Saturday, May 18, 2024

ಪ್ರಾಯೋಗಿಕ ಆವೃತ್ತಿ

ಮೊನ್ನೆಯವರೆಗೂ ರಾಜ್ಯಗಳಿಗೆ ಅಕ್ಕಿ ಮಾರಾಟಕ್ಕೆ ಅವಕಾಶವಿತ್ತು, ಇದ್ಯಾವಾಗ “ಹೊಸ ನೀತಿ” ಬಂತು? ; ಕಾಂಗ್ರೆಸ್ ಪ್ರಶ್ನೆ

ಮೊನ್ನೆಯವರೆಗೂ ರಾಜ್ಯಗಳಿಗೆ ಅಕ್ಕಿ ಮಾರಾಟಕ್ಕೆ ಅವಕಾಶವಿತ್ತು, ಇದ್ಯಾವಾಗ “ಹೊಸ ನೀತಿ” ಬಂತು? ಎಂದು ಬಿಜೆಪಿ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಕಿಡಿಕಾರಿದೆ.

ಅಕ್ಕಿ ನೀಡಲು ಒಪ್ಪಿದ ಪ್ರಾದೇಶಿಕ ಅಧಿಕಾರಿಗಳಿಗೆ “ಹೊಸ ನೀತಿ” ಗೊತ್ತಿರಲಿಲ್ಲವಂತೆ, ಹಾಗಾಗಿ ಒಪ್ಪಿದ್ದರಂತೆ! ಇದು FCI ಸ್ಪಷ್ಟನೆ! RSS ಕಚೇರಿಯಲ್ಲಿ ರೂಪಿಸುವ ಹೊಸ ನೀತಿ ಅಧಿಕಾರಿಗಳಿಗೆ ಗೊತ್ತಾಗಲು ಸಾಧ್ಯವಿಲ್ಲ ಅಲ್ಲವೇ ? ಎಂದು ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಲೇವಡಿ ಮಾಡಿದೆ.

“>

ನಿಯಮದಂತೆ ರಾಜ್ಯ ಸರ್ಕಾರಕ್ಕೆ ಅಕ್ಕಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿತ್ತು FCI, ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಮರುದಿನವೇ ರಾಜ್ಯ ಸರ್ಕಾರಗಳಿಗೆ ಅಕ್ಕಿ ಮಾರಾಟ ಮಾಡುವುದಿಲ್ಲ ಎಂದಿದೆ. ಖಾಸಗಿಯವರಿಗೆ ಮಾರಾಟ ಮಾಡಲು ಮಾತ್ರ ಒಪ್ಪಿಗೆ! ನೀಡಿದೆ, ನರೇಂದ್ರ ಮೋದಿ ಅವರೇ, ಬಡವರ ಪಾಲಿನ ಅಕ್ಕಿಯನ್ನೂ ಅದಾನಿ ಅಂಬಾನಿ ಹೊಟ್ಟೆಗೆ ಹಾಕಲು ಹೊರಟಿರಾ? ಎಂದು ಪ್ರಶ್ನ ಮಾಡಿದೆ.

ಜಾಹೀರಾತು

ಕಳೆದ 6 ವರ್ಷದಲ್ಲಿ 25,000 ಮೆಟ್ರಿಕ್ ಟನ್ ದವಸ ಧಾನ್ಯಗಳು ಕೇಂದ್ರದ ಗೋದಾಮಿನಲ್ಲಿ ನಷ್ಟವಾಗಿದೆ. ಮೈತುಂಬ ದ್ವೇಷ ರಾಜಕಾರಣವನ್ನೇ ತುಂಬಿಕೊಂಡಿರುವ ಮೋದಿಯವರಿಗೆ ದವಸಧಾನ್ಯಗಳನ್ನು ಜನರ ಹಸಿವು ನೀಗಿಸಲು ನೀಡುವುದಕ್ಕಿಂತ ಇಲಿ ಹೆಗ್ಗಣಗಳ ಹೊಟ್ಟೆ ತುಂಬಿಸುವಲ್ಲಿಯೇ ಹೆಚ್ಚಿನ ಆಸಕ್ತಿ ಇದ್ದಂತಿದೆ. ಆಹಾರ ಹಕ್ಕನ್ನು ನಿರಾಕರಿಸುವುದು ಸಂವಿಧಾನ ವಿರೋಧಿ ನಡೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!