Sunday, May 19, 2024

ಪ್ರಾಯೋಗಿಕ ಆವೃತ್ತಿ

ಅವಳಿ ಕರುಗಳಿಗೆ ಜನ್ಮ ನೀಡಿದ ಹಸು !

ಕುರಿ, ಮೇಕೆಗಳು ಒಂದು ಮತ್ತು ಒಂದಕ್ಕಿಂತ ಹೆಚ್ಚು ಮರಿಗಳಿಗೆ ಜನ್ಮ ನೀಡಿವುದನ್ನು ನೋಡಿದ್ದೇವೆ, ಆದರೆ ಹಸವೊಂದು ಅವಳಿ ಕರುಗಳಿಗೆ ಜನ್ಮ ನೀಡಿ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ.

 

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮದ ಸುಧಾ ಮರಿಯಪ್ಪ ಎಂಬ ರೈತಮಹಿಳೆಗೆ ಸೇರಿದ ಎಚ್.ಎಫ್ ತಳಿಯ ಹಸುವು ಒಂದು ಗಂಡು ಹಾಗೂ ಒಂದು ಹೆಣ್ಣು ಕರುಗಳಿಗೆ ಜನ್ಮ ನೀಡಿರುವುದು ವಿಶೇಷವಾಗಿದೆ. ಹಸುವು ಎರಡು ಕರುಗಳನ್ನು ಹಾಕಿದ ಸಂದರ್ಭದಲ್ಲಿ ಅವು ಬದುಕುಳಿಯುವ ಸಾಧ್ಯತೆ ಕಡಿಮೆ  ಇರುತ್ತದೆ. ಆದರೆ ಇಲ್ಲಿ ಎರಡು ಕರುಗಳೂ ಹೆಚ್.ಎಫ್. ತಳಿಗೆ ಸೇರಿದ್ದು, ಆರೋಗ್ಯದಿಂದಿವೆ ಎಂಬುದು ಗ್ರಾಮಸ್ಥರಾದ ಅಪ್ಪಾಜಿ ಅವರು ‘ನುಡಿಕರ್ನಾಟಕ.ಕಾಮ್’ಗೆ ತಿಳಿಸಿದ್ದಾರೆ.

ಹಸುವು 2 ಕರುಗಳಿಗೆ ಜನ್ಮ ನೀಡಿದ ವಿಷಯ ತಿಳಿದು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಣೆ ಮಾಡುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!