Thursday, November 19, 2026

ಪ್ರಾಯೋಗಿಕ ಆವೃತ್ತಿ

ಮೆದುಳಿನ ಮಂಪರು

✍️ ಮಾಚಯ್ಯ ಎಂ ಹಿಪ್ಪರಗಿ

ಹೌದು, ಖಂಡಿತ….
ಸೋತು ನೋವಿನಲ್ಲಿದ್ದ ತಂಡವನು
ಡ್ರೆಸ್ ರೂಮಿಗೆ ಹೋಗಿ
ಅವರು ಸಂತೈಸಲೇಬೇಕಿತ್ತು
ಯಾಕೆಂದರೆ, ಅವರೊಬ್ಬ ಪ್ರಧಾನಿ
ಅದು ಅವರ ಹೊಣೆ!

ಜೊತೆಗೆ,

ಅವರು ಮಣಿಪುರಕ್ಕೂ ತೆರಳಬೇಕಿತ್ತು;
ನಡುಬೀದಿಯಲ್ಲಿ ಬೆತ್ತಲೆಗೊಳಿಸಲ್ಪಟ್ಟ
ಆ ಇಬ್ಬರು ತಾಯಂದಿರನ್ನು
ಸಂತೈಸಲು…

ಅವರು, ದಿಲ್ಲಿಯ ನಡುಬೀದಿಯನ್ನೂ ತಾಕಬೇಕಿತ್ತು;
ತಮ್ಮ ಮೇಲಾದ ದೌರ್ಜನ್ಯವ
ಖಂಡಿಸಿ ಪ್ರತಿಭಟಿಸುತ್ತಿದ್ದ
ಮಹಿಳಾ ಕುಸ್ತಿಪಟುಗಳ
ಸಂತೈಸಲು….

ಹತ್ರಾಸ್, ಉನ್ನಾವೊ,
ಕಥುವಾಗಳಿಗೂ ತೆರಳಬೇಕಿತ್ತು;
ಅಮಾನುಷ ಅತ್ಯಾಚಾರಕ್ಕೆ ತುತ್ತಾಗಿ
ಪ್ರಾಣ ಕಳೆದುಕೊಂಡ ಆ ಆತ್ಮಗಳನು
ಸಂತೈಸಲು….

ಯಾಕೆಂದರೆ,
ಈ ಎಲ್ಲರಿಗೂ ಇವರೇ
ಪ್ರಧಾನಿಯಾಗಿದ್ದರು;
ಕರ್ತವ್ಯಗಳು ಅಲ್ಲಿಯೂ ಇವರಿಗೆ
ಕೈಬೀಸಿದ್ದವು….

ಕಾಣುವುದು ಕಣ್ಣಾದರೂ
ಅರಿಯುವುದು ಮೆದುಳು;
ಕಣ್ಣಿಗೆ ಪೊರೆ ಮುತ್ತಿದರೂ
ಮೆದುಳಿಗೆ ಮಂಪರು ಅಡರದಿರಲಿ;
ನಾಟಕವನು ಕಂಡ ನಂತರವೂ
ಬೂಟಾಟಿಕೆಗೆ ನಮ್ಮ ತಲೆ ತೂಗದಿರಲಿ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ