Friday, November 20, 2026

ಪ್ರಾಯೋಗಿಕ ಆವೃತ್ತಿ

ಸಚಿವ ಚಲುವರಾಯಸ್ವಾಮಿ ಹುಟ್ಟುಹಬ್ಬ – ರಕ್ತದಾನ ಶಿಬಿರ

ರಾಜ್ಯ ಸರ್ಕಾರದ ನೂತನ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಜೂ.1ರಂದು ಮಂಡ್ಯನಗರ ಹೋಟೇಲ್ ಮಹಾರಾಜ್ ಗ್ರಾಂಡ್ ಪಕ್ಕದ ಆವರಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಎನ್.ಚಲುವರಾಯಸ್ವಾಮಿ ಹಿತ್ಯೆಷಿಗಳ ಬಳಗದ ಅಧ್ಯಕ್ಷ ನವೀನ್ ಕುಮಾರ್ ಜಿ.ಬಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ಚಲುವರಾಯಸ್ವಾಮಿ ಅವರ 62ನೇ ಹುಟ್ಟುಹಬ್ಬದ ಅಂಗವಾಗಿ 62 ಮಂದಿ ರಕ್ತದಾನ ಮಾಡಲಿದ್ದಾರೆ. ಶಿಬಿರವನ್ನು ಶಾಸಕ ಪಿ.ರವಿಕುಮಾರ್, ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿಗಳಾದ ಪವನ್ ಸಂತಕಸಲಗೆರೆ ಹಾಗೂ ಬಿ.ಪಿ.ರಾಜು ಅವರು ಉದ್ಘಾಟಿಸುವರು ಎಂದರು.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಚಲುವರಾಯಸ್ವಾಮಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಗುರುರಾಜ್, ಜೀವಧಾರೆ ಸಂಘಟನೆಯ ನಟರಾಜ್, ಮುಖಂಡರಾದ ಸೋಮಶೇಖರ್, ಸಿದ್ದಣ್ಣ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ