Monday, November 23, 2026

ಪ್ರಾಯೋಗಿಕ ಆವೃತ್ತಿ

ಮೀಸಲಾತಿ ರದ್ಧತಿ | ಮುಸ್ಲಿಂರಿಗೆ ಮಾಡಿದ ಅನ್ಯಾಯ – ಪ್ರತಿಭಟನೆ

ರಾಜ್ಯದ ಬಿಜೆಪಿ ಸರ್ಕಾರವು ಮುಸ್ಲಿಮರಿಗೆ 2 ಬಿ ವರ್ಗದಲ್ಲಿ ಇದ್ದ ಶೇ.4 ರಷ್ಟು ಮೀಸಲಾತಿಯನ್ನು ರದ್ದು ಮಾಡಿ
ಇ.ಡಬ್ಲ್ಯೂಎಸ್ ವರ್ಗಕ್ಕೆ ಸೇರಿಸುವ ಮೂಲಕ ಬಡ ಮುಸ್ಲಿಮರಿಗೆ ಅನ್ಯಾಯ ಮಾಡಿದೆ. ಇದರಿಂದ ಅಭಿವೃದ್ಧಿ ಹೊಂದುತ್ತಿರುವ ಮುಸ್ಲಿಮರಿಗೆ ತೊಂದರೆಯಾಗಿದೆ. ಹಾಗಾಗಿ 2.ಬಿ ಮೀಸಲಾತಿಯನ್ನು ಯಥಾವತ್ ಉಳಿಸಬೇಕು ಈ ಮೂಲಕ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಆಗ್ರಹಿಸಿ ಕೃಷ್ಣರಾಜಪೇಟೆ ತಾಲ್ಲೂಕು ಸೌಹಾರ್ದ ವೇದಿಕೆಯ ಕಾರ್ಯಕರ್ತರು ಕೆ.ಆರ್.ಪೇಟೆ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಸೌಹಾರ್ದ ವೇದಿಕೆಯ ಮುಖಂಡರಾದ ಸೌದಿ ಫಯಾಜ್, ಗಂಗಾಧರ್, ನಯಜ್, ಮಹಮದ್, ಫಯಾಜ್, ಶಾಫಿ, ಅಬ್ದುಲ್, ಸಾದಿಕ್, ಪಾಷ, ಹಾಫೀಜುಲ್ಲಾ ಷರೀಫ್ ಸಲ್ಲು, ನಿಸಾದ್, ಸೌದಿಕ್, ಪುರಸಭೆಯ ಮಾಜಿ ಸದಸ್ಯ
ನವೀದ್ ಅಹಮದ್, ಗ್ರಾ.ಪಂ.ಸದಸ್ಯ ಫಯಾಜ್ ಅಹಮದ್, ಆಟೋ ಜಾವಿದ್, ಮತ್ತಿತರರ ನೇತೃತ್ವದಲ್ಲಿ ಜಾಮೀಯ ಮಸೀದಿ ಆವರಣದಲ್ಲಿ ಸಭೆ ನಡೆಸಿದ ಕಾರ್ಯಕರ್ತರು ಮುಸ್ಲಿಮರಿಗೆ ಇದ್ದ 2 ಬಿ ಮೀಸಲಾತಿಯನ್ನು ರದ್ದು ಮಾಡಿರುವುದನ್ನು ಖಂಡಿಸಿದರು.

ಮುಖಂಡ ಸೌಧಿ ಫಯಾಜ್ ಮಾತನಾಡಿ, ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಮುಸ್ಲಿಂ ಸಮುದಾಯದ 2ಬಿ ಮೀಸಲಾತಿ ರದ್ದುಗೊಳಿಸಿರುವುದನ್ನು ಖಂಡಿಸುತ್ತೇವೆ. ಹಿಜಾಬ್, ಹಲಾಲ್, ತಲಾಕ್ ಇನ್ನಿತರ ವಿಷಯಗಳನ್ನು ಮುಂದಿಟ್ಟುಕೊಂಡು ಮುಸ್ಲಿಮರನ್ನು ಹಿಂಸೆ ಮಾಡಿದರು. ಸಮಾಜದ ಸ್ವಾಸ್ಥ್ಯ ಕೆಡಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಸರ್ಕಾರವು ಸಿ.ಎಂ.ಬೊಮ್ಮಾಯಿ ಅವರು ಅವಧಿ ಮುಗಿಯುವ ಕೊನೆಯ ಗಳಿಗೆಯಲ್ಲಿ ದಲಿತರಿಗಿಂತ ಹಿಂದುಳಿದಿರುವ ಮುಸ್ಲಿಂ ಸಮುದಾಯಕ್ಕೆ
ಇರುವ ಶೇಕಡಾ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದ್ದಾರೆಂದು ದೂರಿದರು.

ಸೌಹಾರ್ದ ವೇದಿಕೆಯ ಸಂಚಾಲಕ ಗಂಗಾಧರ್ ಮಾತನಾಡಿ, ಮೀಸಲಾತಿ ರದ್ದುಗೊಳಿಸುವ ಅಥವಾ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ತಜ್ಞರ ಮೂಲಕ ಅಧ್ಯಯನ ಮಾಡದೇ ಮುಖ್ಯಮಂತ್ರಿಗಳು ಧರ್ಮದ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸಿದ್ದೇವೆ ಎಂದು ಸುಳ್ಳು ಹೇಳಿ ತಮ್ಮ ಮತ ರಾಜಕೀಯಕ್ಕಾಗಿ ಇನ್ನೊಬ್ಬರ
ಹಕ್ಕುಗಳನ್ನು ಕಿತ್ತುಕೊಳ್ಳುವುದು ಧರ್ಮ-ಧರ್ಮಗಳ ನಡುವೆ ಮಧ್ಯೆ ದ್ವೇಷ ಸೃಷ್ಟಿಸುವ ಮೂಲಕ ರಾಜಕೀಯ ಲಾಭ ಪಡೆಯುವ ವ್ಯವಸ್ಥಿತ ಹುನ್ನಾರ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕೆ.ಆರ್.ಪೇಟೆ ತಾಲೂಕು ಆಡಳಿತ ಕಚೇರಿ ಮುಂದೆ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಾಲೂಕು ಗ್ರೇಡ್-2 ತಹಸೀಲ್ದಾರ್ ವಿಖಾರ್ ಅಹಮದ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ನೂರಾರು ಮುಸ್ಲಿಂ ಬಂಧುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ