Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಧ್ಯಪ್ರದೇಶ | ದಲಿತರ ಮೇಲೆ ಮುಂದುವರೆದ ಜಾತಿ ದೌರ್ಜನ್ಯ ; ಮಲ ತಿನಿಸಿ ಮೆರವಣಿಗೆ

ಮಧ್ಯಪ್ರದೇಶದಲ್ಲಿ ಇತ್ತಿಚೆಗೆ ಆದಿವಾಸಿ ವ್ಯಕ್ತಿ ಮೇಲೆ ಬಿಜೆಪಿ ಮುಖಂಡನೊಬ್ಬ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಮತ್ತೊಂದು ಆಘಾತಕಾರಿ, ಹೇಯ ಕೃತ್ಯ ಬಹಿರಂಗವಾಗಿದೆ. ಇಬ್ಬರು ದಲಿತ ಯುವಕರಿಗೆ ಮಲ ತಿನಿಸಿ ಮೆರವಣಿಗೆ ಮಾಡಲಾಗಿದೆ.

ಮಧ್ಯಪ್ರದೇಶದ ಶಿವಗಿರಿ ಎಂಬಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಇಬ್ಬರು ದಲಿತ ಯುವಕರ ಮುಖಕ್ಕೆ ಮಸಿ ಬಳಿದು, ಮಲ ತಿನಿಸಿ, ಚಪ್ಪಲಿ ಹಾರ ಹಾಕಿ ಊರೆಲ್ಲಾ ಮೆರವಣಿಗೆ ಮಾಡಲಾಗಿದೆ. ಅಲ್ಲದೆ ಅವರ ಮನೆಯನ್ನೂ ದ್ವಂಸ ಮಾಡಲಾಗಿದೆ.

“>

ಈ ಘಟನೆ ಜೂನ್​ 30ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿ 7 ಜನರನ್ನು ಬಂಧಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಶಿವಪುರಿ ಎಸ್‌ಪಿ ರಘುವಂಶ್ ಸಿಂಗ್ ಭಡೋರಿಯಾ, ಜೂನ್ 30 ರಂದು ಶಿವಪುರಿ ಜಿಲ್ಲೆಯ ವರ್ಖಾಡಿ ಗ್ರಾಮದಲ್ಲಿ ದಲಿತ ಯುವಕರ ಮೇಲೆ ದೌರ್ಜನ್ಯ ನಡೆದಿತ್ತು. ದೌರ್ಜನ್ಯ ನಡೆಸಿರುವ ವಿಡಿಯೋ ಬುಧವಾರ ವೈರಲ್ ಆದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ” ಎಂದು ತಿಳಿಸಿದ್ದಾರೆ.

”ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ನಿರ್ದೇಶನದ ಮೇರೆಗೆ ಯುವಕರ ಮೇಲೆ ದೌರ್ಜನ್ಯ ನಡೆಸಿದ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಕೇಸ್ ಹಾಕಲಾಗಿದೆ” ಎಂದು ತಿಳಿಸಿದರು.

”ಆರೋಪಿ ಕುಟುಂಬದ ಯುವತಿ(26)ಯೊಂದಿಗೆ 23 ಮತ್ತು 24 ವರ್ಷ ವಯಸ್ಸಿನ ಇಬ್ಬರು ದಲಿತ ಯುವಕರು ಫೋನ್‌ನಲ್ಲಿ ಮಾತನಾಡಿದ್ದಾರೆ. ಈ ವಿಷಯ ತಿಳಿದ ಮನೆಯವರು ಆ ಇಬ್ಬರು ಯುವಕರನ್ನು ಮನೆಗೆ ಕರೆಸುವಂತೆ ಯುವತಿಗೆ ಒತ್ತಾಯಿಸಿದ್ದಾರೆ. ಅದರಂತೆ ಯುವಕರ ಜೂನ್ 30ರಂದು ಯುವತಿಯ ಮನೆಗೆ ಬಂದಾಗ ಕುಟುಂಬಸ್ಥರೆಲ್ಲ ಸೇರಿಕೊಂಡು ಯುವಕರ ಮೇಲೆ ಹಲ್ಲೆ ನಡೆಸಿ, ಮುಖಕ್ಕೆ ಕಪ್ಪು ಮಸಿ ಬಳಿದು, ಮಲವನ್ನು ತಿನ್ನುವಂತೆ ಒತ್ತಾಯಿಸಿದ್ದಾರೆ. ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ” ಎಂದು ಎಸ್​ಪಿ ಭಡೋರಿಯಾ ಹೇಳಿದ್ದಾರೆ.

”ತಮ್ಮ ಮನೆಯ ಯುವತಿಗೆ ಕಿರುಕುಳ ನೀಡಿದ್ದಕ್ಕಾಗಿ ಮತ್ತು ಅನುಚಿತವಾಗಿ ಸ್ಪರ್ಶಿಸಿದ್ದಕ್ಕಾಗಿ ಇಬ್ಬರು ಯುವಕರನ್ನು ಥಳಿಸಿದ್ದಾಗಿ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ತನಿಖೆಯ ಸಂದರ್ಭದಲ್ಲಿ ಕುಟುಂಬದವರ ಹೇಳಿಕೆಗಳು ಸುಳ್ಳು ಎಂದು ಸಾಬೀತಾಗಿದ್ದು ಆರೋಪಿಗಳು ತಮ್ಮನ್ನು ಲೈಂಗಿಕ ಕಿರುಕುಳದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾರೆ” ಎಂದು ದಲಿತ ಯುವಕರು ಕಣ್ಣೀರಿಟ್ಟಿದ್ದಾರೆ.

”ನಮ್ಮನ್ನು ಭೇಟಿಯಾಗಲು ಕರೆದ ನಂತರ ನಾವು ಅವರ ಮನೆಗೆ ಹೋದೆವು. ನಾವು ಯಾವುದೇ ಅಪರಾಧ ಮಾಡಿಲ್ಲ” ಎಂದು ದೌರ್ಜನ್ಯಕ್ಕೊಳಗಾದ ಇಬ್ಬರು ಯುವಕರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!