ಮಂಡ್ಯ ತಾಲ್ಲೂಕಿನ ಮಾರಸಿಂಗನಹಳ್ಳಿಯಲ್ಲಿ ದಿವಂಗತ ಚಿಕ್ಕದೇಗೌಡ ಉ॥ ನಾಡಗೌಡರ ಧರ್ಮಪತ್ನಿ ಚನ್ನಮ್ಮನವರ ಉತ್ತರ ಕ್ರಿಯಾದಿ ಭೂಶಾಂತಿ ಅಂಗವಾಗಿ ಫೆ.22 ರಂದು ಬೆಳಿಗ್ಗೆ 8.30 ಗಂಟೆಗೆ ರಕ್ತದಾನ ಶಿಬಿರ ನಡೆಯಲಿದೆ.
ನೆಲದನಿ ಬಳಗ ಮಂಗಲ, ಮಂಡ್ಯ ತಾಲ್ಲೂ ಅಸೋಷಿಯೋಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಜಿಲ್ಲೆ -268-ಎಸ್, ಮಂಡ್ಯ, ನೆಲದನಿ ಅಲಯನ್ಸ್ ಮತ್ತು ಕೌಶಲ್ಯ ಅಲಯನ್ಸ್ ಹಾಗೂ ರಕ್ತನಿಧಿ ಕೇಂದ್ರ ಮಿಮ್ಸ್, ಮಂಡ್ಯ ವತಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ.

ನೆಲದನಿ ಬಳಗದ ಪ್ರತಾಪ್ ಟಿ ಇದೇ ಸಂದರ್ಭದಲ್ಲಿ 45 ನೇ ಬಾರಿಗೆ ರಕ್ತದಾನ ಮಾಡಲಿದ್ದಾರೆ. ಇವರು ತಮ್ಮ ಮದುವೆಯ ಸಂದರ್ಭದಲ್ಲಿಯೂ ರಕ್ತದಾನ ಮಾಡಿದ್ದು, ದಿವಂಗತ ಚನ್ನಮ್ಮನವರ ಮೊಮ್ಮೊಗರಾಗಿದ್ದಾರೆ. ಇವರು ನೆಲದನಿ ಬಳಗದ ಜೊತೆಯಲ್ಲಿ ರಕ್ತದಾನ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ರಕ್ತದಾನಗಳಿಗೆ ತೆಂಗು, ಕರಿಬೇವು ಹಾಗೂ ನುಗ್ಗೆ ಸಸಿಗಳನ್ನು ವಿತರಣೆ ಮಾಡಲಾಗುವುದು.
ಚರ್ಮರೋಗ ಮತ್ತು ಕುಷ್ಟರೋಗ ಲೈಂಗಿಕ ತಜ್ಞ ಡಾ.ಹೆಚ್.ಸಿ.ಶಂಕರೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಅಲೈಯನ್ ಕೆ.ಟಿ.ಹನುಮಂತು, ಅಲೈ ಚಂದ್ರಶೇಖರ್, ಅಲೈ ಶಶಿಧರ ಈಚಗೆರೆ, ಜಿಲ್ಲಾ ಹಿರಿಯ ನಾಗರೀಕರ ಅಂಗವಿಕಲರ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್ ಎಸ್ ಎಸ್, ರುಕ್ಮಿಣಿ ಶಂಕರೇಗೌಡ, ವಕೀಲ ಶ್ರೀನಿವಾಸ್ ಮೂರ್ತಿ, ನೆಲದನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್ ಮತ್ತು ಕುಮಾರ್ ಗೌಡ ಎಂ.ಸಿ, ರಕ್ಷಿತ್ ರಾಜ್, ಶಿವಮಲ್ಲು ಲೋಕಸರ, ಸುಬ್ರಮಣ್ಯ ಮಂಡ್ಯ, ಹೆಚ್.ಎನ್.ನಾಗೇಶ್ ಹನಿಯಂಬಾಡಿ ಮತ್ತಿತರರು ಭಾಗವಹಿಸುವರು.




