Friday, November 20, 2026

ಪ್ರಾಯೋಗಿಕ ಆವೃತ್ತಿ

ಸಿಬಿಎಸ್ಸಿ ಫಲಿತಾಂಶ | ಎಸೆಸ್ಸೆಲ್ಸಿಯಲ್ಲಿ ಪ್ರಜ್ಞಾಗೆ ಶೇ.97 ರಷ್ಟು ಫಲಿತಾಂಶ

ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಬಡ್ಸ್ ಫೌಂಡೇಶನ್ ಶಾಲೆಯ ವಿದ್ಯಾರ್ಥಿನಿ ಪ್ರಜ್ಞಾ ಎಸ್ ಎಸ್ ಎಲ್ ಸಿ (ಸಿಬಿಎಸ್ಸಿ) ಪರೀಕ್ಷೆಯಲ್ಲಿ ಒಟ್ಟು 576 ಅಂಕಗಳನ್ನು ಪಡೆದು ಶೇ.97ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಶಾಲೆಗೆ ಟಾಫರ್ ಆಗಿ ಹೊರಹೊಮ್ಮಿದ್ದಾರೆ.

ಪ್ರಜ್ಞಾ ಅವರು ಪಾಂಡವಪುರ ಪಟ್ಟಣದ ಹಾರೋಹಳ್ಳಿ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಕುಮಾರ ಹಾಗೂ ಚೈತನ್ಯಕುಮಾರಿ ಅವರ ಏಕೈಕ ಪುತ್ರಿ. ಈಕೆ ಇಂಗ್ಲಿಷ್ 93, ಕನ್ನಡ 99, ಗಣಿತ 93, ವಿಜ್ಞಾನ 98, ಸಮಾಜ ವಿಜ್ಞಾನ 96 ಹಾಗೂ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ 97 ಅಂಕ ಸೇರಿದಂತೆ ಒಟ್ಟು 576 ಅಂಕಗಳನ್ನು ಗಳಿಸುವ ಮೂಲಕ ಶೇ.97ರಷ್ಟು ಫಲಿತಾಂಶ ದಾಖಲಿಸಿದ್ದಾರೆ‌.

ಮುಂದೆ ಮೈಸೂರಿನ ಬಿಜಿಎಸ್ ಕಾಲೇಜಿನಲ್ಲಿ ಪಿಯುಸಿ‌‌ ವಿದ್ಯಾಭ್ಯಾಸ ಪೂರೈಸಿ ಇಂಜಿನಿಯರ್ ಆಗುವ ಹೆಬ್ಬಾಕೆ ಪ್ರಜ್ಞಾ ಅವರದ್ದಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ