Thursday, September 19, 2024

ಪ್ರಾಯೋಗಿಕ ಆವೃತ್ತಿ

ಲೋಕಸಭಾ ಚುನಾವಣೆಗಾಗಿ ಅಪೂರ್ಣ ರಾಮಮಂದಿರ ಉದ್ಘಾಟನೆ: ಚಲುವರಾಯಸ್ವಾಮಿ

ನಾವು ರಾಮಭಕ್ತರೇ,ರಾಮಮಂದಿರ ಆಗುತ್ತಿರುವುದು ನಮಗೂ ಸಂತಸ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇನ್ನೂ ಪೂರ್ಣವಾಗದ ಅಪೂರ್ಣ ರಾಮಮಂದಿರ ಉದ್ಘಾಟಿಸುತ್ತಿದ್ದಾರೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರು ಮಾತ್ರ ರಾಮಮಂದಿರ ಉದ್ಘಾಟನೆ ಮಾಡ್ತಿದ್ದಾರೆ. ತಮ್ಮ ಸಚಿವ ಸಂಪುಟದ ಸದಸ್ಯರನ್ನೇ ಉದ್ಘಾಟನಾ ಸಮಾರಂಭಕ್ಕೆ ಕರೆದಿಲ್ಲ. ರಾಮಮಂದಿರ ಹೋರಾಟ ಮಾಡಿದ ಅಡ್ವಾನಿ ಅವ್ರನ್ನೆ ಬರಬೇಡಿ ಎಂದಿದ್ದಾರೆ. ಅಪೂರ್ಣ ಮಂದಿರ ಉದ್ಘಾಟನೆಗೆ ಮಠಗಳು ಕೂಡ ವಿರೋಧಿಸಿವೆ.ಆದರೂ ಚುನಾವಣೆಗಾಗಿ ಮಂದಿರ ಉದ್ಘಾಟಿಸುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ಚುನಾವಣೆ ಭಾವನೆಯಿಂದ ಉದ್ಘಾಟನೆ ಮಾಡುವುದು ಹೆಚ್ಚು ದಿನ ನಡೆಯಲ್ಲ. ದೇವರು, ದೇವಸ್ಥಾನ ಇಟ್ಟುಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ.ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯರನ್ನೇ ಕರೆದಿಲ್ಲ. ಇದು ಕನ್ನಡಿಗರಿಗೆ ಮಾಡಿದ ಅಪಮಾನ ಅಲ್ವಾ? ಅಪರೂಪಕ್ಕೆ ಯುಪಿ ಸಿಎಂ ಅವರನ್ನು ಪಕ್ಕಕ್ಕೆ ಕರೆದುಕೊಳ್ತಾರೆ. ಅಮಿತ್ ಶಾ ಕೂಡ ಇಲ್ಲ, ಎಲ್ಲಾ ಮೋದಿಮಯ ಎಂದು ಕಿಡಿಕಾರಿದರು.

ಮೋದಿಯವರದು ದೊಡ್ಡ ಫೋಟೊಗಳು, ರಾಮನದು ಚಿಕ್ಕ ಫೋಟೋಗಳು. ದೇವರನ್ನು ಮುಂದಿಟ್ಟು ರಾಜಕೀಯ ಮಾಡ್ತಿದ್ದಾರೆ. ಇದಕ್ಕೆಲ್ಲ ಜನ ಉತ್ತರ ಕೊಡುವ ದಿನ ಬರುತ್ತದೆ. ಈ ಚುನಾವಣೆಯಲ್ಲೇ ಬರಬಹುದು ಅಥವಾ ಮುಂದಿನ ಚುನಾವಣೆಯಲ್ಲಾದ್ರು ಬರಬಹುದು ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!