Tuesday, September 17, 2024

ಪ್ರಾಯೋಗಿಕ ಆವೃತ್ತಿ

ದರ್ಶನ್ ಗ್ಯಾಂಗ್ ವಿರುದ್ದ ದೋಷಾರೋಪ| ನಟ ದರ್ಶನ್ ಶೂ ಮೇಲಿತ್ತು ಕೊಲೆಯಾದ ರೇಣುಕಸ್ವಾಮಿಯ ರಕ್ತದ ಕಲೆ

ರೇಣುಕಸ್ವಾಮಿ ಕೊಲೆ  ಪ್ರಕರಣದ ಸಂಬಂಧ ಬೆಂಗಳೂರು ನಗರದ 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಹದಿನೇಳು ಮಂದಿ ಆರೋಪಿಗಳ ಪಾತ್ರವನ್ನು ವಿವರವಾಗಿ ಉಲ್ಲೇಖಿಸಲಾಗಿದೆ.

ರೇಣುಕಸ್ವಾಮಿಗೆ ನಟ ದರ್ಶನ್ ಅವರ ಆಪ್ತೆ ಪವಿತ್ರಾಗೌಡ ಮತ್ತು ಸಹಚರರು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದು ಅದರ ಫೋಟೊಗಳು ದತ್ತಾಂಶ ಮರು ಸಂಗ್ರಹದ ವೇಳೆ ಲಭ್ಯವಾಗಿವೆ. ಆರೋಪಿಗಳ ಕ್ರೌರ್ಯ ಅನಾವರಣವಾಗಿದೆ.

ಎ1 ಆರೋಪಿ ಪವಿತ್ರಾಗೌಡ

ರೇಣುಕಸ್ವಾಮಿ ಕೊಲೆಗೆ ಮೂಲ ಕಾರಣ ಪವಿತ್ರ ಗೌಡ ಆಗಿದ್ದು,ಆಕೆಯ ಪ್ರಚೋದನೆಯಿಂದಲೇ ಭಯಾನವಾಗಿ ಕೃತ್ಯ ನಡೆದಿದೆ. ಕೃತ್ಯದ ಸಮಯದಲ್ಲಿ ಅಲ್ಲೇ ಇರುವುದಕ್ಕೆ ಸಿಸಿಟಿವಿಯ ದೃಶ್ಯ, ಮೊಬೈಲ್ ಕೃತ್ಯದ ಸ್ಥಳದಲ್ಲಿ ಆಕ್ಟಿವ್ ಆಗಿರುವುದು ಸಾಕ್ಷಿಯಾಗಿದೆ.

ಎ2 ಆರೋಪಿ ದರ್ಶನ್

ರೇಣುಕಸ್ವಾಮಿ ಅಪಹರಣ ಮಾಡಿಸಿದ್ದು , ಹಲ್ಲೆ ಮಾಡಿದ್ದು, ಕೊಲೆ ನಂತರ ಮುಚ್ಚಿಹಾಕಲು ಹಣ ನೀಡಿರುವುದು,ಕೊಲೆ ನಡೆದ ಸ್ಥಳದಲ್ಲಿ ಇರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಕೊಲೆ ಬಳಿಕ ಸ್ಥಳದಿಂದ ಪರಾರಿಯಾರಿಯಾಗುವ ದೃಶ್ಯ ಬಟ್ಟೆ ಮತ್ತು ಶೂನಲ್ಲಿ ರೇಣುಕಸ್ವಾಮಿ ರಕ್ತ ಇರುವುದು ಪತ್ತೆಯಾಗಿ ದರ್ಶನ್  ಹಲ್ಲೆ, ಕೊಲೆಯಲ್ಲಿ ಭಾಗಿರುವುದು ದೃಢವಾಗಿದೆ.

ಎ3 ಆರೋಪಿ ಪವನ್

ಪವಿತ್ರ ಜೊತೆಗೆ ಇದ್ದು ,ಅಪಹರಣ ಮಾಡುವಾಗ ರಾಘವೇಂದ್ರ ಜೊತೆಗೆ ಸಂಪರ್ಕದಲ್ಲಿದ್ದು, ಶೆಡ್‌ಗೆ ಹೋಗಿ ಹಲ್ಲೆ ಮಾಡಿರುವುದು. ಬೇರೊಂದು ಇನ್ಸ್ಟಾಗ್ರಾಮ್ ಅಕೌಂಟ್ ಮಾಡಿ ರೇಣುಕಸ್ವಾಮಿ ಜೊತೆಗೆ ಚಾಟ್ ಮಾಡಿ ಕಿಡ್ನಾಪ್ ಮಾಡುವಂತೆ ಸೂಚನೆ ನೀಡಿರುವುದರ ಸಾಕ್ಷಿ ಲಭ್ಯವಿದೆ.

ಆರೋಪಿ ರಾಘವೇಂದ್ರ

ದರ್ಶನ್ ಅಭಿಮಾನಿಗಳ ಸಂಘದ ಚಿತ್ರದುರ್ಗ ಘಟಕದ ಅದ್ಯಕ್ಷನಾದ ರಾಘವೇಂದ್ರ ರೇಣುಕಸ್ವಾಮಿ ಅಪಹರಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿರುವುದು, ಕೊಲೆಯಾದ ಸ್ಥಳದಲ್ಲಿ ಹಾಜರಿರುವುದು ಕೊಲೆ ಬಳಿಕ ರೇಣುಕಾಸ್ವಾಮಿ ಮೈ ಮೇಲಿದ್ದ ಆಭರಣ ತೆಗೆದಿರುವುದರ ಸಾಕ್ಷಿ ಲಭ್ಯವಾಗಿದೆ.

ಆರೋಪಿ ನಂದೀಶ

ಶೆಡ್‌ನಲ್ಲಿ ರೇಣುಕಸ್ವಾಮಿ ಸ್ವಾಮಿಗೆ ತೀವ್ರವಾಗಿ ಹಲ್ಲೆ ಮಾಡಿರುವುದು ಕೊಲೆ ಬಳಿಕ ವಾಹನದಲ್ಲಿ ಮೃತ ದೇಹ ಇಟ್ಟಿದ್ದು, ದೇಹ ಹೊತ್ತುಕೊಂಡು ಬಂದಿದ್ದ ದೃಶ್ಯ ಪತ್ತೆಯಾಗಿದೆ.

ಆರೋಪಿ ಜಗದೀಶ್ ಅಲಿಯಾಸ್ ಜಗ್ಗ

ರೇಣುಕಸ್ವಾಮಿ ಅಪಹರಣ ಮಾಡಿಕೊಂಡು ಚಿತ್ರದುರ್ಗದಿಂದ ಶೆಡ್‌ಗೆ ಕರೆದುಕೊಂಡು ಬಂದಿದ್ದ ತಂಡದ ಸದಸ್ಯ. ಕೊಲೆ ಮಾಡಿದ ಬಳಿಕ ಪರಾರಿಯಾಗಿರುವುದು ಕಿಡ್ನಾಪ್ ನಂತರ ಕರೆತರುವಾಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆರೋಪಿ ಅನುಕುಮಾರ್ ಅಲಿಯಾಸ್ ಅನು

ಚಿತ್ರದುರ್ಗದಿಂದ ರೇಣುಕಸ್ವಾಮಿ ಅಪಹರಣ ಮಾಡಿಕೊಂಡು ಶೆಡ್ ಕರೆತಂದು ಕೊಲೆ ಮಾಡಿದ ಬಳಿಕ ಪರಾರಿಯಾಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರವಿ ಅಲಿಯಾಸ್ ರವಿಶಂಕರ್

ಕಾರು ಚಾಲಕ. ಈತ ರೇಣುಕಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದ. ಕೊಲೆ ಬಳಿಕ ಕಾರಿನಲ್ಲಿ ಉಳಿದ ಆರೋಪಿಗಳನ್ನು ಕರೆದುಕೊಂಡು ಹೋಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆರೋಪಿ ರಾಜು ಅಲಿಯಾಸ್ ಧನರಾಜ್

ನಟ ದರ್ಶನ್ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಕೆಲಸ ಮಾಡಿಕೊಂಡಿದ್ದ ಧನರಾಜ್ ರೇಣುಕಸ್ವಾಮಿಗೆ ಕರೆಂಟ್ ಶಾಕ್ ನೀಡಿ ಮೃತ ದೇಹ ಸಾಗಾಣೆ ಮಾಡಿರುವ ಸಾಕ್ಷಿ ಲಭ್ಯ.

ಆರೋಪಿ ವಿನಯ್

ನಟ ದರ್ಶನ್ ಆಪ್ತನಾಗಿದ್ದು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ. ಈತ ಹಲ್ಲೆ ಮಾಡಿದ್ದವರ ಪೈಕಿ ಪ್ರಮುಖ ವ್ಯಕ್ತಿ. ಮನಸ್ಸಿಗೆ ಬಂದಹಾಗೆ ಹಲ್ಲೆ ಮಾಡಿದ್ದಾನೆ. ಲಾಠಿ ಬೀಸಿ ಬೀಸಿ ಹೊಡೆದಿರುವ, ಕೊಲೆಗೂ ಮುನ್ನ ದರ್ಶನ್ ಜೊತೆಗಿರುವುದು, ಸ್ಟೋನಿ ಬ್ರೂಕ್‌ನಲ್ಲಿ ನಡೆದ ಕೊಲೆ ಮೊದಲ ಮಾತುಕತೆಯಲ್ಲಿ ಭಾಗಿರುವುದು ಪತ್ತೆಯಾಗಿದೆ.

ಆರೋಪಿ ನಾಗರಾಜು ಅಲಿಯಾಸ್ ನಾಗ

ನಟ ದರ್ಶನ್‌ನ ಅನಧಿಕೃತ ಮ್ಯಾನೇಜರ್  ಪಾರ್ಟಿ ಕುಡಿತ ಸೇರಿ ಎಲ್ಲ ಕಡೆ ಇರುತ್ತಿದ್ದ. ಹಲ್ಲೆ ಮಾಡುವಾಗ ಜೊತೆಗೆ ಇದ್ದು ಹಲ್ಲೆ ಮಾಡಿ ಕಾಲಿನಿಂದಲೂ ಒದ್ದಿದ್ದ. ಬೇರೆಯವರಿಗೆ ಶರಣಾಗುವಂತೆ ವ್ಯವಸ್ಥೆ ಮಾಡುವಲ್ಲಿಯೂ ಪಾತ್ರ ನಿರ್ವಹಿಸಿದ್ದಾನೆ.

ಆರೋಪಿ ಲಕ್ಷ್ಮಣ್

ದರ್ಶನ್ ಕಾರು ಚಾಲಕನಾದ ಲಕ್ಷ್ಮಣ್ ,ಕೊಲೆ ಮಾಡುವಾಗ ಸ್ಥಳದಲ್ಲಿದ್ದು ಹಲ್ಲೆ ಮಾಡಿದ್ದು, ಮೃತ ದೇಹವನ್ನು ಎಸೆಯಲು ಬೇಕಾದ ವ್ಯವಸ್ಥೆ ಮಾಡಿದ್ದು ಕೊಲೆಗೆ ಮೊದಲೆ ಜೊತೆಗೆ ಇರುವುದು ಕೊಲೆಯ ಬಳಿಕ ಎ2 ಜೊತೆಗೆ ಪರಾರಿಯಾಗಲು ಸಹಾಯ ಸಹ ಮಾಡಿದ್ದಾನೆ.

ಆರೋಪಿ ದೀಪಕ್

ದರ್ಶನ್ ಆಪ್ತ. ಹಲ್ಲೆ ಮಾಡಿದ್ದು ನಂತರ ದರ್ಶನ್, ಪ್ರದೋಶ್ ಹೇಳಿದಂತೆ ಹಣವನ್ನು ನಿಕಿಲ್, ಕೇಶವಮೂರ್ತ, ಮತ್ತು ಕಾರ್ತಿಕ್‌ಗೆ ಹೇಳಿ ಒಪ್ಪಿಸಿ ಹಣ ನೀಡಿದ್ದ ತಲಾ ಐದು ಲಕ್ಷ ಹಣ ನೀಡಿದ್ದ. ಕೊಲೆ ನಡೆದ ಶೆಡ್ ಸ್ಥಳದ ಜವಾಬ್ದಾರಿ ಹೊಂದಿದ್ದ.

ಆರೋಪಿ ಪ್ರದೂಶ್

ನಟ ದರ್ಶನ್ ಜೊತೆಗೆ ಇದ್ದುಕೊಂಡು ಹಲ್ಲೆ ಮಾಡಿದವನು. ನಂತರ ದರ್ಶನ್ ಜೊತೆಗೆ ವ್ಯವಹಾರ, ಕೊಲೆ ಮಾಡಿದ್ದವರ ಖರ್ಚಿಗಾಗಿ ಮೂವತ್ತು ಲಕ್ಷ ಹಣವನ್ನು ಪಡೆದುತಂದಿದ್ದ. ಆರೋಪಿಗಳು ಭಯ ಪಟ್ಟಾಗ ಮತ್ತೆ ದರ್ಶನ್ ಬೇಟಿ ಮಾಡಿಸಿ ಮೂವರನ್ನು ಶರಣಾಗತಿ ಮಾಡಿಸಿದ್ದ.

ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆ

ಶೆಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದ, ಹಣ ನೀಡಿದ ಬಳಿಕ ಶವ ಸಾಗಿಸಿದ್ದ. ನಂತರ ಪೊಲೀಸರ ಮುಂದೆ ಶರಣಾಗಿದ್ದನು.

ಆರೋಪಿ ಕೇಶವಮೂರ್ತಿ

ಕೊಲೆ ಮಾಡಿದ್ದ ಬಳಿಕ ಐದು ಲಕ್ಷ ಹಣ ಪಡೆದುಕೊಂಡು ಮೃತ ದೇಹವನ್ನು ಸಾಗಿಸುವ ಕೆಲಸ ಮಾಡಿದ್ದ. ಆಮೇಲೆ ಪೊಲೀಸರಿಗೆ ಶರಣಾಗಿದ್ದನು.

ಆರೋಪಿ ನಿಖಿಲ್

ಕೊಲೆ ಮಾಡಿದ್ದ ಬಳಿಕ ಐದು ಲಕ್ಷ ಹಣ ಪಡೆದುಕೊಂಡು ಮೃತ ದೇಹವನ್ನು ಸಾಗಿಸುವ ಕೆಲಸ ಮಾಡಿದ್ದ. ಅಮೇಲೆ ಪೊಲೀಸರ ಎದುರು ಶರಣಾಗಿದ್ದನು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!