Friday, November 20, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಭಕ್ತರ ಸಮ್ಮುಖದಲ್ಲಿ ಮಾರೇಹಳ್ಳಿ ಶ್ರೀಲಕ್ಷ್ಮಿನರಸಿಂಹಸ್ವಾಮಿಯ ಬ್ರಹ್ಮ ರಥೋತ್ಸವ

ಇತಿಹಾಸ ಪ್ರಸಿದ್ದಿ ಪಡೆದಿರುವ ಮಳವಳ್ಳಿ ಪಟ್ಟಣದ ಹೊರ ಭಾಗದ ಮಾರೇಹಳ್ಳಿಯಲ್ಲಿ ನೆಲೆಸಿರುವ ಶ್ರೀ ಲಕ್ಷ್ಮಿನರಸಿಂಹಸ್ವಾಮಿಯ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಪ್ರಧಾನವಾಗಿ ನಡೆಯಿತು.

ಶಾಸಕ ಪಿ.ಎಂ ನರೇಂದ್ರಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ಮಾತನಾಡಿ, ಶ್ರೀ ಲಕ್ಷ್ಮಿನರಸಿಂಹಸ್ವಾಮಿಯು ಸಾವಿರಾರು ಭಕ್ತರನ್ನು ಹೊಂದಿದ್ದಾರೆ, ಸಕಾಲಕ್ಕೆ ಮಳೆ ಬೆಳೆಯಾಗಿ ಜನರು ನೆಮ್ಮದಿಯ ಜೀವನ ನಡೆಸಲಿ ಎಂದು ಆಶಿಸಿದರು.

ಬೆಳಿಗ್ಗೆ 11ರ ವೇಳೆಯಲ್ಲಿ ಮಂಟಪೋತ್ಸವ ನಡೆಯಿತು. ನಂತರ ಮಧ್ಯಾಹ್ನ 1 ಗಂಟೆಗೆ ದೇವಸ್ಥಾನದಲ್ಲಿ ಸಂಪ್ರದಾಯಕವಾಗಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ 1.30ರ ವೇಳೆಗೆ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ರಥೋತ್ಸವಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ತಹಶೀಲ್ದಾರ್ ಕೆ.ಎನ್.ಲೋಕೇಶ್ ಪೂಜೆ ಸಲ್ಲಿಸಿ ಈಡುಗಾಯಿ ಹೊಡೆಯುವುದರ ಮೂಲಕ ರಥ ಎಳೆಯಲು ಚಾಲನೆ ನೀಡಿದರು. ಜಾನಪದ ಕಲಾ ಮೇಳದೊಂದಿಗೆ ರಥೋತ್ಸವವು ಮುಂದುವರೆಯಿತು.

ಲಕ್ಷ್ಮಿ ನರಸಿಂಹಸ್ವಾಮಿ ಉತ್ಸವ ಮೂರ್ತಿಯನ್ನು ರಥಕ್ಕೆ ಪ್ರತಿಷ್ಠಾಪಿಸುವ ವೇಳೆ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಪಿ.ಎಂ ನರೇಂದ್ರಸ್ವಾಮಿ ಅವರಿಗೆ ಅರ್ಚಕರು ಗೌರವ ಸಲ್ಲಿಸಿದರು.

ಹೊಸದಾಗಿ ಮದುವೆಯಾಗಿದ್ದ ನವ ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಣ್ಣು ಜವನ ಎಸೆದರು. ಸಹಸ್ರರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ರಥಕ್ಕೆ ಪೂಜೆ ಸಲ್ಲಿಸಿ ಹಣ್ಣು ಜವನ ಎಸೆಯುವುದರ ಮೂಲಕ ಧನ್ಯತೆ ಮರೆದರು.

ವಿವಿಧ ಜಿಲ್ಲೆಯ ನಾನಾ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಗೊಂವಿದ ಗೊಂವಿದ ಎಂಬ ಘೋಷಣೆಯೊಂದಿಗೆ ರಥ ಎಳೆದು ಸಂಭ್ರಮಿಸಿದರು. ದೇವಸ್ಥಾನದ ಆವರಣದ ಸುತ್ತಲೂ ರಥವನ್ನು ಎಳೆದು ಭಕ್ತಿಭಾವ ಮೆರೆದರು. ರಥವು ಮಧ್ಯಾಹ್ನ 2 ಗಂಟೆಯ ವೇಳೆಗೆ ಸ್ವಸ್ಥಾನಕ್ಕೆ ಬಂದು ನಿಲ್ಲಿಸಲಾಯಿತು. ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಬಂದ ಭಕ್ತರಿಗೆ ದೇವಸ್ಥಾನದ ವತಿಯಿಂದ ಸಿಹಿಪೊಂಗಲ್, ಬಿಸಿಬೆಳೆ ಬಾತ್, ಮೊಸರನ್ನ ಹಾಗೂ ಸಿಹಿಯನ್ನು ವಿತರಿಸಲಾಯಿತು. ದೇವಸ್ಥಾನದ ಹೊರವಲಯದಲ್ಲಿ ಹಲವೆಡೆ ಭಕ್ತರಿಗೆ ಹರಕೆ ಹೊತ್ತವರು ಅನ್ನಸಂತರ್ಪಣೆ ಮಾಡಿದರು.

ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ದೇವಸ್ಥಾನದ ಮಹಾದ್ವಾರದಲ್ಲಿಯೇ ಕಾರು ಮತ್ತು ಸ್ಕೂಟರ್ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸುಮಾರು ಒಂದು ಕಿ,ಮೀ ದೂರ ಭಕ್ತರ ದೇವಸ್ಥಾನಕ್ಕೆ ನಡೆದುಕೊಂಡೇ ಸಾಗುವಂತಾಯಿತು. ಯಾವುದೇ ಅಡಚಣೆ ಇಲ್ಲದೇ ರಥೋತ್ಸವವು ಭಕ್ತಿ ಪ್ರಧಾನವಾಗಿ ನಡೆಯಿತು.

ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಎಂ.ಎಸ್.ಶಿವಸ್ವಾಮಿ, ಪುಟ್ಟಸ್ವಾಮಿ, ಎಂ.ಆರ್.ರಾಜಶೇಖರ್, ಮುಖ್ಯಾಧಿಕಾರಿ ಎಂ.ಎಸ್.ಮಹದೇವ್, ಮಾಜಿ ಅಧ್ಯಕ್ಷರಾದ ದೊಡ್ಡಯ್ಯ, ಗಂಗರಾಜೇ ಅರಸು, ಕಿರಣ್ ಶಂಕರ್, ಬ್ಲಾಕ್ ಅಧ್ಯಕ್ಷರಾದ ಕೆ.ಜೆ.ದೇವರಾಜು, ಜಿ.ಪಂ.ಮಾಜಿ ಸದಸ್ಯ ಆರ್.ಎನ್.ವಿಶ್ವಾಸ್, ತಾ.ಪಂ.ಮಾಜಿ ಉಪಾಧ್ಯಕ್ಷ ಸಿ.ಮಾಧು, ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಎಸ್.ದ್ಯಾಪೇಗೌಡ, ವಕೀಲ ಜಗದೀಶ್, ಮುಖಂಡರಾದ ರಮೇಶ್, ಶಿವಮಾದೇಗೌಡ, ದಿಲೀಪ್ ಕುಮಾರ್(ವಿಶ್ವ), ಶಿವರಾಜ್, ಬಂಕ್ ಮಹದೇವು, ಚೇತನ್ ಸೇರಿದಂತೆ ಇತರರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ