Tuesday, November 24, 2026

ಪ್ರಾಯೋಗಿಕ ಆವೃತ್ತಿ

ಪಟ್ಟಭದ್ರರಿಂದ ಸರ್ಕಾರಿ ಜಾಗದ ಅತಿಕ್ರಮಣ : ಆರೋಪ

ಮಂಡ್ಯ ತಾಲ್ಲೂಕಿನ ದೊಡ್ಡಗರುಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ಪಟ್ಟಭದ್ರರು ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆಂದು ಆರೋಪಿಸಿರುವ ಗ್ರಾಮದ ಮುಖಂಡ ಜೆ.ರಾಜಶೇಖರಯ್ಯ, ಕೂಡಲೇ ಜಿಲ್ಲಾಡಳಿತ ಈ ಜಾಗವನ್ನು ತೆರೆವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಹಣಬಲ, ತೋಳ್ಬಲ ಬಳಸಿಕೊಂಡು ಕೆಲ ವ್ಯಕ್ತಿಗಳು ಸರ್ಕಾರಿ ಜಮೀನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ತಿರುಗಾಡುವ ರಸ್ತೆ, ರಂಗಸ್ಥಳ, ದೇವಸ್ಥಾನದ ಜಾಗಗಳನ್ನು ಅತಿಕ್ರಮಣ ಮಾಡಲಾಗಿದೆ ಎಂದು ದೂರಿದರು.

ಗಾಮದ ದಿ.ಜಿ.ಎಸ್.ಪಾಪಣ್ಣ ಅವರ ಪುತ್ರ ಜಿ.ಪಿ. ಸತೀಶ್ ನಿರ್ಮಾಣ ಮಾಡುತ್ತಿರುವ ಸ್ವತ್ತಿನ ಸಂಖ್ಯೆ 70 ರ ಮನೆ ಕ್ರಯದ ಸ್ವತ್ತಾಗಿದ್ದು, ಕ್ರಯದ ಸ್ವತ್ತಿಗಿಂತ 3 ಪಟ್ಟು ಹೆಚ್ಚಾಗಿ ರಂಗ ಮತ್ತು ರಸ್ತೆ ಜಾಗಗಳನ್ನು ಆಕ್ರಮವಾಗಿ ನಿರ್ಮಾಣ ಮಾಡಲಾಗಿದೆ.  ಸ್ವತ್ತಿನ ಸಂಖ್ಯೆ 71 ರ ಆಳತೆ 39 X 25 ಅಡಿ ಇದ್ದು, ಇದನ್ನು ಕ್ರಯಕ್ಕೆ ತೆಗೆದುಕೊಳ್ಳುವಾಗ ಸಾರ್ವಜನಿಕರು ತಿರುಗಾಡುತ್ತಿದ್ದ ಸುಮಾರು 20 ಅಡಿ ಜಾಗವನ್ನು ಅಂದರೆ 60 X 25 ಎಂದು ಕ್ರಯಕ್ಕೆ ತೆಗೆದುಕೊಂಡು ಈ ಸ್ವತ್ತನ್ನು ಖಾತೆ ಮಾಡಿಸಿಕೊಂಡು 60 X 25 ಕ್ಕೆ ಮನೆ ನಿರ್ಮಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ನಿವೃತ್ತ ಕಾರ್ಯಪಾಲಕ ಅಭಿಯಂತರು (EE) ಜಿ.ಎಸ್.ನಾಗರಾಜು ಇವರು ಸ್ವತ್ತಿನ ಸಂಖ್ಯೆ 209 ಇದನ್ನು ಕ್ರಯಕ್ಕೆ ಪಡೆಯುವಾಗ 45 X 45 ತೆಗೆದುಕೊಂಡು 50 X 45 ಕ್ಕೆ ಮನೆ ನಿರ್ಮಾಣ ಮಾಡುವ ಜೊತೆಗೆ ರಸ್ತೆಯೇ ಇಲ್ಲದ ದೇವಸ್ಥಾನದ ಜಾಗಕ್ಕೆ ರಸ್ತೆ ಮಾಡಿಕೊಂಡು ದೇವಸ್ಥಾನದ ಮೂಲವನ್ನೇ ಬದಲಿಸಿಕೊಂಡಿದ್ದಾರೆ. ಅಲ್ಲದೇ ಇಂಜಿನಿಯರ್ ಜಿ.ಎಸ್‌.ನಾಗರಾಜು ಅವರ ಚಿಕ್ಕಪ್ಪನ ಮಗ ಕೃಷ್ಣಗೌಡ ಮನೆ ಕಟ್ಟಿದ್ದು, ಅಲ್ಲಿಯೂ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ಗ್ರಾಮಸ್ಥರು ಪ್ರಶ್ನಿಸಿದರೆ, ದರ್ಪ, ದಬ್ಬಾಳಿಕೆಯಿಂದ ಬೆದರಿಸಲಾಗುತ್ತಿದೆ ಎಂದು ದೂರಿದರು.

ಗ್ರಾಮದಲ್ಲಿ ಕಾಲಭೈರವೇಶ್ವರ ದೇವರ ಹೆಸರಿನಲ್ಲಿ ಈ ಹಿಂದೆ ಟ್ರಸ್ಟ್ ಮಾಡಿಕೊಂಡು ಕೋಟಿಗಟ್ಟಲೆ ಹಣ ಸಂಗ್ರಹಣೆ ಮಾಡಿಕೊಂಡು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ಅಕ್ರಮಗಳನ್ನು ಪಂಚಾಯಿತಿ ಆಡಳಿತಕ್ಕೆ ತಂದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರು ಕೊಟ್ಟರೆ ಅವರು, ಮೇಲಾಧಿಕಾರಿಗಳಿಗೆ ದೂರು ಕೊಡಿ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೆ, ತಹಶೀಲ್ದಾರ್ ಅವರಿಗೆ ಹಲವಾರು ಬಾರಿ ದೂರು ನೀಡಿದ್ದದೂ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಸರ್ಕಾರಿ ಸ್ವತ್ತನ್ನು ರಕ್ಷಣೆ ಮಾಡಬೇಕೆಂದು ಆಗ್ರಹಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ