Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | 5 ಕೋಟಿ ರೂ.ವೆಚ್ಚದ ಅಭಿವೃದ್ದಿ ಕಾಮಗಾರಿ ಶಾಸಕರ ಚಾಲನೆ

ಕಾವೇರಿ ನೀರಾವರಿ ನಿಗಮದ ವತಿಯಿಂದ ಮಂಡ್ಯ ತಾಲ್ಲೂಕಿನ ಮುದ್ದಂಗೆರೆ ಗ್ರಾಮದಲ್ಲಿ ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಮಂಡ್ಯ ವಿಧಾನಸಭಾ ಶಾಸಕ ರವಿಕುಮಾರ್‌ಗೌಡ ಗಣಿಗ ಹೇಳಿದರು.

ಮಂಡ್ಯ ತಾಲೂಕಿನ ಮುದ್ದಂಗೆರೆ ಗ್ರಾಮದ ಹೆಬ್ಬಳ ಸಮೀಪವಿರುವ ಮುತ್ತರಾಯಸ್ವಾಮಿ ದೇವಾಲಯದಲ್ಲಿ ಕಾವೇರಿ ನೀರಾವರಿ ನಿಗಮ ಆಯೋಜಿಸಿದ್ದ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮುದ್ದಂಗೆರೆ ಹೆಬ್ಬಳದ ಶ್ರೀಮುತ್ತರಾಯಸ್ವಾಮಿ ದೇವಾಲಯದ ಹತ್ತಿರ ತಡೆಗೋಡೆ ನಿರ್ಮಾಣ, ಕಚ್ಚಿಗೆರೆ ಕೆರೆಯ ಸೇತುವೆ ಪುನರ್ ನಿರ್ಮಾಣ ಮತ್ತು ಬಿ.ಗೌಡಗೆರೆ ಕೆರೆ ಕೋಡಿ ಅಭಿವೃದ್ದಿ ಕಾಮಗಾರಿಯು 5 ಕೋಟಿ ರೂ.ಗಳಲ್ಲಿ ನಡೆಯುತ್ತಿದೆ, ನಿಮ್ಮೂರಿಗೆ 5 ಕೋಟಿ ರೂ.ಯೋಜನೆ ಬಂದಿರುವುದೇ ಇತಿಹಾಸ ಎಂದು ನುಡಿದರು.

ಕಳೆದ 2 ವರ್ಷದಿಂದ ಹೆಚ್ಚು ಮಳೆ ನೀರಿನಿಂದ ಮುತ್ತುರಾಯದೇವಾಸ್ಥಾನ ಮುಳುಗಡೆಯಾಗತ್ತದೆ, ತಡೆಗೋಡೆ ನಿರ್ಮಾಣಕ್ಕೆ ನಮ್ಮ ಬಳಿ ಬಂದು ಕೇಳಿದ್ದರು, ಶಾಶ್ವಾತ ಕಾಮಾಗರಿ ನಡೆಯುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಗ್ರಾಮಗಳ ರಸ್ತೆ, ಚರಂಡಿ ಅಭಿವೃದ್ದಿ ಮಾಡುತ್ತೇವೆ, ಹಗಲು ರಾತ್ರಿಯಾಗುವುದರೊಳಗೆ ಮಾಡಲು ಸಾಧ್ಯವಿಲ್ಲ, ಇನ್ನೂ 3ವರ್ಷ ಅಧಿಕಾರದಲ್ಲಿರುತ್ತೇವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುತ್ತಿದೆ ಎಂದು ತಿಳಿಸಿದರು.

ಈ ಭಾಗದ ವಿವಿಧ ಗ್ರಾಮಗಳ ಅಭಿವೃದ್ದಿಗೆ 25 ಕೋಟಿ ರೂ. ಹಾಕಿದ್ದೇವೆ, ಟೆಂಡರ್ ಪ್ರಕ್ರಿಯೆ ಮುಗಿದಿದೆ, ಕಾರ್ಯ ಸುರುವಾಗಲಿದೆ, ಕೆರಗೋಡು ಹೋಬಳಿಯಲ್ಲಿ ಅತಿಹೆಚ್ಚು ಮತಗಳನ್ನುಹಾಕಿ ನಮ್ಮ ಗೆಲುವಿಗೆ ಆಶೀರ್ವಾದ ಮಾಡಿದ್ದೀರಿ, ಅಭಿವೃದ್ದಿ ಮಾಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ನಾರಾಯಣಪ್ಪ, ರಾಮು, ಆಲಕೆರೆ ಕೃಷ್ಣೇಗೌಡ, ಆನಂದ್, ಆಲಕೆರೆ ಮದೇವ, ಕೃಷ್ಣಪ್ಪ, ನಾರಾಯಣಸ್ವಾಮಿ, ರೈತಸಂಘದ ಜಗದೀಶ್ ಹರೀಶ್,ರವಿ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ