Saturday, May 18, 2024

ಪ್ರಾಯೋಗಿಕ ಆವೃತ್ತಿ

ಜೂ.1ಕ್ಕೆ ಪದವಿ ಪ್ರದಾನ ಸಮಾರಂಭ

ಮೈಸೂರಿನ ಮೈಸೂರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್’ಮೆಂಟ್ ಕಾಲೇಜಿನಿಂದ ಜೂ.1ರಂದು ಪದವಿ ಪ್ರದಾನ ಸಮಾರಂಭ ಜರುಗಲಿದೆ ಎಂದು‌ ಕಾಲೇಜಿನ ಪ್ರಾಧ್ಯಾಪಕ ಯೋಗೇಶ್ ತಿಳಿಸಿದರು.

ಮಂಡ್ಯದಲ್ಲಿ ಮಂಗಳವಾರ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ಅಂದು 122 ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್, ಇನ್ಫರ್ಮೆಶನ್ ಸೈನ್ಸ್, ಎಲೆಕ್ಟ್ರಾನಿಕ್ ಆಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್, ಸಿವಿಲ್ ಹಾಗೂ ಮೆಕಾನಿಕಲ್ ಇಂಜಿನಿಯರಿಂಗ್’ನಲ್ಲಿ‌ ಪದವಿ ಪಡೆಯಲಿದ್ದಾರೆ ಎಂದು ಮಾಹಿತಿ‌ ನೀಡಿದರು.

ಜೂ.2 ರಂದು ಕಾಲೇಜಿನಲ್ಲಿ‌ ಮೈಸಿರಿ-2023 ಅಡಿ ಕ್ರೀಡಾ ಚಟುವಟಿಕೆಗಳು ಹಾಗೂ ಜೂ.3ರಂದು ಪ್ಯಾಶನ್ ಶೋ ಮತ್ತು‌ ಡಿಜೆ ನೈಟ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಪ್ರಾಧ್ಯಾಪಕ ಜಸ್ವಂತ್ ಹಾಗೂ ವಿದ್ಯಾರ್ಥಿಗಳಾದ ಪವನ್, ಅಭಿಷೇಕ್ ಹಾಜರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!