Wednesday, November 18, 2026

ಪ್ರಾಯೋಗಿಕ ಆವೃತ್ತಿ

ಕೆಂಪೇಗೌಡರು ಒಂದು ಜಾತಿಗೆ ಸೀಮಿತರಾಗಿರಲಿಲ್ಲ : ಚಿಕ್ಕತಿಮ್ಮೇಗೌಡ

ಕೆಂಪೇಗೌಡರು ಒಂದು ಜಾತಿಗೆ ಸೀಮಿತರಾಗಿರಲಿಲ್ಲ, ಅವರು ಸಮಾಜಮುಖಿಯಾಗಿ ಚಿಂತಿಸುತ್ತಿದ್ದರು ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ ತಿಳಿಸಿದರು.

ಮದ್ದೂರು-ಮಳವಳ್ಳಿ ಮುಖ್ಯರಸ್ತೆಯ ಮದ್ದೂರು ಬಸ್ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ ಗೆಳೆಯರ ಬಳಗದ ವತಿಯಿಂದ 514 ನೇ ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಪ್ಪನಮನ ಮಾಡುವ ಮೂಲಕ ಚಾಲನೆ ನೀಡಿದರು.

ಕೆಂಪೇಗೌಡರ ಆಳ್ವಿಕೆಯಲ್ಲಿ ಹಲವಾರು ಕೆರೆ-ಕಟ್ಟೆ, ಕೋಟೆಗಳ ನಿರ್ಮಾಣವಾಗಿದೆ, ನಾಡಿಗೆ ಅವರ ಕೊಡುಗೆ, ಸ್ಮಾರಕಗಳ ಜೀರ್ಣೋದ್ದಾರ ಕಲೆ, ಸಾಹಿತ್ಯ, ಸಹಬಾಳ್ವೆ ಮತ್ತು ಜನ ಜೀವನದ ವಿಧಾನಕ್ಕೆ ಅವರು ಒತ್ತು ನೀಡಿದ್ದರು ಎಂದರು.

ಹಿರಿಯ ಮುಖಂಡ ಆಲಭುಜನಹಳ್ಳಿ ಎ.ಪಿ.ರಾಜಣ್ಣ ಮಾತನಾಡಿ, ಕೆಂಪೇಗೌಡರು ಜಾತಿ ವ್ಯವಸ್ಥೆಯಿಂದ ಹೊರಬಂದು ಹಿಂದುಳಿದ ಬದುಕುಗಳಿಗೆ ಪ್ರೇರಣೆಯಾಗಿದ್ದರು. ಅಂತಹ ವ್ಯಕ್ತಿಯ ಜಯಂತೋತ್ಸವವನ್ನು ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಇವರ ಆದರ್ಶ ಯುವಕರಿಗೆ ಮಾದರಿಯಾಗಬೇಕೆಂದು ತಿಳಿಸಿದರು.

ಸಾಮಾಜಿಕ ಚಿಂತಕ ಅಣ್ಣೂರು ಜಗದೀಶ್ ಮಾತನಾಡಿ, ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಮಹಾನಗರವನ್ನು ಹುಟ್ಟು ಹಾಕುವ ಮೂಲಕ ಕರುನಾಡಿನ ಅಸ್ತಿತ್ವಕ್ಕೆ ಅಡಿಪಾಯ ಹಾಕಿಕೊಟ್ಟಿರುವ ನಾಡಪ್ರಭು ಕೆಂಪೇಗೌಡರ ಕೀತರ್ಿ ಮತ್ತು ಸಾಧನೆಗಳನ್ನು ಅಜರಾಮರಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಜಾರಿಯಾಗಬೇಕೆಂದರು.

500 ವರ್ಷದ ಹಿಂದೆಯೇ ಸಾಮಾಜಿಕ ನ್ಯಾಯ ಪರಂಪರೆ ಹುಟ್ಟು ಹಾಕಿದ ಜಾತ್ಯಾತೀತ ನಾಯಕರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇದಕ್ಕೆ ಸಕರ್ಾರದ ಸೂಕ್ತ ಸಹಕಾರವೂ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ಎ.ಪಿ.ರಾಜಣ್ಣ, ಮೈಕ್ಸೆಟ್ ಸುರೇಶ, ಮಡೇನಹಳ್ಳಿ ಶ್ರೀನಿವಾಸ್, ಜಿ.ಸಿ.ಮಾದೇಗೌಡ, ಅರವಿಂದ್ಬಾಬು, ಚಂದು, ಹೊಟೇಲ್ ಮಹದೇವು, ವೆಂಕಟೇಶ್, ಪುಟ್ಟಸ್ವಾಮಿ, ಚೇತನ್, ವಿವೇಕ್, ಕಡಿಲುವಾಗಿಲು ಪುಟ್ಟೇಗೌಡ, ದೇಶಿಗೌಡ, ಗುಡಿಗೆರೆ ಬಸವರಾಜು ಸೇರಿದಂತೆ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ