಾರೋಹಣ ನಂತರ ವಿವಿಧ ತಂಡಗಳ ಪರಿಚಯ ವೇಳೆ ಈ ಘಟನೆ ನಡೆಯಿತು ಪರಿಚಯ ನಂತರ ಮತ್ತೆ ಪುರಸಭಾ ಅದಿಕಾರಿಗಳು ವೇದಿಕೆಯಲ್ಲಿ ಆಸೀನರಾಗುವವರಿದ್ದರು
ಧ್ಜಜಾರೋಹಣ ವೇಳೆ ಮುಖ್ಯಾಧಿಕಾರಿಗಳು ಇದೇ ಉಡುಪಿನಲ್ಲಿ ವೇದಿಕೆಯಲ್ಲಿದ್ದರು.

ರಾಜ್ಯೋತ್ಸವದ ವೇಳೆ ಎಲ್ಲರೂ ಸಡಗರ ಸಂಭ್ರಮದಿಂದ ಹಳದಿ ಕೆಂಪು ಉಡುಪು ಹಾಕಿ ಕಾರ್ಯಕ್ರಮಕ್ಕೆ ಮೆರಗು ನೀಡುತ್ತಿರುವ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿಗಳ ಈ ನಡೆ ಸಾರ್ವಜನಿಕರ ಅಸಮಾಧಾನಕ್ಮೆ ಕಾರಣವಾಯ್ತು.

ಕಾರ್ಯಕ್ರಮದ ವೇಳೆ ಪ್ರತಿಭಟನೆಗೆ ಅವಕಾಶ ಇಲ್ಲದಂತೆ ಪ್ರಗತಿಪರ ಸಂಘಟನೆಯ ಶ್ರೀ ಕೆ ಶ್ರೀನಿವಾಸ್ ಸೂಕ್ಷ್ಮವಾಗಿ ಈ ಘಟನೆ ಗ್ರಹಿಸಿ ಸುಖಾಂತ್ಯಗೊಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ