Thursday, July 25, 2024

ಪ್ರಾಯೋಗಿಕ ಆವೃತ್ತಿ

ಬಿಹಾರ| ನಿತೀಶ್ ಕುಮಾರ್ ಜಾರಿಗೊಳಿಸಿದ್ದ ಶೇ.65 ಮೀಸಲಾತಿ ರದ್ದು

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯದವರಿಗೆ ಉದ್ಯೋಗಗಳು ಹಾಗೂ ಶಿಕ್ಷಣದಲ್ಲಿ ಶೇ.50 ರಿಂದ ಶೇ.65ರವರೆಗೆ ಹೆಚ್ಚಿಸಲಾಗಿದ್ದ ಬಿಹಾರ ಸರ್ಕಾರದ ಮೀಸಲಾತಿ ಆದೇಶವನ್ನು ಪಾಟ್ನಾ ಹೈಕೋರ್ಟ್ ರದ್ದುಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಕೆ ವಿನೋದ್ ಚಂದ್ರ ಹಾಗೂ ನ್ಯಾಯಮೂರ್ತಿ ಹರೀಶ್ ಕುಮಾರ್ ಅವರಿದ್ದ ಪೀಠ ನಾಗರಿಕರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಸಮಾನ ಅವಕಾಶ ನೀಡುವ ವಿಚಾರದಲ್ಲಿ ಈ ಆದೇಶವು ಉಲ್ಲಂಘನೆಯಾಗುತ್ತದೆ ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಬ್ಯಾಚ್‌ನ ಅರ್ಜಿಗಳನ್ನು ವಿಚಾರಣೆಗೊಳಿಸಿ ಆದೇಶ ನೀಡಿದರು.

ಬಿಹಾರ ಸರ್ಕಾರ ಅಧಿಸೂಚನೆಗೊಳಿಸಿರುವ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ಕಾಯ್ದೆ 2023ರ ಅಧಿಸೂಚನೆಯು ಸಂವಿಧಾನದ 14,15 ಹಾಗೂ 16ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಹೈಕೋರ್ಟ್ ಪೀಠ ಆದೇಶದಲ್ಲಿ ತಿಳಿಸಿದೆ.

ನವೆಂಬರ್ 2023ರಲ್ಲಿ ಬಿಹಾರ ಸರ್ಕಾರವು ಎಸ್ಸಿ, ಎಸ್ಟಿ ಹಾಗೂ ಒಬಿಸಿ ಸಮುದಾಯದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿದ್ದ ಶೇ. 50 ರಷ್ಟಿದ್ದ ಮೀಸಲಾತಿಯನ್ನು ಶೇ.65ಕ್ಕೆ ಹೆಚ್ಚಿಸಲಾಗಿತ್ತು.

ಬಿಹಾರ ಸರ್ಕಾರದ ಮಸೂದೆಯನ್ವಯ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಶೇ.20, ಒಬಿಸಿ ಮತ್ತು ಅತೀ ಹಿಂದುಳಿದ ಸಮುದಾಯ ಶೇ.43 ಮೀಸಲಾತಿ, ಎಸ್ಟಿ ಸಮುದಾಯ ಶೇ.2 ಮೀಸಲಾತಿಗೆ ಅರ್ಹರಾಗಿದ್ದರು. ನೂತನ ಕಾಯ್ದೆಯಿಂದ ಒಬಿಸಿ ಮತ್ತು ಅತೀ ಹಿಂದುಳಿದ ಅಭ್ಯರ್ಥಿಗಳು(ಇಬಿಸಿ) ಶೇ.30 ಮೀಸಲಾತಿ ಹೆಚ್ಚಿಗೆಗೆ ಅರ್ಹರಾಗಿದ್ದರು. ಬಿಹಾರ ರಾಜ್ಯಾದ್ಯಂತ ನಡೆಸಿದ ಜಾತಿ ಸಮೀಕ್ಷೆಯ ಸಂಪೂರ್ಣ ವರದಿಯನ್ನು ಸರ್ಕಾರ ಮಂಡಿಸಿದ ಕೆಲವೇ ಗಂಟೆಗಳ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಸೂದೆಯನ್ನು ಪ್ರಸ್ತಾಪಿಸಿ ಅಂಗೀಕರಿಸಿದ್ದರು.

ಬಿಹಾರದ 13.1 ಕೋಟಿ ಜನರಲ್ಲಿ ಶೇ. 36 ಜನರು ಇಬಿಸಿ ಮತ್ತು ಶೇ. 27.1 ಮಂದಿ ಒಬಿಸಿ ಸಮುದಾಯಕ್ಕೆ ಸೇರಿದ್ದಾರೆ.ಉಳಿದವರಲ್ಲಿ ಶೇ.19.7ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜನಸಂಖ್ಯೆ ಶೇ.1.7 ರಷ್ಟಿದೆ. ಸಾಮಾನ್ಯ ವರ್ಗದ ಜನಸಂಖ್ಯೆ 15.5 ಪ್ರತಿಶತವನ್ನು ಹೊಂದಿದೆ ಎಂದು ವರದಿ ಹೇಳಿದೆ.

ಇದರರ್ಥ ಬಿಹಾರದ ಶೇಕಡಾ 60 ಕ್ಕಿಂತ ಹೆಚ್ಚು ಜನರು ಒಬಿಸಿ ಅಥವಾ ಇಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.ಸರ್ಕಾರದ ವರದಿಯಲ್ಲಿ ಶೇ.42 ಎಸ್ಸಿ ಮತ್ತು ಎಸ್ಟಿ ಸಮುದಾಯ ಬಡತನ ರೇಖೆಗಿಂತ ಕೆಳಗಿದ್ದಾರೆ. ಈ ಸಮುದಾಯದ ಶೇ.34 ಮಂದಿಯ ಮಾಸಿಕ ಆದಾಯ 6 ಸಾವಿರ ರೂ.ಕ್ಕಿಂತ ಕಡಿಮೆಯಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!