ಜ್ಞಾನದೀಪ ವಿದ್ಯಾಲಯ ಎಜುಕೇಷನ್ ಟ್ರಸ್ಟ್ ಹಾಗೂ ಅಗಮ್ಯ ಕಿಡ್ ಕಾರ್ನರ್ ವತಿಯಿಂದ ಫೆ.22 ರಂದು ನಗರದ ಗಾಂಧಿಭವನ ದಲ್ಲಿ ಅಗಮ್ಯ ಉತ್ಸವ-11 ಹಾಗೂ ಆಗ ಅಗಮ್ಯ ರತ್ನ ಅವಾರ್ಡ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಮುಖ್ಯಶಿಕ್ಷಕಿ ಆರ್.ಗೀತಾ ಮಂಜು ಪ್ರಕ ಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 10 ಗಂಟೆಗೆ ಲೇಖಕ ಕೊತ್ತತ್ತಿ ರಾಜು ಕಾರ್ಯಕ್ರಮ ಉದ್ಘಾಟಿಸುವರು. ಅಗಮ್ಯ ಕಿಡ್ಸ್ ಕಾರ್ನರ್ ಅಧ್ಯಕ್ಷ ಬಿ.ಸೋಮಶೇಖರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸು ವರು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಎಲ್.ರಮ್ಯಾ, ನೆಲದನಿ ಬಳಗದ ಅಧ್ಯಕ್ಷ ಮಂಗಲ ಪಿ.ಲಂಕೇಶ್ ಹಾಗೂ ಪ್ರತಿನಿಧಿ ಜಿಲ್ಲಾ ಹಿರಿಯ ವರದಿಗಾರ ಬಿ.ಜೆ. ಸೋಮಶೇಖರ್ ಅವರಿಗೆ ಅಗಮ್ಯ ರತ್ನ ಅವಾರ್ಡ್ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




