Tuesday, November 24, 2026

ಪ್ರಾಯೋಗಿಕ ಆವೃತ್ತಿ

ಕರ್ನಾಟಕ ಬಂದ್ ಗೆ ಬೆಂಬಲ | ಮದ್ದೂರಿನಲ್ಲಿ ವ್ಯಾಪಾರ ವಹಿವಾಟು ಬಂದ್

ಮದ್ದೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಮದ್ದೂರು ಬಂದ್ ಸ್ಥಳೀಯ ವ್ಯಾಪಾರಿಗಳು ವ್ಯಾಪಾರ ವಹಿವಾಟು ಬಂದ್ ಮಾಡಿ ಬೆಂಬಲ ನೀಡಿದರು.

ವರ್ತಕರು ಸ್ವ ಪ್ರೇರಿತವಾಗಿ ತಮ್ಮ ವಹಿವಾಟು ಸ್ಥಗಿತಗೊಳಿಸಿ ಬಂದ್ ಯಶಸ್ವಿಗೊಳಿಸಿದರು. ಬೆಳಗಾವಿಯ ಸಣ್ಣ ಬಾಳೆಕುಂದ್ರಿ ಗ್ರಾಮದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕ ಮಹದೇವ್ ಅವರ ಮೇಲೆ ನಡೆದ‌ ಹಲ್ಲೆ‌ ಖಂಡಿಸಿ ಮತ್ತು ರಾಜ್ಯದ ಗಡಿ ಭಾಗದಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯ ಖಂಡಿಸಿದರು.

ಕನ್ನಡ ಪರ ಹೋರಾಟಗಾರ ಮ.ನ.ಪ್ರಸನ್ನ ಮಾತನಾಡಿ, ಕನ್ನಡಿಗರ ಮೇಲೆ‌ ಹಲ್ಲೆ ನಡೆಸುವ ಮರಾಠಿಗರ ಮೇಲೆ‌ ಗೂಂಡಾ  ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು

ಕನ್ನಡಿಗರ ಮೇಲೆ ದೌರ್ಜನ್ಯಕ್ಕೆ ಕುಮ್ಮಕ್ಕು ನೀಡುತ್ತಿರುವ ಎಂ.ಇ.ಎಸ್ ಸಂಘಟನೆ ನಿಷೇಧಿಸಬೇಕು‌. ಕನ್ನಡಿಗರ ಹಿತ ರಕ್ಷಿಸಲು ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್, ನ.ಲಿ.ಕೃಷ್ಣ, ದೇಶಹಳ್ಳಿ ಬೋರಣ್ಣ, ಗೊರವನಹಳ್ಳಿ‌ ಪ್ರಸನ್ನ, ಮಹಿಳಾ ಪರ ಹೊರಾಟಗಾರ್ತಿ ರಜನಿ ರಾಜ್, ಗ್ರಾ.ಪಂ.ಸದಸ್ಯೆ ನಳಿನಾ ಶಂಕರಪುರ, ಅವಿನಾಶ್ ತಗ್ಗಹಳ್ಳಿ, ಗೋಪಾಲ್, ತೊರೆಶೆಟ್ಟಹಳ್ಳಿ‌ ಪ್ರಸನ್ನ, ನಿವೃತ್ತ ಶಿಕ್ಷಕ ಚನ್ನಪ್ಪ‌ಆಲೂರು, ದಲಿತ ಮುಖಂಡರಾದ ಸೊಮನಹಳ್ಳಿ‌ ಅಂದಾನಿ, ಮರಳಿಗ ಶಿವರಾಜು, ಆತಗೂರು ಲಿಂಗಯ್ಯ, ಹುಲಿಗೆರೆಪುರ ಶ್ರೀಧರ್, ದೇಶಹಳ್ಳಿ ಸಿದ್ದರಾಜು, ಚಂದ್ರು, ನಾಡಪ್ರಭು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಪ್ಪ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಕಾರ್ಯದರ್ಶಿ ಹಾಗಲಹಳ್ಳಿ ಬಸವರಾಜ್, ಹಾಲು ಉತ್ಪಾದಕರ ಹೋರಾಟ ಸಮಿತಿಯ ಅಧ್ಯಕ್ಷ ಜಿ ಕೆ ರಾಜು, ಮದ್ದೂರು ಸತೀಶ್, ಸವಿತ ಸಮಾಜದ ಶಶಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ