Thursday, September 19, 2024

ಪ್ರಾಯೋಗಿಕ ಆವೃತ್ತಿ

ಗುಜರಾತ್ ನಲ್ಲಿ ಸಿಕ್ಕಿಬಿದ್ದ ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ

ಹೈಟೆಕ್ ವೇಶ್ಯಾವಾಟಿಕೆಯ ರೂವಾರಿ ಹಾಗೂ ಹಲವು ಗಣ್ಯ ವ್ಯಕ್ತಿಗಳಿಗೆ ಹೆಣ್ಣು ಮಕ್ಕಳನ್ನು ಸರಬರಾಜು ಮಾಡುತ್ತಿದ್ದ ಆರೋಪ ಹೊತ್ತಿರುವ ಸ್ಯಾಂಟ್ರೋ ರವಿ ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ನಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಕುಖ್ಯಾತ ಕ್ರಿಮಿನಲ್‌ ಹಾಗೂ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜೊತೆ ಉತ್ತಮ ಸಂಪರ್ಕ ಹೊಂದಿದ್ದ ಮೈಸೂರಿನ ಕೆ.ಎಸ್.ಮಂಜುನಾಥ ಅಲಿಯಾಸ್​ ಸ್ಯಾಂಟ್ರೋ ರವಿಯನ್ನು ಕರ್ನಾಟಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಓಡಾಡುತ್ತಿದ್ದ ಸ್ಯಾಂಟ್ರೋ  11 ದಿನಗಳ ಬಳಿಕ ಗುಜರಾತ್​ನ ಅಹಮದಾಬಾದ್​ನಲ್ಲಿ ಸೆರೆಯಾಗಿದ್ದಾನೆ.

ಸ್ಯಾಂಟ್ರೋ ರವಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದು, ಮಂತ್ರಾಲಯದ ದರ್ಶನಕ್ಕೆ ಬಂದಿದ್ದವನಿಂದ ಎಂಬ ಸುದ್ದಿ ಚಾಲ್ತಿಯಲ್ಲಿದೆ, ಸ್ಯಾಂಟ್ರೋ ರವಿ ಜಾಮೀನು ಅರ್ಜಿಯನ್ನು ಅವನ ಆಪ್ತ ಆಪ್ತ ಲಷ್ಮಿತ್ ಅಲಿಯಾಸ್ ಚೇತನ್ ಎನ್ನುವಾತ ಹಾಕಿದ್ದ. ಈತ ಇತ್ತೀಚೆಗೆ ಮಂತ್ರಾಲಯಕ್ಕೆ ಬಂದಿದ್ದ. ಈ ವೇಳೆ ರಾಯಚೂರು ಪೊಲೀಸರು ಸ್ಯಾಂಟ್ರೋ ರವಿ ಆಪ್ತ ಲಷ್ಮಿತ್ ಅಲಿಯಾಸ್ ಚೇತನ್​ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಆ ವೇಳೆ ಸ್ಯಾಂಟ್ರೋ ರವಿ ಬಗ್ಗೆ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ.

ಕೂಡಲೇ ಎಸ್​​ಪಿ ನಿಖಿಲ್ ಅವರು ಚೇತನ್​ನನ್ನು ಮೈಸೂರಿಗೆ ಕರೆದೊಯ್ದಿದ್ದು, ಅಲ್ಲಿ ಇತರೆ ಪೊಲೀಸ್ ಅಧಿಕಾರಿಗಳೊಂದಿಗೆ ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ಚೇತನ್ ನೀಡಿದ ಮಾಹಿತಿಯಿಂದ ಸ್ಯಾಂಟ್ರೋ ರವಿ ಗುಜರಾತ್​ನಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ಬಲೆ ಬೀಸಿದ್ದಾರೆ. ಅಂತಿಮವಾಗಿ ಸ್ಯಾಂಟ್ರೋ ರವಿ ಕರ್ನಾಟಕದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಈ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯಿಸಿದ್ದು, ರಾಯಚೂರು ಎಸ್ಪಿ, ಮಂಡ್ಯ ಎಸ್ಪಿ, ರಾಮನಗರ ಎಸ್ಪಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!