Thursday, November 19, 2026

ಪ್ರಾಯೋಗಿಕ ಆವೃತ್ತಿ

ಸಾಹು ಮಹರಾಜ್ ಜಯಂತಿ| ನಾಳೆ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ

ಛತ್ರಪತಿ ಸಾಹು ಮಹಾರಾಜ್ 139ನೇ ಜಯಂತಿ ಪ್ರಯುಕ್ತ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ನಿವೃತ್ತ ನೌಕಕರ ಕ್ಷೇಮಾಭಿವೃದ್ಧಿ ಸಂಘ, ಮಂಡ್ಯ, ಭಾರತೀಯ ಬೌದ್ಧ ಮಹಾಸಭಾ, ಮಂಡ್ಯ, ನೆಲದನಿ ಬಳಗ, ಮಂಗಲ, ವರ್ಧಮಾನ್ ಜೈನ್ ನೇತ್ರಾಲಯ ಮತ್ತಿತರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಜು.29ರಂದು ಬೆಳಿಗ್ಗೆ 10 ಮಧ್ಯಾಹ್ನ 1-30 ಗಂಟೆಯವರೆಗೆ ಮಂಡ್ಯನಗರದ ಡಾ.ಬಿ.ಆರ್. ಅಂಬೇಡ್ಕರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದ ಕಟ್ಟಡ (ಜಿಲ್ಲಾಧಿಕಾರಿಗಳ ಕಚೇರಿ ಪಕ್ಕ) ದಲ್ಲಿ  ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ ಮತ್ತು ಆಧುನಿಕ ಶಸ್ತ್ರ ಚಿಕಿತ್ಸೆ ಮೂಲಕ IOL ಅಳವಡಿಕೆ ಶಿಬಿರ ನಡೆಯಲಿದೆ.

ಕಣ್ಣಿನ ಪರೀಕ್ಷೆ ಮಾಡಿ, ಪೊರೆಯುಳ್ಳ ರೋಗಿಯನ್ನು ಅದೇ ದಿವಸ ಮಂಡ್ಯದ ವರ್ಧಮಾನ್ ಜೈನ್ ನೇತ್ರಾಲಯಕ್ಕೆ ಕರೆತಂದು ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.

ಶಿಬಿರಾರ್ಥಿಗಳಿಗೆ ಸೂಚನೆ

ಶಸ್ತ್ರ ಚಿಕಿತ್ಸೆಗೆ ಬರುವವರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಕಾರ್ಡ್‌ ನಕಲು ಪ್ರತಿಯನ್ನು ತರಲೇಬೇಕು. ಯಶಸ್ವಿನಿ ಕಾರ್ಡ್‌ ಮತ್ತಾ ಧರ್ಮಸ್ಥಳ ಸಂಘದ ಕಾರ್ಡ್‌ ಇದ್ದವರು ತರಬೇಕು. ಶಿಬಿರಾರ್ಥಿಗಳು ಬರುವ ಮುನ್ನ ಕ್ಷೌರ ಮಾಡಿಸಿ, ತಲೆ ಸ್ನಾನ ಹಾಗೂ ಶುಭ್ರವಾದ ಬಟ್ಟೆ ಧರಿಸಿ ಬರಬೇಕು. ಬಿ.ಪಿ ಮತ್ತು ಪಾರ್ಶ್ವವಾಯು, ಖಾಯಿಲೆ, ಹೃದಯ ಸಂಬಂಧಿ ಖಾಯಿಲೆ, ಹೆಚ್.ಐ.ವಿ ಇದ್ದವರು ವೈದ್ಯರಿಗೆ ತಿಳಿಸಬೇಕು.

ಶಿಬಿರ ನಡೆದ ಸ್ಥಳದಿಂದ ಶಿರಾರ್ಥಿಗಳನ್ನು ಕರೆದೊಯ್ದು, ಇದೇ ಸ್ಥಳಕ್ಕೆ ಬಿಡಲಾಗುವುದೇ ವಿನಃ ಬೇರೆ ಯಾವ ಸ್ಥಳಕ್ಕೂ ಅವರನ್ನು ಬಿಡಲಾಗುವುದಿಲ್ಲ ಹಾಗೂ ಜೊತೆಯಲ್ಲಿ ಸಹಾಯಕರನ್ನು ಕರೆತರುವ ಅವಶ್ಯಕತೆ ಇಲ್ಲ. ಕಣ್ಣಿನ ಶಸ್ತ್ರಚಿಕಿತ್ಸೆ ಆದವರಿಗೆ ಉಚಿತವಾಗಿ ಕನ್ನಡಕ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮೊ 9449060381, 9845185431, 9741453240, 9066666654 ಸಂಪರ್ಕಿಸಬಹುದು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ