Saturday, September 28, 2024

ಪ್ರಾಯೋಗಿಕ ಆವೃತ್ತಿ

ಬ್ರೆಡ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆದ ಬಡ ಮಹಿಳೆಯ ಮಗಳು !

ದಕ್ಷಿಣ ಆಫ್ರಿಕಾದ ಐದು ವರ್ಷದ ಒಂಟಿ ಮಹಿಳೆಯ ಒಬ್ಬಳೇ ಮಗಳು ತನ್ನ ನಿಷ್ಕಲ್ಮಶ ನಗೆಯಿಂದಾಗಿ ಬ್ರೆಡ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿರುವ ಅಚ್ಚರಿಯ ಘಟನೆ ನಡೆದಿದೆ.

ಇತ್ತೀಚೆಗೆ ಅಮ್ಮ ತನ್ನ ಅವಳನ್ನು ರೊಟ್ಟಿ ಕೊಳ್ಳಲು ಅಂಗಡಿಗೆ ಕಳುಹಿಸಿದಳು. ಆಕೆ ರೊಟ್ಟಿಯೊಂದಿಗೆ ಹಿಂದಿರುಗುತ್ತಿದ್ದಾಗ ಅಪರಿಚಿತನೊಬ್ಬ ಆಕೆಯ ಫೋಟೋ ತೆಗೆದಿದ್ದ. ಆಕೆಯು ಸಂಭ್ರಮದಲ್ಲಿರುವ ಆ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕರ ಒತ್ತಡದ ನಂತರ, ಬ್ರೆಡ್ ಕಂಪನಿಯು ಅವಳನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಯ್ಕೆ ಮಾಡಿಕೊಂಡಿದೆ.

ಆಕೆಯ ಫೋಟೋ ಈಗ ದಕ್ಷಿಣ ಆಫ್ರಿಕಾದ ಬ್ರೆಡ್ ಕಂಪನಿಯ ಜಾಹೀರಾತಿನಲ್ಲಿ ಮಿಂಚುತ್ತಿದೆ. ಇದಕ್ಕೆ ಪ್ರತಿಯಾಗಿ, ಬ್ರೆಡ್ ಕಂಪನಿಯು ತಾಯಿ ಮತ್ತು ಮಗಳಿಗೆ ಎರಡು ಕೋಣೆಗಳ ಮನೆಯನ್ನು ಕೂಡ ನಿರ್ಮಿಸಿ ಕೊಟ್ಟಿದೆ. ಇದಲ್ಲದೆ, ಕಂಪನಿಯು ಪದವಿಯವರೆಗಿನ ಆ ಬಾಲಕಿಯ ಶೈಕ್ಷಣಿಕ ವೆಚ್ಚವನ್ನು ಸಹ ಭರಿಸಲಿದೆ.

ಜಗತ್ತಿನಲ್ಲಿ ಇಂತಹವುಗಳು ನಡೆಯುತ್ತವೆ_ !!!!! ಎಂಬುದು ಅಚ್ಚರಿಯೇ ಸರಿ, ಛಾಯಾಗ್ರಾಹಕನೊಬ್ಬ ಸೆರೆ ಹಿಡಿದ ಬಾಲಕಿಯೊಬ್ಬಳ ಸಂತೋಷದ ಸರಳ ಕ್ಷಣವು ವ್ಯಕ್ತಿಯ ಜೀವನವನ್ನು ಹೇಗೆ ಉತ್ತಮವಾಗಿ ಬದಲಾಯಿಸುತ್ತದೆ ಎಂಬುದಕ್ಕೆ ಈ  ಘಟನೆ ಉತ್ತಮ ಉದಾಹರಣೆಯಾಗಿದೆ.

ಕೃಪೆ: FB (ಮಲಯಾಳಂ)

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!