ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಕುರಿತು ಮದ್ದೂರು ಶಾಸಕ ಕೆ.ಎಂ ಉದಯ್ ನೀಡಿರುವ ಅವಹೇಳನಕಾರಿ ಹೇಳಿಕೆಯೂ ಅವರಿಗೆ ಶೋಭೆ ತರುವುದಿಲ್ಲ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.ಸಿ.ತಮ್ಮಣ್ಣ ಅವರ ಕುಟುಂಬ ಅವರ ತಾತನ ಕಾಲದಿಂದಲೂ ಸುತ್ತಮುತ್ತಲ ಗ್ರಾಮಗಳ ಜನತೆಗೆ ಗೌರವಯುತವಾದ ಕುಟುಂಬವಾಗಿದೆ, ರವೀಂದ್ರ ಶ್ರೀಕಂಠಯ್ಯ ಅವರ ತಾತ ಚುಂಚೇಗೌಡರು ಮೈಸೂರು ಮಹಾರಾಜರಿಂದ ಗೌರವಿಸಲ್ಪಟ್ಟಿದ್ದರು. ಅಂತಹವರ ಕುಟುಂಬಗಳ ಬಗ್ಗೆ ಶಾಸಕ ಉದಯ್ ಕೀಳು ಮಟ್ಟದಲ್ಲಿ ಮಾತನಾಡಿರುವುದು ಆಘಾತವನ್ನುಂಟು ಮಾಡಿದೆ ಎಂದರು.
ಚುನಾವಣೆ ಬರುತ್ತದೆ ಹೋಗುತ್ತದೆ, ಆದರೆ ಈ ಸಂದರ್ಭದಲ್ಲಿ ಟೀಕಿಸುವಾಗ ಸಂಮಯ ಕಳೆದುಕೊಳ್ಳಬಾರದು, ನಮ್ಮನಮ್ಮ ರಾಜಕಾರಣದಲ್ಲಿ ಕುಟುಂಬವರನ್ನು ಬೀದಿಗೆ ತಂದು ನಿಲ್ಲಿಸಬಾರದು, ಆರೋಗ್ಯಕರವಾಗಿ ಟೀಕೆ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಕಾಂಗ್ರೆಸ್ ನಾಯಕರು ಉದಯ್ ಅವರನ್ನು ನಿಯಂತ್ರಣದಲ್ಲಿಡಬೇಕು, ಇಲ್ಲವಾದರೂ ಮುಂದೆ ಆಗುವ ಪರಿಣಾಮಕ್ಕೆ ಅವರೇ ಹೊಣೆಯಾಗಬೇಕಾಗತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಸುರೇಶ್ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಬಿ.ಆರ್.ರಾಮಚಂದ್ರು ಸೇರಿದಂತೆ ಮತ್ತಿತರರಿದ್ದರು.




