Thursday, September 19, 2024

ಪ್ರಾಯೋಗಿಕ ಆವೃತ್ತಿ

ಚಿಕ್ಕರಸಿನಕೆರೆ ಕಬ್ಬಿನ ಗದ್ದೆಗೆ ಲಗ್ಗೆ ಇಟ್ಟ ಒಂಟಿ ಸಲಗ

ವರದಿ: ನ.ಲಿ.ಕೃಷ್ಣ, ಕೃಷಿಕರು./ಜಗದೀಶ್ ಅಣ್ಣೂರು. 


ಚಿಕ್ಕರಸಿನಕೆರೆ ಶಿವಲಿಂಗಯ್ಯ ಬಿನ್ ನಿಂಗೇಗೌಡ ಅವರ ಕಬ್ಬಿನ ಗದ್ದೆಯಲ್ಲಿ ಇಂದು ನಸುಕಿನಲ್ಲಿ ಆನೆ ಲಗ್ಗೆ ಇಟ್ಟಿರುವುದು ಕಂಡುಬಂದಿದೆ.

ಮುಂಜಾನೆ ರೈತರು ಹೊಲಕ್ಕೆ ಕೆಲಸ ಮಾಡಲು ಹೊರಟ ಸಮಯದಲ್ಲಿ ಒಂಟಿಯಾಗಿದ್ದ ಗಂಡಾನೆ ಕಬ್ಬಿನ ಗದ್ದೆಯಲ್ಲಿರುವುದು ಕಂಡುಬಂದಿದೆ.

ವಿಷಯ ತಿಳಿದ ತಕ್ಷಣ ತಾಲ್ಲೂಕು ಆರಣ್ಯಾಧಿಕಾರಿ ಗವಿಯಪ್ಪ ಹಾಗೂ ವಲಯ ಆರಣ್ಯ ಅಧಿಕಾರಿ ರವಿಯವರು ಸ್ಥಳಕ್ಕೆ ತೆರಳಿದ್ದು, ಜನರು ಆನೆಗೆ ಭೀತಿ ಹುಟ್ಟಿಸದಿರಲು ಮನವಿ ಮಾಡುತ್ತಿದ್ದು, ಅದಕ್ಕಾಗಿ ಭಾರತಿನಗರ ಪೋಲಿಸರ ನೆರವು ಪಡೆದಿದ್ದಾರೆ.

ಮಳವಳ್ಳಿ ಬಳಿಯ ವಳಗೆರದೊಡ್ಡಿ ಗ್ರಾಮದ ಬಾಳೆ ತೋಟದಲ್ಲಿ ರಾತ್ರಿ ಲಗ್ಗೆ ಇಟ್ಟಿದ್ದ ಈ ಅನೆ ರಾತ್ರಿ ಸಂಚರಿಸಿ ತೋಟದಲ್ಲಿ ನೆನ್ನೆ ಸಂಜೆವರೆಗೂ ತಂಗಿದ್ದ ಈ ಅನೆ ರಾತ್ರಿ ಸಂಚರಿಸಿ ಚಿಕ್ಕರಸಿನಕೆರೆಯ ಬಯಲಿಗೆ ಬಂದಿರುವುದಾಗಿ ಗವಿಯಪ್ಪ ಮಾಹಿತಿ ನೀಡಿದ್ದಾರೆ.

ಅಲುಗೂರು ಬಳಿಯ ಅರಣ್ಯದಿಂದ ಈ ಆನೆ ಗುಂಪಿನಿಂದ ಚದುರಿ ಬಂದಿದೆ ಎಂದಿರುವ ಗವಿಯಪ್ಪ ಮುಂದುವರೆದು ಮಾಹಿತಿ ನೀಡುತ್ತಾ ಸಾಮಾನ್ಯವಾಗಿ ಈ ಸಮಯದಲ್ಲಿ ಅಲುಗೂರಿನ ಭಾಗದಿಂದ ಅನೆಗಳ ಒಂದು ತಂಡ ಶಿಂಷಾನದಿಯ ಮದ್ದೂರು ಗಡಿವರೆಗೆ ಬರುವುದು ವಾಡಿಕೆ.

ಆದರೆ ಈ ಸಲ ಒಂಟಿ ಸಲಗ ಗುಂಪಿನಿಂದ ಬೇರ್ಪಟ್ಟು ಬಂದಿದೆ ಎಂದರು. ಸಲಗವು ಕಬ್ಬಿನ ಗದ್ದೆಯ ಒಳಗಡೆ ಹೊಕ್ಕಿಕೊಂಡಿದ್ದು, ಎರಡು ಬಾರಿ ಮಾತ್ರ ಜನರ ಕಣ್ಣಿಗೆ ಕಾಣಿಸಿ ಕೊಂಡಿದೆ. ಸಲಗದ ಜೊತೆ ಮತ್ತೊಂದು ಆನೆಯೂ ಇದೆ ಎಂಬುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಕಾರ್ಯಚರಣೆ:
ಸಾಮಾನ್ಯವಾಗಿ ರಾತ್ರಿ ವೇಳೆ ಕಾರ್ಯಚರಣೆ ಮಾಡಲಾಗುತ್ತದೆ. ಈ ಪ್ರಕರಣದಲ್ಲಿಯೂ ಇಂದು ರಾತ್ರಿ ಪಟಾಕಿ ಸಿಡಿಸಿ ತಮಟೆ ಸದ್ದು ಹಾಗು ಪೈರ್ ದ್ವನಿ ಮೊಳಗಿಸಿ ಆನೆಯನ್ನು ಹೊರಗಟ್ಟುವ ಕಾರ್ಯಚರಣೆ ಮಾಡುವುದಾಗಿ ತಿಳಿಸಿದ ಅವರು ಇಂತಹ ಸದ್ದು ಕೇಳಿ ಸಹಜವಾಗಿಯೆ ಅನೆ ಬಂದ ಮಾರ್ಗದಿ ವಾಪಸ್ಸು ತೆರಳಲಿವೆ ಎಂದರು.

ಅರಣ್ಯಧಿಕಾರಿ ಗವಿಯಪ್ಪ, ಸಹಾಯಕ ಅರಣ್ಯಧಿಕಾರಿ ರವಿ ಅವರು ಸ್ಥಳದಲ್ಲಿಯೇ ಇದ್ದು ಸಲಗವನ್ನು ಅರಣ್ಯಕ್ಕೆ ಮತ್ತೆ ಓಡಿಸಲು ಕ್ರಮ ಕೈಗೊಂಡಿದ್ದಾರೆ. ಆನೆಯ ಸಂಪೂರ್ಣ ಮಾಹಿತಿ ತಿಳಿಯಲು ಜಮೀನಿನ ಸುತ್ತ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಹಾಗೂ ಆನೆಯ ಚಲನವಲನದ ಬಗ್ಗೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾವರ್ಜನಿಕರು ಗದ್ದಲಮಾಡದೆ ಗುಂಪುಗೂಡದೆ ಇದ್ದರೆ ಆನೆ ಸುಮ್ಮನಿದ್ದು ರಾತ್ರಿ ವಾಪಸ್ಸಾಗಲಿದೆ ಅದಕ್ಕಾಗಿ ಜನರು ಸಹಕರಿಸಬೇಕೆಂದರು.

ಇಲ್ಲವಾದಲ್ಲಿ ಆನೆ ಕೆರಳಿ ಓಡಾಡಿ ವಿನಾಕರಣ ಬೆಳೆ ನಾಶ ಹೆಚ್ಚಾಗಲಿದೆ ಅದಕ್ಕಾಗಿ ಜನರು ಸಹಕರಿಸಬೇಕೆಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!