ಮಂಡ್ಯನಗರದ ಸುಮಾರವಿ ಕಲ್ಯಾಣ ಮಂಟಪದ ಬಳಿ ಭಾನುವಾರ ರಾತ್ರಿ ಕಾರೊಂದಕ್ಕೆ ಬೆಂಕಿ ಹೊತ್ತಿ ಕೊಂಡಿದ್ದು ಕಾರಿನಲ್ಲಿದ್ದ ಮದನ್ ಮತ್ತು ಅವರ ಸ್ನೇಹಿತ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಮಂಡ್ಯ ಅಗ್ನಿಶಾಮಕ ವಾಹನ ಅಧಿಕಾರಿ ಸಿಬ್ಬಂದಿಯವರು ಕೂಡಲೇ ಬೆಂಕಿಯನ್ನು ನಂದಿಸಿ ಅಕ್ಕಪಕ್ಕದಲ್ಲಿ ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಕಾರು ಬೆಂಗಳೂರಿನಿಂದ ಕುಶಾಲನಗರಕ್ಕೆ ಹೊರಟಿದ್ದು ಮಾರ್ಗ ಮಧ್ಯದಲ್ಲಿ ಸುಟ್ಟ ವಾಸನೆ ಬಂದಿದ್ದರಿಂದ ಇಬ್ಬರು ಕಾರಿನಿಂದ ಇಳಿದು ನೋಡಿದಾಗ ದಟ್ಟವಾದ ಹೊಗೆ ಬಂದಿದ್ದು, ಕೂಡಲೇ ಬೆಂಕಿ ಹೊತ್ತಿಕೊಂಡಿತು. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ವೆಂಕಟೇಶ್ ದೊಡ್ಡಯ್ಯ, ಭೀಮಣ್ಣ ಗೊರವ, ನಾಗರಾಜ್ ಎಲ್ ಪಾಲ್ಗೊಂಡಿದರು.




